ಸುದ್ದಿಮೂಲ ವಾರ್ತೆ
ಮಾಲೂರು, ಜೂ 28 : ಚುನಾಯಿತ ಪ್ರತಿನಿಧಿಗಳು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೆ ಅಧಿಕಾರಿಗಳ ಸಹಕಾರ ಅತಿ ಮುಖ್ಯ. ಅಭಿವೃದ್ಧಿಯಲ್ಲಿ ಮಾದರಿ ತಾಲ್ಲೂಕ್ಕಾನ್ನಾಗಿ ಮಾಡಲು ಅಧಿಕಾರಿಗಳು ಸಹಕರಿಸಬೇಕೆಂದು ಶಾಸಕ ಕೆ. ವೈ ನoಜೇಗೌಡ ಹೇಳಿದರು.
ತಾಲ್ಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಹಮ್ಮಿಕೊoಡಿದ್ದ ಶುದ್ಧಕುಡಿಯುವ ನೀರಿನ ಘಟಕದ ಕಾಮಗಾರಿಗೆ ಗುದ್ದಲಿ ಪೂಜೆ, ನೂತನ ಸಮುದಾಯಭವನ ಉದ್ಘಾಟನೆ ಹಾಗೂ ಎರಡನೇ ಬಾರಿಗೆ ಶಾಸಕರಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಾಲೂರು ತಾಲ್ಲೂಕಿನಲ್ಲಿ ಹೆಚ್ಚು ಕಂದಾಯ ಬರುವ ಗ್ರಾಮಪಂಚಾಯತಿ ಇದ್ದು ಆದಾಯಕ್ಕೆ ತಕ್ಕಂತೆ ಅಭಿವೃದ್ಧಿಯಾಗಿರುವ ಗ್ರಾಮ ಪಂಚಾಯತಿ ಶಿವಾರಪಟ್ಟಣ ಗ್ರಾಮ ಪಂಚಾಯತಿಯಾಗಿದೆ. ಈ ಪಂಚಾಯಿತಿಯಲ್ಲಿ ಚುನಾಯಿತ ಅಧ್ಯಕ್ಷ, ಉಪಾಧ್ಯಕ್ಷ ಸದ್ಯಸರ ಜತೆಗೆ ಅಧಿಕಾರಿಗಳು ಒಳ್ಳೆ ಸಹಕಾರ ಕೊಡುತ್ತಿದ್ದಾರೆ. ಅದರಂತೆ ಎಲ್ಲಾ ಸದ್ಯಸರು ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳಲ್ಲಿ ಮುಂದಾಗಿ ನನ್ನ ಸಲಹೆ ಸಹಕಾರವನ್ನು ಪಡೆದುಕೊಂಡಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ತಿಳಿಸಿದರು.
ಹಿಂದೆ ನಾನು ಶಾಸಕನಾಗಿದ್ದಾಗ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿದ್ದರಿಂದ ನಾನು ಏನು ಮಾಡಲು ಆಗಲಿಲ್ಲ. ಈಗ ರಾಜ್ಯದಲ್ಲಿ ನಮ್ಮದೇ ಆದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದರಿಂದ ತಾಲ್ಲೂಕನ್ನು ಹೆಚ್ಚು ಅಭಿವೃದ್ಧಿ ಮಾಡುತ್ತೇನೆ. ನಾನು ಎರಡನೇ ಬಾರಿಗೆ ಶಾಸಕನಾಗಲು ಶಿವಾರಪಟ್ಟಣದ ನಮ್ಮ ಮುಖಂಡರು ತುಂಬಾ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಶಿಲ್ಪ ಕಲೆಗಳ ತವರೂರಾದ ಶಿವಾರಪಟ್ಟಣದ ಅಭಿವೃದ್ಧಿಗೆ 10ಕೋಟಿ ಅನುದಾನ ತರಲಾಗಿತ್ತು ಎಂದರು.
ಮಾಸ್ತಿ ವೆಂಕಟೇಶ್ ಅಯ್ಯoಗಾರ್ ರವರು ಮಾಸ್ತಿಯಲ್ಲಿ ಜನಿಸಿ, ವಿದ್ಯಾಬ್ಯಾಸ ಮಾಡಿದ್ದು ಶಿವಾರ ಪಟ್ಟಣದಲ್ಲಿ. ಆದ್ದರಿಂದ ಮಾಸ್ತಿ ಮತ್ತು ಶಿವಾರಪಟ್ಟಣವನ್ನು ಹೆಚ್ಚು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಗ್ರಾ. ಪಂ. ಅಧ್ಯಕ್ಷ ಮುನಿರತ್ನಮ್ಮ, ಉಪಾಧ್ಯಕ್ಷೆ ಉಷಾ ರಘುನಾಥ್ , ಸದ್ಯಸರಾದ ಜಗನಾಥಚಾರಿ, ನಾರಾಯಣಸ್ವಾಮಿ, ಮುನೇಗೌಡ, ರಾಧಮ್ಮ, ತಿಮ್ಮಯ್ಯ, ಅನಂತ್ ನಾಯಕ್, ಲೋಕೇಶ್, ಮಹಾದೇವ್ ಪಾಂಚಾಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.