ಸುದ್ದಿಮೂಲ ವಾರ್ತೆ ಬೆಂಗಳೂರು, ನ.10:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡುತ್ತಿಿರುವ ವಿಡಿಯೋಗಳು ಬಹಿರಂಗಗೊಂಡ ಹಿನ್ನೆೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತನಿಖೆಗೆ ಉನ್ನತ ಸಮಿತಿ ರಚಿಸಿದೆ. ಅಲ್ಲದೆ ಇಬ್ಬರು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕ ಮ್ಯಾಾಗೇರಿ ಹಾಗೂ ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿಿ ಅವರನ್ನು ಅಮಾನತುಗೊಳಿಸಲಾಗಿದೆ. ಮುಖ್ಯ ಅಧೀಕ್ಷಕ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ರಾಜ್ಯ ಕಾರಾಗೃಹಗಳ ಪ್ರಧಾನ ಕಚೇರಿಯಲ್ಲಿ ಕಾರಾಗೃಹಗಳಲ್ಲಿ ಆಡಳಿತ ಮತ್ತು ಭದ್ರತೆ ಕುರಿತಂತೆ ಅಧಿಕಾರಿಗಳ ಜೊತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಸಭೆ ನಡೆಸಿದ ಬಳಿಕ ಅಮಾನತು ಆದೇಶ ಪ್ರಕಟಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ 5 ಸಾವಿರ ಕೈದಿಗಳಿದ್ದಾರೆ. ಇವರಲ್ಲಿ ಸಿನಿಮಾ ನಟರು ಇರುವುದರಿಂದ ಈ ಪ್ರಕರಣದ ತನಿಖೆಯನ್ನು ಉನ್ನತ ಸಮಿತಿಗೆ ವಹಿಸಲಾಗಿದೆ ಎಂದರು.
ಮೂವರು ಅಧಿಕಾರಿಗಳ ಹೊಣೆ:
ಪರಪ್ಪನ ಅಗ್ರಹಾರ ಕಾರಾಗೃಹ ಘಟನೆಯ ಜವಾಬ್ದಾಾರಿಯನ್ನು ಮುಖ್ಯ ಅಧೀಕ್ಷಕ, ಅಧೀಕ್ಷಕ ಹಾಗೂ ಸಹಾಯಕ ಅಧೀಕ್ಷಕರ ಮೇಲೆ ಹೊರಿಸಲಾಗಿದೆ. ಇನ್ನು ಮುಂದೆ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರನ್ನಾಾಗಿ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ವಿಶೇಷ ಸವಲತ್ತು ನೀಡುತ್ತಿಿರುವ ಎಲ್ಲ ವಿಡಿಯೋಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಕೆಲವು ಮೂರು ವರ್ಷಗಳ ಹಿಂದಿನ ವಿಡಿಯೋಗಳಾಗಿವೆ. ಇನ್ನು ಕೆಲವು ಎರಡು ಮೂರು ತಿಂಗಳ ಹಿಂದಿನ ವಿಡಿಯೋಗಳಾಗಿವೆ. ಹೀಗಾಗಿ ಎಲ್ಲ ವಿಡಿಯೋಗಳ ಬಗ್ಗೆೆ ತನಿಖೆ ನಡೆಸಲಾಗುವುದು. 2023ರಿಂದ ಇಲ್ಲಿವರೆಗೆ ಯಾರು ಯಾರು ಜೈಲು ಅಧೀಕ್ಷಕರಾಗಿದ್ದರು ಎನ್ನುವ ಮಾಹಿತಿ ಪಡೆಯಾಗಿದೆ ಎಂದರು.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿಗಳು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕಾರಾಗೃಹಗಳಿಗೆ ಭೇಟಿ ನೀಡಿ, ಪ್ರಧಾನ ಕಚೇರಿಗೆ ವರದಿ ನೀಡಬೇಕು ಎಂದು ಸಚಿವರು ಹೇಳಿದರು.
ಕಾರಾಗೃಹಗಳಲ್ಲಿ ಸಿಬ್ಬಂದಿ ಕೊರತೆ ಇದೆ. 197 ವಾರ್ಡ್, 22 ಇನ್ಸ್ ಸ್ಪೆೆಕ್ಟರ್, 3 ಜನ ಅಸಿಸ್ಟೆೆಂಟ್ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. 983 ವಾರ್ಡ್, 17 ಜನ ಜೈಲರ್ಸ್ಗಳ ನೇಮಕಾತಿಗೆ ಪ್ರಸ್ತಾಾವನೆ ಬಂದಿದೆ. ಈ ಬಗ್ಗೆೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇಡೀ ರಾಜ್ಯದ ಕಾರಾಗೃಹಗಳ ಪರಿಶೀಲನೆ:
ಕೇವಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಲ್ಲದೆ ರಾಜ್ಯದ ಎಲ್ಲ ಕಾರಾಗೃಹಗಳನ್ನು ಪರಿಶೀಲನೆ ಮಾಡಿ, ಸಮಗ್ರವಾದ ವರದಿಯನ್ನು ಕೊಡಬೇಕು ಎಂದು ಉನ್ನತ ಸಮಿತಿಗೆ ಸೂಚಿಸಲು ನಿರ್ಧರಿಸಲಾಗಿದೆ. . ಜೈಲಿನಲ್ಲಿ ಸಿಸಿಟಿವಿಗಳು ಕೆಲಸ ಮಾಡುತ್ತಿಿಲ್ಲ ಎಂಬ ಮಾಹಿತಿ ಕೂಡ ಇದೆ. ಜೈಲಿನಲ್ಲಿರುವ ಎಲ್ಲ ಲೋಪದೋಷಗಳ ಬಗ್ಗೆೆ ತನಿಖೆ ನಡೆಸಿ ವರದಿ ನೀಡುವಂತೆ ಸಮಿತಿಗೆ ತಿಳಿಸಲಾಗುವುದು. ಆ ವರದಿಯನ್ನು ಬಹಿರಂಗಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ನಿಗಾ ಕೇಂದ್ರ ಸ್ಥಾಾಪನೆ:
ರಾಜ್ಯದ ಎಲ್ಲಾಾ ಕಾರಾಗೃಹಗಳಲ್ಲಿನ ಚಟುವಟಿಕೆಗಳನ್ನು ಕಾರಾಗೃಹ ಪ್ರಧಾನ ಕಚೇರಿಯಿಂದ ನಿಗಾವಹಿಸಲು ಕಮಾಂಡ್ ಸೆಂಟರ್ ಸ್ಥಾಾಪಿಸಲಾಗುವುದು. ಹಿರಿಯ ಅಧಿಕಾರಿಗಳು, ಡಿಜಿ ಅಥವಾ ಎಡಿಜಿಪಿ ಕಾರಾಗೃಹ ಅವರು ನಿಗಾವಹಿಸುವ ವ್ಯವಸ್ಥೆೆಯನ್ನು ಮಾಡಲಾಗುವುದು. ಎಲ್ಲ ಕಾರಾಗೃಹಗಳ ಸಿಸಿಟಿವಿಗಳ ತಾಂತ್ರಿಿಕ ತಪಾಸಣೆ ನಡೆಸಲಾಗುವುದು. ಕೆಲಸ ನಿರ್ವಹಿಸದ ಸಿಸಿಟಿವಿಗಳನ್ನು ಬದಲಾಯಿಸಿ ಹೊಸದಾಗಿ ಅಳವಡಿಸಿ ಅವುಗಳನ್ನು ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ನಿಯಂತ್ರಣ ಮಾಡಲಾಗುವುದು ಸಚಿವ ಪರಮೇಶ್ವರ್ ಹೇಳಿದರು.
ತಾಂತ್ರಿಿಕ ತಂಡ ರಚನೆ ಮಾಡಿ ಕಾರಾಗೃಹಗಳಲ್ಲಿ ಸಿಗ್ನಲ್ ಬರುವ ಕಡೆ ಸಿಗ್ನಲ್ ಬಾರದಂತೆ ಕ್ರಮ ವಹಿಸಲಾಗುವುದು. ಯಾವುದೇ ೆನ್ ಒಳಗೆ ತೆಗೆದುಕೊಂಡು ಹೋದರು ಕೆಲಸ ಮಾಡದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಕಾರಾಗೃಹಗಳಲ್ಲಿ ಸಿಸಿಟಿವಿ ಅಳವಡಿಸಲು 2 ಕೋಟಿ ರೂ. ಹತ್ತು ಟವರ್ ಹಾಕಿಸಲು ಸಚಿವ ಸಂಪುಟ 15 ಕೋಟಿ ರೂ. ಮಂಜೂರು ಮಾಡಿದೆ. ಕೂಡಲೇ ಟೆಂಡರ್ ಕರೆದು, ಕೆಲಸ ಆರಂಭಿಸಲಾಗುವುದು ಎಂದು ಹೇಳಿದರು.
ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್ಚಂದ್ರ, ಬೆಂಗಳೂರು ನಗರ ಪೊಲೀಸ್ ಅಯುಕ್ತ ಸೀಮಾಂತ್ ಕುಮಾರ್, ಐಎಸ್ಡಿಿ ವಿಭಾಗದ ಎಡಿಜಿಪಿ ಚಂದ್ರಶೇರ್ಖ ಇದ್ದರು.
ಉನ್ನತ ಸಮಿತಿಯಲ್ಲಿ ಯಾರು ಇದ್ದಾರೆ
ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಎಲ್ಲ ಜೈಲುಗಳಲ್ಲಿರುವ ಲೋಪ ದೋಷ ಹಾಗೂ ಕೈದಿಗಳಿಗೆ ನೀಡುತ್ತಿಿರುವ ಆತಿಥ್ಯ ಕುರಿತು ಪರಿಶೀಲನೆ ಮಾಡಲು ಸರ್ಕಾರ ರಚಿಸುವ ಉನ್ನತ ಸಮಿತಿಯಲ್ಲಿ ಕಾನೂನು ಸುವ್ಯವಸ್ಥೆೆ ಎಡಿಜಿಪಿ ಹಿತೇಂದ್ರ ಅವರನ್ನು ಮುಖ್ಯಸ್ಥರನ್ನಾಾಗಿ ಮಾಡಲಾಗುವುದು. ಐಜಿಪಿ ಸಂದೀಪ್ ಪಾಟೀಲ್, ಎಸ್ಪಿಿ ಅಮರನಾಥ್ ರೆಡ್ಡಿಿ, ಎಸ್ಪಿಿ ರಿಷ್ಯಾಾಂತ್ ಅವರಿಗೂ ಜವಾಬ್ದಾಾರಿ ನೀಡಲಾಗುವುದು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಿಗಳು ಸಮಿತಿಯ ಸಹ ಸದಸ್ಯರಾಗಿರುತ್ತಾಾರೆ. ಸಮಿತಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
ಉನ್ನತ ಸಮಿತಿ ನೀಡುವ ವರದಿ ಆಧರಿಸಿ ಘಟನೆಯಲ್ಲಿ ಯಾವ ಅಧಿಕಾರಿಗಳು ಭಾಗಿಯಾಗಿದ್ದರೂ ಅವರನ್ನು ವಿಚಾರಣೆ ನಡೆಸಿ ಸೇವೆಯಿಂದ ವಜಾ ಮಾಡುವ ಅಥವಾ ಅಮಾನತುಗೊಳಿಸುವ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನಟ ಧನ್ವೀರ್ ವಿಚಾರಣೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡುತ್ತಿಿರುವ ಬಗ್ಗೆೆ ವಿಡಿಯೋ ವೈರಲ್ ಆದ ಘಟನೆ ಹಿನ್ನೆೆಲೆಯಲ್ಲಿ ಸಿಸಿಬಿ ಪೊಲೀಸರು ನಟ ಧನ್ವೀರ್ರನ್ನು ಸೋಮವಾರ ವಿಚಾರಣೆ ನಡೆಸಿದರು.
ಧನ್ವೀರ್ ಅವರು ವಿಡಿಯೋ ವೈರಲ್ ಮಾಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆೆಲೆಯಲ್ಲಿ ಸಿಸಿಬಿ ಪೊಲೀಸರು ಅವರ ಮೊಬೈಲ್ಗಳನ್ನು ವಶಕ್ಕೆೆ ಪಡೆದು ಪರಿಶೀಲಿಸಿದ್ದಾರೆ, ಆದರೆ ಅದರಲ್ಲಿ ಯಾವುದೇ ವೀಡಿಯೊಗಳು ಸಿಕ್ಕಿಿಲ್ಲ ಎಂದು ವರದಿಯಾಗಿದೆ. ಮತ್ತೆೆ ವಿಚಾರಣೆಗೆ ಕರೆದಾಗ ಬರುವಂತೆ ತಿಳಿಸಿ ಬಿಟ್ಟಿಿದ್ದಾರೆ ಎಂದು ತಿಳಿದು ಬಂದಿದೆ.

