ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.30:
ಕರ್ನಾಟಕ ವಿಧಾನ ಪರಿಷತ್ತಿಿಗೆ 2026ರ ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆೆಸ್ ಅಭ್ಯರ್ಥಿಗಳ ಪಟ್ಟಿಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ವಿಧಾನ ಪರಿಷತ್ತಿಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆೆ ಮಾಡಿ ಕಳುಹಿಸಿದ ಪಟ್ಟಿಿಗೆ ಅನುಮೋದನೆ ನೀಡಿದ್ದಾರೆ.
ಪಶ್ಚಿಿಮ ಪದವೀಧರ ಕ್ಷೇತ್ರದ ಕಾಂಗ್ರೆೆಸ್ ಅಭ್ಯರ್ಥಿಯಾಗಿ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರ ಕ್ಷೇತ್ರಕ್ಕೆೆ ಶಶಿ ಹುಲಿಕುಂಟೆ ಮಠ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆೆ ಶರಣಪ್ಪ ಮಟ್ಟೂರ್ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಪುಟ್ಟಣ್ಣ ಅವರನ್ನು ಅಭ್ಯರ್ಥಿಯನ್ನಾಾಗಿ ಅಧಿಕೃತಗೊಳಿಸಲಾಗಿದೆ.
ಪಶ್ಚಿಿಮ, ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆೆ 2020ರಲ್ಲಿ ಚುನಾವಣೆ ನಡೆದಿತ್ತು. 2026ರ ಜೂನ್ ಅಥವಾ ಜುಲೈನಲ್ಲಿ ಅವಧಿ ಮುಗಿಯಲಿದ್ದು ನವೆಂಬರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆೆಸ್ ಚುನಾವಣೆಗೆ ಇನ್ನು 11 ತಿಂಗಳು ಇರುವ ಮೊದಲೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಬಾಕ್ಸ್
ಬಿಜೆಪಿ ತೊರೆದು ಕಾಂಗ್ರೆೆಸ್ ಸೇರಿದ ಲಿಂಬಿಕಾಯಿ
ಮೋಹನ್ ಲಿಂಬಿಕಾಯಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. 2010ರಲ್ಲಿ ಅವರು ಪಶ್ಚಿಿಮ ಪದವೀಧರರ ಕ್ಷೇತ್ರದಿಂದ ಜಯಗಳಿಸಿದ್ದರು. ಬಳಿಕ ಅವರಿಗೆ ನಂತರ ನಡೆದ 2014ರ ಚುನಾವಣೆಯಿಂದ ಟಿಕೆಟ್ ನೀಡಲಿಲ್ಲ. 2020ರಲ್ಲೂ ಕೊಡಲಿಲ್ಲ 2022ರಲ್ಲಿ ಅಂದಿನ ಸಿಎಂ ಆಗಿದ್ದ ಬಸವರಾಜ ಬೊಮ್ಮಾಾಯಿ ಅವರು ನೀವೆ ಅಭ್ಯರ್ಥಿ ಎಂದಿದ್ದರು. ಚುನಾವಣೆ ಬರುತ್ತಲೇ ಬಸವರಾಜ ಹೊರಟ್ಟಿಿಗೆ ಟಿಕೆಟ್ ಕೊಟ್ಟರು. ಇದರಿಂದ ನನ್ನ ಮನಸ್ಸಿಿಗೆ ಬೇಜಾರಾಗಿದೆ. ಹೀಗಾಗಿ ಕಾಂಗ್ರೆೆಸ್ ಸೇರಿದ್ದರು. ಈಗ ಅವರು ಕಾಂಗ್ರೆೆಸ್ನಿಂದ ಟಿಕೆಟ್ ಪಡೆದಿದ್ದಾರೆ.
ಅಗ್ನೇಯ ಪದವಿಧರರ ಕ್ಷೇತ್ರದಿಂದ ಶಶಿ ಹುಲಿಕುಂಟೆ ಮಠ ಎಂಬ ಯುವ ಕಾಂಗ್ರೆೆಸ್ ನಾಯಕನನ್ನು ಕಾಂಗ್ರೆೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಕಣಕ್ಕಿಿಳಿಸುತ್ತಿಿದೆ. ಶಶಿ ಹುಲಿಕುಂಟೆ ಮಠ ತುಮಕೂರಿನ ಯುವ ಕಾಂಗ್ರೆೆಸ್ ಘಟಕದ ಜಿಲ್ಲಾಧ್ಯಕ್ಷ. ಇದೇ ಮೊದಲ ಭಾರಿಗೆ ವಿಧಾನ ಪರಿಷತ್ ಚುನಾವಣಾ ಅಖಾಡಕ್ಕಿಿಳಿಯುತ್ತಿಿದ್ದಾರೆ.
2020ರಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಶರಣಪ್ಪ ಮಟ್ಟೂರ್ ಅವರಿಗೆ ಕಾಂಗ್ರೆೆಸ್ ಮತ್ತೊೊಮ್ಮೆೆ ಟಿಕೆಟ್ ನೀಡಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದಿರುವ ಪುಟಣ್ಣ ಅವರಿಗೆ ಕಾಂಗ್ರೆೆಸ್ ಟಿಕೆಟ್ ನೀಡಿದೆ. ಇವರು ಆರಂಭದಲ್ಲಿ ಜೆಡಿಎಸ್ನಿಂದ ಗೆಲ್ಲುತ್ತಿಿದ್ದರು. ಬಳಿಕೆ ಜೆಡಿಎಸ್ ತೊರೆದು 2020ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೇರಿದರು. ಗೆದ್ದು ವಿಧಾನ ಪರಿಷತ್ ಸದಸ್ಯರಾಗಿದ್ದರು. ಬಳಿಕ ಬಿಜೆಪಿ ತೊರೆದು 2023ರಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಕಾಂಗ್ರೆೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದು ಸೋತಿದ್ದರು. ಜೆಡಿಎಸ್ನಿಂದ ವಕೀಲ ರಂಗನಾಥ್ ಈ ಬಾರಿಯೂ ಪುಟ್ಟಣ್ಣ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

