ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.19
ಕರ್ನಾಟಕ ಅನುಸೂಚಿತ ಜಾತಿಗಳ ಆಯೋಗದಲ್ಲಿ ಒಬ್ಬರು ಪರಿಶಿಷ್ಟ ಪಂಗಡ ಮತ್ತು ಒಬ್ಬ ಮಹಿಳೆಯನ್ನು ಸದಸ್ಯರನ್ನಾಾಗಿ ನೇಮಿಸುವುದಕ್ಕೆೆ ಅನುವುಮಾಡಿಕೊಡುವಂತಹ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗಿಕರಣ) ವಿಧೇಯಕ 2025ಕ್ಕೆೆ ವಿಧಾನ ಪರಿಷತ್ತಿಿನಲ್ಲಿ ಅಂಗೀಕಾರ ನೀಡಲಾಯಿತು.
ಸಮಾಜ ಕಲ್ಯಾಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು, ಈ ವಿಧೇಯಕವನ್ನು ಪರ್ಯಾಲೋಚಿಸಿ, ಎಸ್ಸಿಿ ಎಸ್ಟಿಿ ಅಯೋಗದಲ್ಲಿ ಸದ್ಯ ಇಬ್ಬರು ಸದಸ್ಯರಿದ್ದಾರೆ. ಹೆಚ್ಚುವರಿಯಾಗಿ ಒಬ್ಬ ಪರಿಶಿಷ್ಟ ಪಂಗಡ ಮತ್ತು ಒಬ್ಬ ಮಹಿಳಾ ಸದಸ್ಯೆೆ ಇರಬೇಕು ಎಂದು ಬದಲಾವಣೆ ತರಲಾಗುತ್ತಿಿದೆ.
ಎಸ್ಸಿಿ ಎಸ್ಟಿಿ ಆಯೋಗವನ್ನು ಶಾಶ್ವತ ಆಯೋಗವನ್ನಾಾಗಿ ಮಾಡಲಾಗಿದೆ. ಯಾವುದೇ ಜಾತಿಗಳ ಸೇರ್ಪಡೆ ಮತ್ತು ಪಟ್ಟಿಿಯಿಂದ ಕೈಬಿಡಬೇಕು ಎಂಬ ಮನವಿಗಳು ಬರುತ್ತವೆ. ಅವುಗಳನ್ನು ಪರಿಶೀಲಿಸಿ ಕೇಂದ್ರ ಎಸ್ಸಿಿಎಸ್ಟಿಿ ಅಯೋಗದೊಂದಿಗೆ ಮಾಹಿತಿ ರವಾನಿಸುವ ಕೆಲಸ ನಡೆಯುತ್ತದೆ. ಆಯೋಗಕ್ಕ ಶಕ್ತಿಿ ತುಂಬಲು ಹೆಚ್ಚುವರಿ ಸದಸ್ಯರ ಅಗತ್ಯವಿದೆ ಎಂದರು.
ಕೆ. ಶಿವಕುಮಾರ್ ಮಾತನಾಡಿ, ಆಯೋಗಕ್ಕೆೆ ಸದಸ್ಯರ ನೇಮಕ ರಾಜಕೀಯ ನಿರಾಶ್ರಿತ ಕೇಂದ್ರ ಆಗಬಾರದು. ಆ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ಅನುಭವ ಇರುವವರ ನೇಮಕ ಅಗಬೇಕು. ಈಗಾಗಲೇ ಓಬಿಸಿ ಅಯೋಗದಲ್ಲಿ ಏನಾಗಿದೆ ಎಂಬುದನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೂ ಅಗಬಾರದು ಎಂದು ಹೇಳಿದರು.
ವಿಧೇಯಕದ ಬಗ್ಗೆೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಾಮಿ, ರವಿಕುಮಾರ್ ಶಾಸಕರಾದ ಜಕ್ಕಪ್ಪನವರ್, ಶಾಂತರಾಮ ಬುಡ್ನ ಸಿದ್ದಿ, ಶಿವಕುಮಾರ್, ರಮೇಶ್ ಬಾಬು, ಬಲ್ಕಿಿಸ್ ಭಾನು, ಹೇಮಲತಾ ನಾಯಕ್ ಮಾತನಾಡಿದರು. ಬಳಿಕ ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.
ಕೆಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರ:
ವಿಧಾನಸಭೆಯಿಂದ ಅಂಗೀಕಾರಗೊಂಡಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆೆಗಳ ತಿದ್ದುಪಡಿ ವಿಧೇಯಕಕ್ಕೆೆ ವಿಧಾನ ಪರಷತ್ತಿಿನಲ್ಲಿಯೂ ಅಂಗೀಕಾರ ನೀಡಲಾಯಿತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಧಾನ ಪರಿಷತ್ತಿಿನಲ್ಲಿ ಮಂಡಿಸಿದ ಅವರು, ಪ್ರಸ್ತುತ ಖಾಸಗಿ ವೈದ್ಯಕೀಯ ಸಂಸ್ಥೆೆಗಳು ಈ ಅಧಿನಿಯಮದಡಿ ಸೇರ್ಪಡೆಗೊಂಡಿರಲಿಲ್ಲ, ಇದರಿಂದಾಗಿ ಕೆಲವು ನಿಯಮಗಳನ್ನು ಪಾಲಿಸುವುದರಲ್ಲಿ ತೊಡಕಿತ್ತು. ಹೀಗಾಗಿ ಮಾನಸಿಕ ಆರೋಗ್ಯ ಸಂಸ್ಥೆೆಗಳನ್ನೂ ಕೂಡ ಅಧಿನಿಯಮದಡಿ ಖಾಸಗಿ ವೈದ್ಯಕೀಯ ಸಂಸ್ಥೆೆಯ ಪರಿಭಾಷೆಯೊಳಗೆ ಸೇರ್ಪಡೆಗೊಳಿಸಲಾಗುತ್ತಿಿದೆ.
ಅಲ್ಲದೆ ಖಾಸಗಿ ವೈದ್ಯಕೀಯ ಸಂಸ್ಥೆೆಗಳಿಗೆ ಕೆಪಿಎಂಇ ಸಮಿತಿಯಡಿ ನೊಂದಣಿ ಮತ್ತು ಪರವಾನಗಿ ಪಡೆಯುವ ನಿಟ್ಟಿಿನಲ್ಲಿ ವಿಳಂಬವಾಗುತ್ತಿಿದೆ ಎಂಬ ದೂರುಗಳು ಕೇಳಿಬರುತ್ತಿಿದ್ದವು. ಹೀಗಾಗಿ ತಾತ್ಕಾಾಲಿಕ ನೊಂದಣಿ ಪ್ರಮಾಣ ಪತ್ರ ಮಂಜೂರು ಮಾಡಲು ಅಥವಾ ನವೀಕರಣ ಮಾಡುವುದು ಸೇರಿದಂತೆ ವಿವಿಧ ಪ್ರಕ್ರಿಿಯೆಗಳ ಸರಳೀಕರಣಕ್ಕಾಾಗಿ ಈ ಅಧಿನಿಯಮಕ್ಕೆೆ ತಿದ್ದುಪಡಿ ತರಲಾಗುತ್ತಿಿದೆ. ಖಾಸಗಿ ವೈದ್ಯಕೀಯ ಸಂಸ್ಥೆೆಗಳ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಾಧಿಕಾರಕ್ಕೆೆ ನಾಮನಿರ್ದೇಶನ ಮಾಡಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧೇಯಕದ ಬಗ್ಗೆೆ ಚರ್ಚೆಯ ಬಳಿಕ ಅಂಗೀಕಾರ ನೀಡಲಾಯಿತು.

