ಸುದ್ದಿಮೂಲ ವಾರ್ತೆ ಜಾಲಹಳ್ಳಿ, ನ.05:
ಮಕ್ಕಳು ಓದು ಮತ್ತು ಅಂಕಗಳಿಗೆ ಸೀತವಾಗದೆ ಸೂಕ್ತ ಪ್ರತಿಭೆ ಹೊರ ಹಾಕುವ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದಲ್ಲಿ ಹೆಚ್ಚೆೆಚ್ಚು ತೊಡಗಿಸಿಕೊಳ್ಳಬೇಕು ಎಂದು ಗ್ರಾಾ.ಪಂ.ಅಧ್ಯಕ್ಷ ಭೀಮಣ್ಣ ಬಿರಾದಾರ ಸಲಹೆ ನೀಡಿದರು.
ಸಮೀಪದ ಅಮರಪುರ ಗ್ರಾಾಮದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಜಾಲಹಳ್ಳಿಿ ಪೂರ್ವ ಕ್ಲಸ್ಟರ್ ವಿಭಾಗದ ಸಹಭಾಗಿತ್ವದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಪ್ರತಿಭೆ ಹೊರಹಾಕಲು ಇದು ಅತ್ಯುತ್ತಮ ವೇದಿಕೆಯಾಗಿದೆ’ ಎಂದರು. ಶಿಕ್ಷಣ ಸಂಯೋಜಕ ರಾಜನಗೌಡ ಮಾತನಾಡಿ, ಹಿಂದೆ ಪ್ರತಿಭೆ ಪ್ರದರ್ಶಿಸಲು ಅವಕಾಶದ ಕೊರತೆ ಇತ್ತು. ವಿದ್ಯಾಾರ್ಥಿಗಳು ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಿಂತ ಭಾಗವಹಿಸುವಿಕೆ ಮುಖ್ಯ’ ಎಂದು ಹೇಳಿದರು. ಇಂತಹ ಸಣ್ಣ ಗ್ರಾಾಮದಲ್ಲಿ ಕೂಡ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವುದು ಸಂತೋಷದಾಯಕ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶರಣಪ್ಪ ಮಾಲಿಪಾಟೀಲ್, ಉಪಾಧ್ಯಕ್ಷೆ ಮುಮ್ತಾಾಜ್ ಬೇಗಂ, ಸಿಆರ್ಸಿ ಮಂಜುಳಾ ಹೊಸಮನಿ, ಗ್ರಾಾ.ಪಂ ಪಿಡಿಒ ವೆಂಕಟೇಶ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮನಗೌಡ ಪಾಟೀಲ್, ಶಿವರಾಜ ಕೋರಿ, ಶಂಕ್ರಪ್ಪ, ಅಮರಣ್ಣ, ಬಸವನಗೌಡ, ಅರುಣ ಮದ್ರಿಿಕಿ ಹಾಜರಿದ್ದರು. ಮುಖ್ಯಶಿಕ್ಷಕ ಗಂಗಾರೆಡ್ಡಿಿ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.
‘ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ’

