ಸುದ್ದಿಮೂಲವಾರ್ತೆ
ಕೊಪ್ಪಳ ಅ11:ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತಿಯ ಚಿಲವಾಡಗಿ ಗ್ರಾಮದಲ್ಲಿ ಜರುಗಿದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ನಡೆಯಿತು.
ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದ ಪ್ರಯುಕ್ತ ಮನೆ-ಮನೆಗೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ 2024-25ನೇ ಸಾಲಿನ ಕಾರ್ಮಿಕ ಆಯವ್ಯಯದಲ್ಲಿ ಕಾಮಗಾರಿ ಬೇಡಿಕೆ ಸಲ್ಲಿಸಿರೆಂದು ತಾಲೂಕ ಪಂಚಾಯತಿಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಹೇಳಿದರು.
ಅಕ್ಟೋಬರ್-30 ವರೆಗೆ ಬೇರ್ ಫೂಟ್ ಟೆಕ್ನಿಷಿಯನ್ ಗಳು, ಗ್ರಾಮ ಕಾಯಕ ಮಿತ್ರರು,ನರೇಗಾ ಸಹಾಯಕರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕೂಲಿಕಾರರ ಪ್ರತಿ ಮನೆಗೆ ಭೇಟಿ ನೀಡಿ ನರೇಗಾ ಜಾಗೃತಿ ಮೂಡಿಸಲಿದ್ದು ಎಲ್ಲಾ ಕೂಲಿಕಾರರು ಬರುವ ಆರ್ಥಿಕ ವರ್ಷದ ಕಾಮಗಾರಿಯ ಬೇಡಿಕೆಯನ್ನು ಸಲ್ಲಿಸಲು ಅವಕಾಶವಿರುತ್ತದೆ. ವೈಯಕ್ತಿಕ ಕಾಮಗಾರಿಗಳಾದ ಜಾನುವಾರು ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಮೆಕೆಶೆಡ್, ಬಚ್ಚಲಗುಂಡಿ ಮತ್ತು ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಅವಕಾಶ ಇರುತ್ತದೆ. ಮೊದಲ ಅದ್ಯತೆ ಮೇರೆಗೆ ಕಾಮಗಾರಿ ಬೇಡಿಕೆ ಸಲ್ಲಿಸಿರಿ ಇದರಿಂದ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಪಂಚಾಯತಿಗೆ ಸಹಕಾರಿಯಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಆದಯ್ಯ ಹೆರೂರು ಮಾತನಾಡಿ ಈಗಾಗಲೇ ಬೇರ್ ಫೂಟ್ ಟೆಕ್ನಿಷಿಯನ್, ಗ್ರಾಮ ಕಾಯಕ ಮಿತ್ರರು ಮತ್ತು ಗಾಮ ಪಂಚಾಯತಿ ಸಿಬ್ಬಂದಿಗಳು ಜಾಬಕಾರ್ಡ ಪರಿಶೀಲನೆ ನಿರತರಾಗಿದ್ದು ತಪ್ಪದೇ ಎಲ್ಲರೂ ಜಾಬಕಾರ್ಡ ಹೊಂದಿದ ಸದಸ್ಯರು ಮರಣ ಹೊಂದಿದ್ದಲ್ಲಿ, ವಿವಾಹವಾಗಿ ಬೇರೆ ಕಡೆ ವಾಸವಾಗಿದ್ದಲ್ಲಿ, ವಲಸೆ ಹೋಗಿದ್ದಲ್ಲಿ, ಸರ್ಕಾರಿ ನೌಕರರಾಗಿ ಸೇರಿದ್ದಲ್ಲಿ ಅಂತವರ ವಿವರವನ್ನು ನೀಡಿ ಜಾಬಕಾರ್ಡ ಅವರ ಮಾಹಿತಿ ರದ್ದುಪಡಿಸಲು ನಿಖರವಾಗಿ ಮಾಹಿತಿ ನೀಡಬೇಕೆಂದು ಕರೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಚಿದಾನಂದಪ್ಪ ಪೂಜಾರ, ಮುಕ್ಕಣ್ಣ ಗುಡಿಮುಂದಲ, ಸಿದ್ದಪ್ಪ ಹೊಸಗೇರಿ, ನಬೀಸಾಬ ಹಂಚಿನಾಳ, ಬೇರ್ ಫೂಟ್ ಟೆಕ್ನಿಷಿಯನ್ ಶಿವಾನಂದಯ್ಯ ಮಠದ, ಗ್ರಾಮ ಕಾಯಕ ಮಿತ್ರ ಮೆಹಬೂಬಿ, ಗ್ರಾಮ ಪಂಚಾಯತಿ ಸಿಬ್ಬಂದಿ ರಾಘವೇಂದ್ರ, ಎಂಬಿಕೆ ಸರೋಜಾ ಅವಾರಿ, ಮಹಿಳಾ ಕೂಲಿಕಾರರು, ಸಂಜಿವಿನಿ ಸ್ವಸಹಾಯ ಸಂಘದ ಸದಸ್ಯರು, ಕಾಯಕ ಬಂಧುಗಳು ಹಾಜರಿದ್ದರು.