ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.13:
ಪಟ್ಟಣದಲ್ಲಿ ಡಿ.22ರಂದು ನಡೆಯಲಿರುವ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ 136ನೆಯ ಜಯಂತ್ಯುತ್ಸವ ಸಮಾರಂಭದಲ್ಲಿ ಸದ್ಭಕ್ತರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕು ಎಂದು ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಡೋಣಗಾಪೂರ ಗ್ರಾಾಮದ ಮಹಾದೇವ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಸವಜ್ಯೋೋತಿ ಪಾದಯಾತ್ರೆೆ ಸ್ವಾಾಗತ ಕಾರ್ಯಕ್ರಮದ ಸಾನ್ನಿಿಧ್ಯ ವಹಿಸಿ ಅವರು ಮಾತನಾಡಿದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಿಧ್ಯದಲ್ಲಿ ಪೂಜ್ಯರ ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿಿದೆ. ಪ್ರವಚನ, ವಿವಿಧ ಸ್ಪರ್ಧೆ, ಪ್ರಶಸ್ತಿಿ ಪ್ರದಾನ ಸೇರಿ ವಿವಿಧ ಕಾರ್ಯಕ್ರಮಗಳು ಹಮ್ಮಿಿಕೊಳ್ಳಲಾಗುತ್ತಿಿದೆ. ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಎಲ್ಲರನ್ನು ಸಮಾನರಾಗಿ ಕಂಡರು. ಅವರ ವಿಚಾರಧಾರೆಯನ್ನು ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರು ನಿಜ ಜೀವನದಲ್ಲಿ ಆಚರಣೆಗೆ ತಂದರು. ಪೂಜ್ಯರ ಕೊಡುಗೆ ಇಂದಿನ ಯುವ ಸಮೂಹ ತಿಳಿದು ಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಾಮೀಜಿ, ಬಸವಲಿಂಗ ಸ್ವಾಾಮೀಜಿ, ತಿಪ್ಪೇರುದ್ರ ಸ್ವಾಾಮೀಜಿ, ಶಿವಬಸವ ಸ್ವಾಾಮೀಜಿ, ದೇವಮ್ಮ ತಾಯಿ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಾಳೆ, ಗ್ರಾಾಮ ಪಂಚಾಯತಿ ಅಧ್ಯಕ್ಷ ದೀಪಕ ಕಾಂಬಳೆ, ಪಿಕೆಪಿಎಸ್ ಅಧ್ಯಕ್ಷೆ ವಿದ್ಯಾಾವತಿ ಬಸವರಾಜ ವೀರಶೆಟ್ಟ್ಟಿಿ, ಮಲ್ಲಿಕಾರ್ಜುನ ಉಪ್ಪಿಿನ್, ಬಸವರಾಜ ನಾಗಣ್ಣ ವೀರಶೆಟ್ಟೆೆ, ಚಂದ್ರಪ್ಪ ವೀರಶೆಟ್ಟೆೆ, ವಿಶ್ವನಾಥ ನಾಗಸಂಕರೆ, ವಿಶ್ವನಾಥ ಬಂಬುಳಗೆ ಸೇರಿದಂತೆ ಹಲವರು ಇದ್ದರು.
ಖೇಡ ಸಂಗಮ ಡಾ.ಚನ್ನಬಸವ ಪಟ್ಟದ್ದೇವರು ಹಿರಿಯ ಪ್ರಾಾಥಮಿಕ ಶಾಲೆಯ ಡೋಣಗಾಪುರ ಗ್ರಾಾಮದ ಮಕ್ಕಳು ವಚನ ನೃತ್ಯ ನಡೆಸಿ ಕೊಟ್ಟರು.
ಸಂಜೀವಕುಮಾರ ಮೇಂಗಾ ನಿರೂಪಿಸಿ, ವಂದಿಸಿದರು.
‘ಪಟ್ಟದ್ದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಿ’

