ಸುದ್ದಿಮೂಲ ವಾರ್ತೆ ರಾಯಚೂರು, ಅ.19:
ರಾಯಚೂರು ತಾಲೂಕಿನ ಶಕ್ತಿಿನಗರದಲ್ಲಿ ಸರ್ಕಾರಿ ನೌಕರನೋರ್ವ ಗಣವೇಷ ಧರಿಸಿ ನಿಂತಿರುವ ೆಟೊ ವೈರಲ್ ಆಗಿದೆ. ಈ ಮಧ್ಯೆೆ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿ ಅಮಾನತ್ತುಗೊಂಡ ಪಿಡಿಓ ಪ್ರವೀಣ್ಗೆ ತೇಜಸ್ವಿಿ ಸೂರ್ಯ ಬೆಂಬಲಿಸಿ ಟ್ವೀಟ್ ಮಾಡಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಶಕ್ತಿಿನಗರದ ಜೆಸ್ಕಾಾಂನ ಮೀಟರ್ ರೀಡರ್ ವೀರನಗೌಡ ಎನ್ನುವವರು ಆರ್ಎಸ್ಎಸ್ನ ಗಣವೇಷಧಾರಿಯಾಗಿ ನಿಂತು ೆಟೋ ಇಳಿದು ಸ್ಟೇಟಸ್ ಹಾಕಿಕೊಂಡಿದ್ದ ಭಾವಚಿತ್ರ ವೈರಲ್ ಆಗಿ ಪರ – ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿಿದೆ.
ಇತ್ತೀಚೆಗೆ ಶಕ್ತಿಿನಗರದಲ್ಲಿ ಜರುಗಿದ್ದ ಆರ್ಎಸ್ಎಸ್ ಪಥಸಂಚಲನದಲ್ಲಿ ಮೀಟರ್ ರೀಡರ್ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಸ್ವತಃ ತಾನೇ ತನ್ನ ವಾಟ್ಸ್ ಆಪ್ ಸ್ಟೇಟಸ್ ಇಟ್ಟುಕೊಂಡಿದ್ದ ೆಟೋ ಹಿಡಿದು ಮಾನ್ವಿಿಯ ಶಿವಕುಮಾರ ಜಗ್ಲಿಿ ಎಂಬುವವರು ಜೆಸ್ಕಾಾಂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಾರೆ.
ಅಲ್ಲದೆ, ಸಂಘವನ್ನು ನಿಷೇಧಿಸುತ್ತೇವೆ ಅಂದವರೆಲ್ಲ ಮಣ್ಣಲ್ಲಿ ಮಣ್ಣಾಾಗಿ ಹೋದರು ಸಂಘ ಮಾತ್ರ ತನ್ನದೆ ಕೆಲಸ ಮಾಡುತ್ತ ಯಶಸ್ವಿಿಯಾಗಿ ತನ್ನ ನೂರು ವರ್ಷ ಪೂರೈಸಿದೆ ಎಂದು ಸ್ಟೇಟಸ್ ಬರೆದುಕೊಂಡ ಗಣವೇಷಧಾರಿ ೆಟೋ ಹಾಕಿಕೊಂಡಿದ್ದು ಸರ್ಕಾರಿ ಆದೇಶ, ನಿಯಮ ಉಲ್ಲಂಘಿಸಿದ್ದು ಅಮಾನತ್ತು ಮಾಡಲು ಕೋರಿದ್ದಾಾರೆ.
ಜಿಲ್ಲೆಯ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕ ಹಾಗೂ ಪಿಡಿಓ ಪ್ರವೀಣ್ ಕುಮಾರ ಅವರನ್ನು ಸರ್ಕಾರ ಅಮಾನತ್ತು ಮಾಡಿದ್ದಕ್ಕೆೆ ಸಂಸದ ಹಾಗೂ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ತೇಜಸ್ವಿಿ ಸೂರ್ಯ ಅವರು ಪ್ರವೀಣ ಕುಮಾರಗೆ ಕರೆ ಮಾಡಿ ಮಾಹಿತಿ ಪಡೆದು ಧೈರ್ಯ ತುಂಬಿದ್ದಾಾರೆ ಎಂಬುದು ಗೊತ್ತಾಾಗಿದೆ ಅಲ್ಲದೆ, ತಮ್ಮ ಜೊತೆ ಇರುವುದಾಗಿ ಹೇಳಿ ಪ್ರವೀಣ ಕುಮಾರ ಒಂದೊಮ್ಮೆೆ ಕಾನೂನು ಹೋರಾಟಕ್ಕೆೆ ಮುಂದಾದರೆ ಯಾವ ನ್ಯಾಾಯಾಲಯದಲ್ಲಿ ಅವರು ಪ್ರಶ್ನಿಿಸುತ್ತಾಾರೆಯೋ ಅಲ್ಲಿಗೆ ಹೋಗಿ ಅವರ ಪರ ವಕಾಲತ್ತು ಹಾಕಿ ವಾದ ಮಂಡಿಸಿ ನ್ಯಾಾಯ ಕೊಡಿಸುವುದಾಗಿ ತೇಜಸ್ವಿಿ ಸೂರ್ಯ ಹೇಳಿ ಟ್ವೀಟ್ ಮಾಡಿದ್ದಾಾರೆ.