ಸುದ್ದಿಮೂಲ ವಾರ್ತೆ
ಆನೇಕಲ್, ಏ.9: ರಾಜ್ಯದಲ್ಲಿ ಮೇ10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಶಾಂತಿಯುತವಾಗಿ ಮತದಾನ ನಡೆಸುವ ಸಂಬಂಧ ಜಾಗೃತಿ ಮೂಡಿಸಲು ಆನೇಕಲ್ ಪಟ್ಟಣದಲ್ಲಿ ಭದ್ರತಾ ಪಡೆ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿಯಾಗಿ ಪಥಸಂಚಲನ ನಡೆಸಲಾಯಿತು.
ಭದ್ರತಾ ಪಡೆ ಪ್ಯಾರಾ ಮಿಲಿಟರಿ ತಂಡ ಜೊತೆಗೆ ಹಾಗೂ ಆನೇಕಲ್ ಉಪವಿಭಾಗದ ಪೊಲೀಸರು ಜಂಟಿಯಾಗಿ ಪಥಸಂಚಲನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಅಲ್ಲದೆ, ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿಯೂ ಪೋಲಿಸ್ ಪಥ ಸಂಚನ ನಡೆಸಲಾಯಿತು. ಪಥ ಸಂಚನದಲ್ಲಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ, ಸಿಆರ್ಪಿಎಫ್ ಮತ್ತು ಕೆಎಸ್ಆರ್ಪಿ ತುಕಡಿ ಹಾಗೂ ಸ್ಥಳೀಯ ಪೋಲಿಸ್ ಅಧಿಕಾರಿಗಳು, ಇನ್ಸ್ ಪೆಕ್ಟರ್ಗಳು, ಪೋಲಿಸರು ಭಾಗವಹಿಸಿದ್ದರು.

 
             
        
