ಸುದ್ದಿಮೂಲ ವಾರ್ತೆ ಕೊಪ್ಪಳ, ಜ.22:
ಬಡವರ ಮಕ್ಕಳು ಓದುವ ಸರಕಾರಿ ವಸತಿ ಶಾಲೆಯ ಸ್ಥಿಿತಿ ನೋಡಿದರೆ ಎಂಥವರಿಗಾದರೂ ಸಿಟ್ಟು ಬರುತ್ತದೆ. ಹಳೆಯ ಗೋಡೌನ್ನಲ್ಲಿ ವಸತಿ ಶಾಲೆ ನಡೆಯುತ್ತಿಿದೆ. ಇಲ್ಲಿ ಓದುವ ಹಾಗೂ ವಾಸಿಸುವ ಮಕ್ಕಳ ಸ್ಥಿಿತಿ ಅಯೋಮಯವಾಗಿದೆ.
ಶಾಲೆ ಆರಂಭವಾಗಿ 8 ವರ್ಷವಾದರೂ ಇಲ್ಲಿ ಮೂಲಭೂತ ಸೌಲಭ್ಯವಿಲ್ಲ. ಹಳೆಯ ಗೋಡೌನಿನಲ್ಲಿ ಶಾಲೆ ನಡೆಯುತ್ತಿಿದ್ದು 240 ಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಿಿದ್ದಾಾರೆ, ಈಗಲೂ ಆಗಲೂ ಬೀಳುವ ಸ್ಥಿಿತಿಯಲ್ಲಿದೆ. ಬಾಡಿಗೆಯಲ್ಲಿ ನಡೆಯುತ್ತಿಿರುವ ಈ ಶಾಲೆಯಲ್ಲಿ ಮಕ್ಕಳು ಜೀವಭಯದಲ್ಲಿ ಇರಬೇಕಾದ ಅನಿವಾರ್ಯತೆ ಇದೆ.
ಗಂಗಾವತಿ ತಾಲೂಕಿನ ಸಚಿವ ಶಿವರಾಜ ತಂಗಡಗಿ ಕ್ಷೇತ್ರದ ಶ್ರೀರಾಮನಗರದಲ್ಲಿ 2017-18 ನೆಯ ಸಾಲಿನಲ್ಲಿ ಪರಿಶಿಷ್ಠ ಜಾತಿ ಮಕ್ಕಳಿಗಾಗಿ ಇಂದಿರಾ ಗಾಂಧಿ ವಸತಿ ಶಾಲೆ ಆರಂಭಿಸಲಾಗಿದೆ. ಸಮಾಜ ಕಲ್ಯಾಾಣ ಇಲಾಖೆಯಿಂದ ನಡೆಯುವ ಈ ಶಾಲೆಯು ಹಳೆಯ ಗೋಡೌನಿನಲ್ಲಿದೆ. ಮಕ್ಕಳು ಮರದ ನೆರಳಲ್ಲಿ ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ವಸತಿಯು ಕುರಿದೊಡ್ಡಿಿಯಂತೆ ವಾಸವಾಗಬೇಕು. ಮಳೆ ಬಂದರೆ ಶಾಲೆ ಸೋರುತ್ತಿಿದೆ. ಶೌಚಾಲಯ ಸರಿ ಇಲ್ಲ. ನೀರು ಸಹ ಬರುತ್ತಿಿಲ್ಲ. ಇದರಿಂದಾಗಿ ಜಿಲ್ಲೆೆಯ ವಿವಿಧೆಡೆಯಿಂದ ಬಂದಿರುವ ಬಹುತೇಕ ಪರಿಶಿಷ್ಟ ಜಾತಿಯ ಮಕ್ಕಳು ಶಾಲೆಯಲ್ಲಿ ನಿತ್ಯ ನರಕ ಅನುಭವಿಸುತ್ತಿಿದ್ದಾಾರೆ. ನಮಗೆ ಉತ್ತಮ ಕಟ್ಟಡ ನಿರ್ಮಿಸಿ ಎಂದು ಆಗ್ರಹಿಸಿದ್ದಾಾರೆ.
ಕಳೆದ ಮೂರು ವರ್ಷಗಳ ಹಿಂದೆ ಕೆಕೆಆರ್ಡಿಬಿ ಅನುದಾನದಲ್ಲಿ 11 ಕೋಟಿ ರೂಪಾಯಿಯಲ್ಲಿ ವಸತಿ ಶಾಲೆಗಾಗಿ ಕಟ್ಟಡ ನಿರ್ಮಾಣವಾಗಿದೆ. ಈ ಶಾಲೆಯಲ್ಲಿ ಶೌಚಾಲಯವಿಲ್ಲ ಎಂಬ ನೆಪದಿಂದ ಈಗಿರುವ ಗೋಡೌನಿನಲ್ಲಿಯ ಶಾಲೆಯನ್ನು ಸ್ಥಳಾಂತರಿಸಿಲ್ಲ.ಹಿಂದಿನ ಸರಕಾರದ ಅವಧಿಯಲ್ಲಿ ವಸತಿ ಶಾಲೆಯ ಕಟ್ಟಡ ಮಂಜೂರಾಗಿರುವುದರಿಂದ ಈಗಿನ ಸಚಿವರು ಉದ್ಘಾಾಟನೆ ಮಾಡುತ್ತಿಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈಗ ನಿರ್ಮಿಸಿರುವ ಕಟ್ಟಡವು ಬಳಕೆ ಇಲ್ಲದೆ ಇರುವುದರಿಂದ ಪುಂಡ ಪೋಕರಿಗಳು ಕಿಟಕಿ ಗಾಜು ಒಡೆದಿದ್ದಾಾರೆ. ಪುಂಡ ಪೋಕರಿಗಳ ಅಡ್ಡೆೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಿಯಿಸಿದ ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ಕಟ್ಟಡ ನಿರ್ಮಿಸುವಾಗ ಬಾಲಕರ ಶೌಚಾಲಯವಿರಲಿಲ್ಲ. ಇದಕ್ಕಾಾಗಿ ಈಗ 40 ಲಕ್ಷ ರೂಪಾಯಿ ಮಂಜೂರಾಗಿದೆ. ಈ ಕಾಮಗಾರಿ ಮುಗಿಯುವುದು ತಡವಾಗುತ್ತಿಿರುವದರಿಂದ ತಾತ್ಕಾಾಲಿಕವಾಗಿ ಶೌಚಾಲಯ ನಿರ್ಮಿಸಲು ಗುತ್ತಿಿಗೆದಾರರಿಗೆ ಸೂಚಿಸಲಾಗಿದೆ. ಅವರು ೆಬ್ರುವರಿ ತಿಂಗಳಲ್ಲಿ ಶೌಚಾಲಯ ನಿರ್ಮಿಸಲಾಗುವುದು ಎಂದಿದ್ದಾಾರೆ. ೆಬ್ರುವರಿ ಅಂತ್ಯಕ್ಕೆೆ ವಸತಿ ಶಾಲೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾಾರೆ.
ಬಡ, ದಲಿತ ಮಕ್ಕಳು ಓದುವ ಶಾಲೆಯ ಬಗ್ಗೆೆ ಸರಕಾರದ ತಾತ್ಸಾಾರಕ್ಕೆೆ ಇದು ಉದಾಹರಣೆಯಾಗಿದೆ. ಈಗ ಸಮಾಜ ಕಲ್ಯಾಾಣಾಧಿಕಾರಿಗಳು ನೀಡಿದ ಭರವಸೆಯನ್ನು ಸಕಾಲಕ್ಕೆೆ ಪೂರೈಸುತ್ತಾಾರೆ ಎಂದು ಕಾದು ನೋಡಬೇಕು.
ನಿತ್ಯ ನರಕಯಾತನೆ ಅನುಭವಿಸುತ್ತಿಿರುವ ವಸತಿ ಶಾಲೆ ಮಕ್ಕಳು ಪ್ರತಿಷ್ಠೆ ಬಿಟ್ಟು ನೂತನ ಕಟ್ಟಡ ಉದ್ಘಾಾಟಿಸಿ ಎನ್ನುತ್ತಿರುವ ಜನ

