ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 16 : ಗಣೇಶ್ ಹಬ್ಬದ ಅಂಗವಾಗಿ ಸೂಲಿಬೆಲೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಠಾಣಾ ಇನ್ಸ್ಪೆಕ್ಟರ್ ರವಿ ಮಾತನಾಡಿ
ಸಮಾಜದಲ್ಲಿ ಶಾಂತಿ ಕಾಪಾಡುವ ಹಿನ್ನಲೆಯಲ್ಲಿ ಈ ಸಭೆ
ಆಯೋಜಿಸಲಾಗಿದ್ದು, ಸರ್ಕಾರ ಜಾರಿ ಮಾಡಿರುವ ಮಾನದಂಡಗಳಂತೆ ಗಣಪತಿಪ್ರತಿಷ್ಟಾಪನೆ ಹಾಗೂ ವಿಸರ್ಜಿಸಬೇಕು. ಸಾಮಾಜಿಕ ಸಾಮರಸ್ಯ ಸ್ವಾಸ್ಥ್ಯ ಕಾಪಾಡಬೇಕು ಎಂದು ಹೇಳಿದರು.
ಗಣೇಶಮೂರ್ತಿಯ ಪ್ರತಿಷ್ಟಾಪನೆ ಬಳಿ ಕಡ್ಡಾಯವಾಗಿ ಸ್ವಯಂ ಸೇವಕರು ಹಾಜರಿರಬೇಕು. ಸದರಿ ಅದೇಶದಂತೆ 5 ದಿನಗಳ ಒಳಗೆ ವಿಸರ್ಜನೆ ಮಾಡಬೇಕು. ಸ್ಥಳದಲ್ಲಿ
ಇಲ್ಲವೇ ಮೆರವಣಿಗೆಯಲ್ಲಿ ಡಿಜೆ ಅಳವಡಿಕೆಗೆ ಅವಕಾಶವಿರುವುದಿಲ್ಲ. ಧ್ವನಿವರ್ದಕದ ಅಳವಡಿಕೆಗೆ
ಅನುಮತಿ ಕಡ್ಡಾಯ, ರಾತ್ರಿ10 ರಿಂದ
ಬೆಳಿಗ್ಗೆ 5 ಗಂಟೆವರೆಗೆ ಧ್ವನಿವರ್ದಕ ಬಳಸುವಂತಿಲ್ಲ,
ಹಗಲು ವೇಳೆಯಲ್ಲಿ ಸಂಜೆ 6 ಗಂಟೆಯೋಳೆಗೆ ವಿಸರ್ಜನೆ
ಮಾಡತಕ್ಕದ್ದು, ವಿಸರ್ಜನೆ ವೇಳೆ ಅವಶ್ಯಕ ಜಾಗೃತಿ ಮೂಡಿಸುವುದು,ವಿಸರ್ಜನೆಯ ಮೆರವಣಿಗೆ ಸಮಯದಲಿ ರಸ್ತೆ ಸಂಚಾರಕ್ಕೆ ಸ್ಥಳೀಯ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿಷ್ಟಾಪನೆಯಿಂದ ವಿಸರ್ಜನೆವರೆಗೆ ಯಾವುದೇ ಅನಾಹುತಗಳಿಗೆ ಆಯೋಜಕರನ್ನೇ ನೇರ ಹೊಣೆಗಾರರಾಗಿ ಮಾಡಲಾಗುತ್ತದೆ ಎಂದರು.
ವಿಶೇಷವಾಗಿ ಮಧ್ಯಪಾನ, ಮಧ್ಯವಸ್ಯನಿಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿದರು.
ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಪೋಲಿಸ್ ಪೇದೆ ಬೀಮಪ್ಪ ಪಾಟೀಲ್, ಅಸ್ಕಿ, ಸಿದ್ದಪ್ಪ, ಸಂತೋಷ್,ರಾಮಾಂಜಿ ಹಾಗೂ ಸಮುದಾಯದ ಮುಖಂಡರುಗಳು ಇದ್ದರು.