ಸುದ್ದಿಮೂಲ ವಾರ್ತೆ ರಾಯಚೂರು , ಡಿ.08:
ಲೋಕಾಯುಕ್ತರ ಆದೇಶವನ್ನೆೆ ಗಾಳಿಗೆ ತೂರಿದ ಜಿಲ್ಲಾಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಈರಣ್ಣ ಬಿರಾದಾರ, ಮುಖ್ಯ ಅಧಿಕಾರಿ ಹಂಪಯ್ಯ ಅವರ ಅಮಾನತ್ತು ಮಾಡಲು ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ಒತ್ತಾಾಯಿಸಿದ್ದಾಾರೆ.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ದೇವದುರ್ಗ ಪುರಸಭೆ ವ್ಯಾಾಪ್ತಿಿಯ ಅಮರೇಶ ಬಲ್ಲಿದವರ ಮನೆಯಿಂದ ಮಿನಿ ವಿಧಾನಸೌಧದವರೆಗೂ 25 ಅಡಿ ರಸ್ತೆೆ ಅಗಲೀಕರಣಕ್ಕೆೆ 2010ರ ನ.20 ರಂದು ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಲೋಕಮ್ಮ ಅಮರಣ್ಣಗೌಡ ಅವರ ಅಧ್ಯಕ್ಷತೆ ಸಭೆ ನಿರ್ಧರಿಸಿ 15 ವರ್ಷ ಕಳೆದರೂ ರಸ್ತೆೆ ಅಗಲೀಕರಣವೇ ಮಾಡಿಲ್ಲಘಿ. ಇದರಿಂದ ಸಂಚಾರ ಸಂಕಷ್ಟ ಎದುರಿಸುತ್ತಿಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಷಯಕ್ಕೆೆ ಸಂಬಂಧಿಸಿದಂತೆ 2014 ರ ಸೆಪ್ಟೆೆಂಬರ್ 25 ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು ಇದುವರೆಗೂ ಕ್ರಮ ವಹಿಸಿರಲಿಲ್ಲಘಿ. ಜಿಲ್ಲೆೆಗೆ ಆಗಮಿಸಿದ್ದ ಉಪ ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು ಮನವಿಗೆ ಸ್ಪಂದಿಸಿ ಲೋಕಾಯುಕ್ತರು 90 ದಿನ ಒಳಗಡೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಇದುವರೆಗೆ ಯಾವುದೆ ಕೆಲಸ ನಡೆಯುತ್ತಿಿಲ್ಲಘಿ. ಅಧಿಕಾರಿಗಳಿಬ್ಬರೂ ಆದೇಶ ಉಲ್ಲಂಘಿಸಿದ್ದಾಾರೆ ಎಂದು ಟೀಕಿಸಿದರು.

