ಹೊಸಕೋಟೆ, ಆ.22 : ಭಕ್ತರು ಆರೋಗ್ಯದ ಹಿತದೃಷ್ಟಿಯಿಂದ ಭಕ್ತಿಶ್ರದ್ಧೆಯಿಂದ ದೇವರ ಪೂಜೆ ಮಾಡಿದರೆ ಸುಖ, ಶಾಂತಿ, ನೆಮ್ಮದಿಯಿಂದ ಜೀವಿಸಬಹುದು ಎಂದು ಪ್ರತಿಭಾ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿಯ ಮಂಚಪ್ಪನಹಳ್ಳಿ ಗ್ರಾಮದ ಗಂಗಮ್ಮ ದೇವಿ ದೇವಾಲಯದ ಶಿಲಾ ವಿಗ್ರಹ ಪ್ರತಿಷ್ಠಾಪನೆ, ಗೋಪುರ ಕಳಶ ಕುಂಬಾಭೀಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ದೇವಸ್ಥಾನಗಳು ಪ್ರತಿ ಗ್ರಾಮದಲ್ಲೂ ಕಟ್ಟಿಸಿ ಪೂಜೆ ಸಲ್ಲಿಸಿದ್ದಲ್ಲಿ ಗ್ರಾಮಕ್ಕೆ ದುಷ್ಟ ಶಕ್ತಿಗಳು ಬರದೆ ಶಾಂತಿ, ನೆಮ್ಮದಿ ಲಭಿಸುತ್ತದೆ. ಜನರಲ್ಲಿ ಭಕ್ತಿ ಭಾವನೆ, ಸಂಪ್ರದಾಯ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಇಂತಹ ದೇವರ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಇಲ್ಲಿಗೆ ಬರುವ ಎಲ್ಲಾ ಭಕ್ತಾದಿಗಳ ಕಷ್ಟಗಳನ್ನು ಗಂಗಮ್ಮ ತಾಯಿ ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಅನಾದಿ ಕಾಲದಿಂದಲೂ ಗ್ರಾಮಗಳಲ್ಲಿ ದೇವರ ಕಾರ್ಯ ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಸೇರುವುದರಿಂದ ಪ್ರೀತಿ ವಿಶ್ವಾಸದ ಜೊತೆಗೆ ಸಂಬಂಧಗಳು ಬೆಸೆಯುತ್ತವೆ.
ಮನುಷ್ಯನ ಜೀವನ ಸಕಾರತ್ಮವಾಗಿ ಇರಬೇಕಾದರೆ ಪುಣ್ಯಕ್ಷೇತ್ರಗಳ ಕಡೆ ಹೋಗಿ ದೇವರ ದರ್ಶನ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಮಕ್ಕಳು ಒಳ್ಳೆಯ ಗ್ರಂಥಗಳನ್ನು ಓದಿ ಜ್ಞಾನ ವೃದ್ಧಸಿಕೊಳ್ಳಬೇಕು. ಮಂಚಪ್ಪನಹಳ್ಳಿ ಗ್ರಾಮದ ಜನತೆಯ ಜೊತೆಗೆ ದಾನಿಗಳ ನೆರವಿನಿಂದ ಇಂತಹ ದೇವಾಲಯ ಕಟ್ಟಿಸಿ ಜೋರ್ಣೋದ್ಧಾರ
ಮಾಡಿದ್ದಾರೆ. ದೇವಸ್ಥಾನ ಕಟ್ಟಿದರೆ ಸಾಲದು ಪ್ರತಿನಿತ್ಯ ಪೂಜಾ ಕಾರ್ಯಗಳನ್ನು ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂನ ಅಧ್ಯಕ್ಷ ಎನ್.ರಮೇಶ್, ಉಪಾಧ್ಯಕ್ಷೆ ಅಸ್ಮಾತಾಜ್ ಜಿಯಾಉಲ್ಲಾ, ಮಾಜಿ ತಾಪಂನ ಅಧ್ಯಕ್ಷರಾದ ಟಿ.ಎಸ್.ರಾಜಶೇಖರ್, ಮಾಜಿ ಅಧ್ಯಕ್ಷರಾದ ಆರ್.ರವಿಕುಮಾರ್, ಎಸ್ಎಚ್ಟಿ
ಮಂಜುನಾಥ್, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್, ಗ್ರಾ.ಪಂನ ಸದಸ್ಯರಾದ ಪ್ರಿಯಾಂಕ ಡಿ.ರಮೇಶ್, ಮಾಜಿ ಸದಸ್ಯ ದಂಡಪ್ಪ ಹಾಗೂ ಮಂಚಪ್ಪನಳ್ಳಿ ಗ್ರಾಮಸ್ಥರು ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.