ಗುರುಸ್ವಾಾಮಿ ಬೊಮ್ಮನಾ ಅರಕೇರಾ, ನ.05:
ತಾಲ್ಲೂಕಿನ ಕ್ಯಾಾದಿಗೇರಾ ಗ್ರಾಾಮ ಪಂಚಾಯತಿ ಕಚೇರಿಗೆ ಸಮರ್ಪಕವಾಗಿ ಕರ್ತವ್ಯಕ್ಕೆೆ ಪಿಡಿಒ ಹಾಜರಾಗುತ್ತಿಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಸಿಬ್ಬಂದಿ ಜೊತೆ ಹೊಂದಾಣಿಕೆ ಕೊರತೆಯಿಂದ ಗ್ರಾಾಪಂ ಆಡಳಿತ ನಿಂತ ನೀರಾಗಿದೆ.
ಇದರಿಂದ ಸಾರ್ವಜನಿಕರ ಕೆಲಸ, ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಸಕಾಲದಲ್ಲಿ ಸಾಮಾನ್ಯ ಸಭೆ, ಗ್ರಾಾಮ ಸಭೆ, ವಾರ್ಡ್ ಸಭೆ ನಡೆಯುತ್ತಿಿಲ್ಲ, ಗ್ರಾಾಮದ ಸರ್ವಾಂಗೀಣ ಅಭಿವೃದ್ಧಿಿಗೆ ಗ್ರಹಣ ಬಡಿದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿಿದ್ದಾಾರೆ.
ಅಭಿವೃದ್ಧಿಿ ಕಾರ್ಯಗಳನ್ನು ಕೈಗೊಳ್ಳದೇ, ಕೇವಲ ಕಾಗದದಲ್ಲಿ ಅಭಿವೃದ್ಧಿಿ ತೋರಿಸುತ್ತಿಿದ್ದಾಾರೆ. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುತ್ತಿಿಲ್ಲ. ಯಾವುದೇ ಯೋಜನೆ ಕಾರ್ಯರೂಪಕ್ಕೆೆ ತರದೇ ತಮಗಿಷ್ಟ ಬಂದಂತೆ ವರ್ತಿಸುತ್ತಿಿದ್ದಾಾರೆ. ಇ ಸ್ವತ್ತು ಪಡೆಯಲು 6 ತಿಂಗಳು ಅಲೆದಾಡಬೇಕಿದೆ. ಇದರಿಂದ ಜನ ಸಾಮಾನ್ಯರು ಆಕ್ರೋೋಶಗೊಳ್ಳುವಂತೆ ಮಾಡಿದ್ದಾಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಗಟಾರ ಸ್ವಚ್ಛತೆ, ನಳಗಳ ದುರಸ್ಥಿಿ, ರಸ್ತೆೆ ಸುಧಾರಣೆ, ತ್ಯಾಾಜ್ಯ ವಿಲೇವಾರಿ ಕೈಗೊಳ್ಳದಿರುವುದು. ಸೇರಿದಂತೆ ಹಲವು ಸಮಸ್ಯೆೆಗಳನ್ನು ಗ್ರಾಾಮಸ್ಥರು ಎದುರಿಸುತ್ತಿಿದ್ದಾಾರೆ. ಚರಂಡಿ, ರಸ್ತೆೆಗಳಲ್ಲಿ ರಾಶಿಗಟ್ಟಲೇ ತ್ಯಾಾಜ್ಯ ತುಂಬಿಕೊಂಡು ಸೊಳ್ಳೆೆ, ನೊಣಗಳು ಉತ್ಪತ್ತಿಿಯಾಗುತ್ತಿಿವೆ. ಸಾಂಕ್ರಾಾಮಿಕ ರೋಗದ ಭೀತಿ ಆವರಿಸಿದೆ. ಗ್ರಾಾಮ ಪಂಚಾಯತಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಿಿದ್ದಾಾರೆ ಸ್ಥಳೀಯರು.
—————————————————-
ಗ್ರಾಾಮ ಪಂಚಾಯತಿ ಕಚೇರಿಗೆ ಆಗಮಿಸದ ಪಿಡಿಒ ಒಂದೊಂದುವಾರ ಗೈರಾಗಿ ಹಾಜರಾತಿ ಪುಸ್ತಕದಲ್ಲಿ ಗೈರಾದ ದಿನಗಳ ಹಾಜರಾತಿಗೆ ಸಹಿ ಮಾಡಿ ಕರ್ತವ್ಯ ಲೋಪವೆಸಗಿರುವುದು ಪತ್ರಿಿಕೆಗೆ ಲಭ್ಯವಾಗಿದೆ.
ಕೊತ್ತದೊಡ್ಡಿಿ ಗ್ರಾಾಪಂ ನಲ್ಲಿ ಕಾಯಂ ಆಗಿ, ಕ್ಯಾಾದಿಗ್ಗೇರಾ ಗ್ರಾಾಪಂ ನಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿಿರುವ ಪಿಡಿಒ ಲಿಂಗಪ್ಪ ಅವರು ಗ್ರಾಾಪಂ ಕಚೇರಿಗೆ ಆಗಮಿಸದೆ. ತಾವು ಆಡಿದ್ದೆೆ ಆಟ, ಮಾಡಿದ್ದೆೆ ಮಾಟ ಎನ್ನುವಂತೆ ವರ್ತಿಸುತ್ತಿಿದ್ದಾಾರೆ. ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸುವುದಿಲ್ಲ, ಕಳೆದ ಒಂದು ವಾರದಿಂದ ಕರ್ತವ್ಯಕ್ಕೆೆ ಹಾಜರಾಗದೆ ಬುಧವಾರ ( ಡಿ.3 ) ರಂದು ಕ್ಯಾಾದಿಗ್ಗೇರಾ ಗ್ರಾಾಮ ಪಂಚಾಯತಿ ಕಚೇರಿಗೆ ಆಗಮಿಸಿ ಹಾಜರಾತಿ ಪುಸ್ತಕದಲ್ಲಿ ಗೈರಾಗಿದ್ದನ್ನು ಸಹಿ ಹಾಕಿ ವಾಪಸ್ಸಾಾಗಿದ್ದಾಾರೆ.
——————————————————
ಕೋಟ್ 1 :
ಪಿಡಿಒ ಲಿಂಗಪ್ಪ ಬಿಸಿಯೂಟ ಅಡುಗೆದಾರರ ನೇಮಕದಲ್ಲಿ ಅಕ್ರಮ ಹಣ ಪಡೆದಿದ್ದಾಾರೆ. ತಾತ್ಕಾಾಲಿಕ ವಾಟರ್ ಮ್ಯಾಾನ್ ನೇಮಕ ಮತ್ತು ಸರ್ಕಾರಿ ಶಾಲೆಗಳಲ್ಲಿ ಎಸ್ಡಿಎಂಸಿ ರಚನೆ ವಿಳಂಬ ಮಾಡುತ್ತಿಿದ್ದಾಾರೆ. ಟ್ಯಾಾಕ್ಸ್ ಸಂಗ್ರಹ ಮೊತ್ತ ಗ್ರಾಾಪಂ ಖಾತೆಯಲ್ಲಿ ಇಲ್ಲದಿದ್ದರೂ, ಚೆಕ್ ಬರೆದುಕೊಡುತ್ತಿಿದ್ದಾಾರೆ. ಪೂರ್ಣಗೊಂಡ ಕಾಮಗಾರಿ ಹಸ್ತಾಾಂತರ ಮಾಡಿಕೊಳ್ಳಲು ಹಣದ ಬೇಡಿಕೆ ಇಟ್ಟಿಿದ್ದಾಾರೆ. ಅಪೂರ್ಣಗೊಂಡ ಕಾಮಗಾರಿ ಅಧ್ಯಕ್ಷರ ಗಮನಕ್ಕೆೆ ತರದೆ ಹಸ್ತಾಾಂತರ ಮಾಡಿಕೊಂಡಿದ್ದಾಾರೆ. ಸಮನ್ವಯ ಕೊರತೆಯಿಂದ ಗ್ರಾಾಪಂ ಅಭಿವೃದ್ಧಿಿ ಕಾಣುತ್ತಿಿಲ್ಲ, ಗ್ರಾಾಪಂ ಗೆ ಗೈರಾಗುವುದನ್ನು ಪ್ರಶ್ನಿಿಸಿದರೆ ಯಾರಿಗಾದರೂ ದೂರು ನೀಡಿ ಎಂದು ಉಡೊಯಾಗಿ ಹೇಳುತ್ತಿಿದ್ದಾಾರೆ. ಇದರಿಂದ ಅಭಿವೃದ್ಧಿಿಗೆ ಹಿನ್ನಡೆಯಾಗಿದೆ. ಹೀಗಾಗಿ ಜಿಪಂ ಸಿಇಒ ಅವರಿಗೆ ದೂರು ನೀಡಲಾಗುವುದು.
– ನೀಲಮ್ಮ ರಾಜಶೇಖರ ರಾಠೋಡ್, ಗ್ರಾಾಪಂ ಅಧ್ಯಕ್ಷರು ಕ್ಯಾಾದಿಗ್ಗೇರಾ.
ಕೋಟ್ 2 :
ಕ್ಯಾಾದಿಗ್ಗೇರಾ ಗ್ರಾಾಪಂ ಪಿಡಿಒ ಲಿಂಗಪ್ಪ ಅವರು ಕರ್ತವ್ಯಕ್ಕೆೆ ಗೈರಾಗಿ, ಒಂದು ವಾರದ ಹಾಜರಿ ಹಾಕಿರುವುದು ನನ್ನ ಗಮನಕ್ಕಿಿಲ್ಲ. ಗ್ರಾಾಪಂಗೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿ, ನೋಟಿಸ್ ನೀಡಲಾಗುವುದು. ಕರ್ತವ್ಯ ಲೋಪವೆಸಗಿರುವ ಬಗ್ಗೆೆ ಸಾಬೀತಾದರೆ, ನಿಯಮಾನುಸರವಾಗಿ ಕ್ರಮ ಕೈಗೊಳ್ಳಲಾಗುವುದು.
– ಅಣ್ಣಾಾರಾವ್ ನಾಯಕ ಇಒ, ತಾಲ್ಲೂಕು ಪಂಚಾಯತ ಅರಕೇರಾ.
05 ಅರಕೇರಾ 01 : ಅರಕೇರಾ ತಾಲ್ಲೂಕಿನ ಕ್ಯಾಾದಿಗ್ಗೇರಾ ಗ್ರಾಾಮ ಪಂಚಾಯತಿ ಕಚೇರಿ ಹೊರ ನೋಟ.
05 ಅರಕೇರಾ 02 : ಗೈರಾಗಿರುವ ದಿನಗಳಗೂ ಹಾಜರಾತಿ ಪುಸ್ತಕದಲ್ಲಿ ಬುಧವಾರ ಪಿಡಿಒ ಲಿಂಗಪ್ಪ ಸಹಿ ಮಾಡಿರುವ ದಾಖಲೆ.

