ವಿಶೇಷ ವರದಿ ಸಿಂಧನೂರು, ಡಿ.11:
ಸಿಂಧನೂರಿನಿಂದ ಬೆಳಿಗ್ಗೆೆ 5.15ಕ್ಕೆೆ ಹುಬ್ಬಳ್ಳಿಿಗೆ ಹೊರಡುವ ನೈರುತ್ಯ ರೈಲ್ವೆೆ ಹುಬ್ಬಳ್ಳಿಿ ವಿಭಾಗದ ಡೆಮೋ ರೈಲಿನಲ್ಲಿ ಶೌಚಾಲಯ, ವಾಷ್ ರೂಮ್ಗಳ ಕೊರತೆಯಿಂದಾಗಿ ಚಳಿಯಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಮೂತ್ರ/ಮಲ ವಿಸರ್ಜನೆಗೆ ಪರದಾಡುವಂತಾಗಿದೆ. ದೊಡ್ಡದಾದ ಡೆಮೋ ರೈಲಿನಲ್ಲಿ ಬೋಗಿಗಳಿಗೆ ತಕ್ಕಂತೆ ಶೌಚಾಲಯ, ವಾಷ್ ರೂಮ್ ಇಲ್ಲದಿರುವುದರಿಂದ ಕಿರಿ ಕಿರಿ ಅನುಭವಿಸುತ್ತಿಿದ್ದಾಾರೆ.
ಮೂತ್ರ ವಿಸರ್ಜನೆಗೆ ಕ್ಯೂ !:
ಬೆಳಿಗ್ಗೆೆ ವಿಪರೀತ ಚಳಿ ಇರುವುದರಿಂದ ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗುವುದು ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ಆದರೆ ರೈಲಿನಲ್ಲಿ 300ಕ್ಕೂ ಅಧಿಕ ಪ್ರಯಾಣಿಕರಿಗೆ ಬೋಗಿಗಳಲ್ಲಿ ಒಂದೇ ಒಂದು ಶೌಚಾಲಯ ವ್ಯವಸ್ಥೆೆ ಇದ್ದು, ಮೂತ್ರ ವಿಸರ್ಜನೆಗೆ ಕ್ಯೂ ನಿಲ್ಲಬೇಕಿದೆ. ಮೂತ್ರ ವಿಸರ್ಜನೆಗೆ ಹೋದವರು ಸ್ವಲ್ಪ ಹೊತ್ತು ಜಾಸ್ತಿಿಯಾದರೆ ಕ್ಯೂ ನಿಂತವರು ಬಾಗಿಲು ಬಡಿಯುತ್ತಾಾರೆ. ಇದರಿಂದ ಮುಜುಗರ ಅನುಭವಿಸುವಂತಾಗಿದೆ ಎಂದು ಹೆಸರೇಳಲಿಚ್ಚಿಿಸದ ಪ್ರಯಾಣಿಕರೊಬ್ಬರು ತಿಳಿಸಿದ್ದಾಾರೆ.
ಆಸ್ಪತ್ರೆೆಗಳಿಗೆ ಚಿಕಿತ್ಸೆೆಗೆ ಹೋಗುವವರಿಗೆ ಸಂಕಷ್ಟ !!
ಬಹುತೇಕ ಸಿಂಧನೂರು ಸೇರಿದಂತೆ ಗ್ರಾಾಮಾಂತರ ಪ್ರದೇಶದಿಂದ ಹುಬ್ಬಳ್ಳಿಿಗೆ ಚಿಕಿತ್ಸೆೆಗಾಗಿ ಹೋಗುವವರು ಸಂಖ್ಯೆೆ ಹೆಚ್ಚು. ಆದರೆ ಶೌಚಾಲಯಗಳ ಕೊರತೆಯಿಂದ ವಯೋವೃದ್ಧರು, ಮಕ್ಕಳು, ಮಹಿಳೆಯರು ಹಾಗೂ ವಿಕಲಚೇತನರು ಮೂತ್ರ ವಿಸರ್ಜನೆ ಹೋಗಲು ಸಂಕಷ್ಟ ಎದುರಿಸುತ್ತಿಿದ್ದಾಾರೆ. ಕಳೆದ ಎರಡಕ್ಕೂ ಹೆಚ್ಚು ತಿಂಗಳಿಂದ ಇದೇ ರೀತಿ ಸಮಸ್ಯೆೆ ಮುಂದುವರಿದಿದೆ ಎಂದು ವೃದ್ಧರೊಬ್ಬರು ತಿಳಿಸಿದರು.
2 ತಿಂಗಳಿಂದ ಪ್ರಯಾಣಿಕರಿಗೆ ತೊಂದರೆ:
ಕಳೆದ 2 ತಿಂಗಳಿಗೂ ಹೆಚ್ಚು ದಿನಗಳಿಂದ ಸಿಂಧನೂರಿನಿಂದ ಡೆಮೋ ರೈಲು ಓಡಾಟ ನಡೆಸಿದ್ದು, ಈ ರೈಲಿನಲ್ಲಿ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿಿದ್ದಾಾರೆ. ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಕಿರಿ ಕಿರಿ ಅನುಭವಿಸುತ್ತ ನೂರಾರು ಕಿ.ಮೀ ಪ್ರಯಾಣಿಸುವಂತಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾಾರೆ.
ಕೇವಲ ಮೂರ್ನಾಲ್ಕು ಶೌಚಾಲಯ ?
ಈ ಡೆಮೋ ರೈಲಿನಲ್ಲಿ 300ಕ್ಕೂ ಹೆಚ್ಚು ಜನರಿಗೆ ಒಂದೇ ಒಂದು ಶೌಚಾಲಯ ವ್ಯವಸ್ಥೆೆ ಕಲ್ಪಿಿಸಲಾಗಿದೆ. ಇಡೀ ರೈಲಿನಲ್ಲಿ ದಿನವೂ ಸಾವಿರಾರು ಜನರು ಪ್ರಯಾಣಿಸುತ್ತಾಾರೆ, ಅಷ್ಟು ಪ್ರಯಾಣಿಕರಿಗೆ ಕೇವಲ ಮೂರ್ನಾಲ್ಕು ಶೌಚಾಲಯ ವ್ಯವಸ್ಥೆೆ ಸಾಲುತ್ತದೆಯೇ ? ಅನುಕೂಲಕರವಲ್ಲದ ರೈಲನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತಿಿದ್ದು, ಇದರಿಂದ ಪ್ರಯಾಣಿಕರು ಸಮಸ್ಯೆೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಹೇಳುತ್ತಾಾರೆ.
ಮೊಬೈಲ್ ಚಾಜಿರ್ಂಗ್ ವ್ಯವಸ್ಥೆೆ ಇಲ್ಲ
ಈ ರೈಲಿನಲ್ಲಿ ಮೊಬೈಲ್ ಚಾಜಿರ್ಂಗ್ ವ್ಯವಸ್ಥೆೆ ಇಲ್ಲ. ರೈಲಿನ ಬೋಗಿಗಳಲ್ಲಿ ಮೊಬೈಲ್ ಚಾಜಿರ್ಂಗ್ ಮಾಡೋಣ ಎಂದು ಅವಸರದಿಂದ ಬಂದ ಪ್ರಯಾಣಿಕರು ಬೋಗಿಗಳಲ್ಲಿ ಚಾಜಿರ್ಂಗ್ ವ್ಯವಸ್ಥೆೆ ಇಲ್ಲದಿರುವುದನ್ನು ನೋಡಿ ಪರೇಶಾನ್ ಆಗುತ್ತಿಿದ್ದಾಾರೆ. ಇನ್ನೂ ಸೀಟ್ ವ್ಯವಸ್ಥೆೆ ಕಂರ್ಟ್ ಇಲ್ಲದೇ ಇರುವುದರಿಂದ ಕೆಲವರು ಅತ್ತಿಿಂದಿತ್ತ, ಇತ್ತಿಿಂದತ್ತ ಹೊರಳಾಡುವುದು ಸಾಮಾನ್ಯವಾಗಿದೆ. ಸಿಟಿಯಲ್ಲಿ ಓಡಿಸಬೇಕಾದ ರೈಲನ್ನು ನೂರಾರು ಕೀ.ಮೀ ವ್ಯಾಾಪ್ತಿಿಯಲ್ಲಿ ಸಂಚಾರಕ್ಕೆೆ ವ್ಯವಸ್ಥೆೆ ಮಾಡಿರುವುದರಿಂದ ಈ ಸಮಸ್ಯೆೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ದೂರುತ್ತಾರೆ.
ಮೂಲ ಸೌಕರ್ಯವುಳ್ಳ ರೈಲು ಓಡಿಸಲು ಒತ್ತಾಯ
ಇತ್ತೀಚೆಗೆ ಪರೀಕ್ಷೆ ಬರೆಯಲು ಸಿಂಧನೂರಿನಿಂದ ಹುಬ್ಬಳ್ಳಿಿಗೆ ಹೋದ ಸಂದರ್ಭದಲ್ಲಿ ಕಿರಿ ಕಿರಿ ಅನುಭವಿಸುವಂತಾಯಿತು. ಇನ್ನೂ ಮಹಿಳೆಯರು, ಮಕ್ಕಳು, ವಯೋವೃದ್ಧರು ಹಾಗೂ ವಿಕಲಚೇತನರು ಈ ರೈಲಿನಲ್ಲಿ ಶೌಚಾಲಯಗಳ ಕೊರತೆಯಿಂದ ದಿನವೂ ತೊಂದರೆ ಅನುಭವಿಸುತ್ತಿಿದ್ದಾಾರೆ. ಆದಷ್ಟು ಬೇಗನೆ ನೈರುತ್ಯ ರೈಲ್ವೆೆ ಹುಬ್ಬಳ್ಳಿಿ ವಿಭಾಗದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಪ್ರಯಾಣಿಕರಿಗೆ ಆಗುತ್ತಿಿರುವ ತೊಂದರೆ ತಪ್ಪಿಿಸಲು, ಅಗತ್ಯ ಸೌಲಭ್ಯ ಹೊಂದಿರುವ ಸುಸಜ್ಜಿಿತ ರೈಲನ್ನು ಈ ಮಾರ್ಗದಲ್ಲಿ ಓಡಿಸಬೇಕು,
– ನೂರ್ ಪಟೇಲ್, ಸಾಮಾಜಿಕ ಕಾರ್ಯಕರ್ತ
ರೈಲಿನಲ್ಲಿ ಶೌಚಾಲಯವಿಲ್ಲದೆ ಪ್ರಯಾಣಿಕರ ಪರದಾಟ..!

