ಸುದ್ದಿಮೂಲ ವಾರ್ತೆ
ಆನೇಕಲ್, ಅ. 13 : ತ್ಯಾಜ್ಯ ವಿಲೇವಾರಿ ಕುರಿತು ಹಸಿ ಕಸ, ಒಣ ಕಸ ವಿಂಗಡಿಸಿ ಕೊಡದೆ, ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಜಿಗಣಿ ಪುರಸಭೆಯಿಂದ ದಂಡ ವಿಧಿಸಲಾಗಿದೆ.
ಎಲ್ಲೆಂದರಲ್ಲಿ ಕಸ ಹಾಕಬೇಡಿ ಎಂದು ಜಾಗೃತಿ ಅಭಿಯಾನ ಕಾರ್ಯಕ್ರಮ ಮಾಡಿದರೂ ಕೂಡ ನಿಯಮ ಉಲ್ಲಂಘನೆ ಮಾಡಿ, ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ಗಳ ರಸ್ತೆ, ಒಳಚರಂಡಿ, ಅಂಗಡಿ ಮುಂಗಟ್ಟು, ಮಾರುಕಟ್ಟೆ ಅಕ್ಕ ಪಕ್ಕದ ರಸ್ತೆಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದ ಸಾರ್ವಜನಿಕರಿಗೆ ದಂಡ ಹೇರಲಾಗಿದೆ.
ಜಿಗಣಿ ಪುರಸಭೆಯ ಮುಖ್ಯ ಅಧಿಕಾರಿ ರಾಜೇಶ್, ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಸಿಬ್ಬಂದಿ ಮತ್ತು ಕಾರ್ಮಿಕರ ತಂಡ ಕೆಲ ಸಾರ್ವಜನಿಕರಿಗೆ ಘನ ತಾಜ್ಯ ನಿರ್ವಹಣಾ ಮಾದರಿ ಉಪ ನಿಯಮ ಅನ್ವಯ ಸ್ಥಳದಲ್ಲೇ ದಂಡ ವಿಧಿಸಿದರು. ಪರಿಸರ ಜಾಗೃತಿ, ಮಾಲಿನ್ಯ, ಪ್ಲಾಸ್ಟಿಕ್, ಹಸಿ ಕಸ, ಒಣ ಕಸ ಅಪಾಯಕಾರಿ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಪರಿಸರ ಅಭಿಯಂತರ ರಾಜಶ್ರೀ ಕೆ.ಎಂ ಹಾಗೂ ಪುರಸಬೆ ಸಿಬ್ಬಂದಿಗಳು ಉಪಸ್ಥಿತರಿದ್ದರು.