ಜನರು ಬ್ರಷ್ಟಾಚಾರವನ್ನು ಕಿತ್ತೊಗೆಯುತ್ತಾರೆ : ಡಾ. ಆಜಯಸಿಂಗ್
ಶರಣಗೌಡ ಪೊಲೀಸಪಾಟೀಲ್ ಬಿಜೆಪಿ ತೊರೆದು ಅಪಾರ ಅಭಿಮಾನಿಗಳೊಂದಿಗೆ ಶಾಸಕ ಡಾ. ಅಜಯಸಿಂಗ್ ಸಮ್ಮುಕದಲ್ಲಿ ಕಾಂಗ್ರೆಸ್ ಸೇರಪಡೆ ಗೊಂಡರು.
ಜೇವರ್ಗಿ 13 : ರಾಜ್ಯದಲ್ಲಿ ಬ್ರಷ್ಟಾಚಾರ ತುಂಬಿ ತುಳುಕಿದೆ ಅದನ್ನ ಜನರು ಕಿತ್ತೊಗೆಯುತ್ತಾರೆ ಎಂದು ಶಾಸಕ ಡಾ. ಅಜಯಸಿಂಗ್ ಅಭಿಮತಪಟ್ಟರು.
ಪಟ್ಟಣದ ಹೊರವಲಯದ ಧರ್ಮಸಿಂಗ ಕಲ್ಯಾಣ ಮಂಟಪದಲ್ಲಿ ವಿವಿದ ಪಕ್ಷಗಳನ್ನ ತೊರೆದು ಕಾಂಗ್ರೆಸ್ ಪಕ್ಷ ಸೇರಪಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೆಶಿಸಿ ಶಾಸಕ ಡಾ. ಅಜಯಸಿಂಗ ಮಾತನಾಡಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಸರಕಾರವನ್ನು ಕರ್ನಾಟಕ ಸರಕಾರ ಎಂದು ಕರೆಯದೆ ಭ್ರಷ್ಟ ಸರಕಾರ ಎಂದು ಜನರು ಕರೆಯುತ್ತಿದ್ದಾರೆ. ಒಂದು ಸಮಾಜದ ಸೌಲಭ್ಯವನ್ನು ಮತ್ತೊಂದು ಸಮಾಜಕ್ಕೆ ನೀಡುವುದು ಎಷ್ಟು ಸರಿ ಎಂಬುವುದು ತಿಳಿಯುತ್ತಿಲ್ಲ. ಬಿಜೆಪಿ ಯವರು ಜೆಡಿಎಸ್ ಸೆರಪಡೆ ಗೊಳುತ್ತಾರೆ, ಚುನಾವಣೆಯ ನಂತರ ಮತ್ತೆ ಬಿಜೆಪಿಗೆ ಸೇರುತ್ತಾರೆ.
ಈ ಸಲ ರಾಜ್ಯದಲ್ಲಿ 150 ರಿಂದ 130 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲುತ್ತದೆ. ರಾಜ್ಯದಲ್ಲಿ ನಮ್ಮ ಸರಕಾರ ಸಂಪೂರ್ಣ ಭಹುಮತ ಪಡೆದು ಆಡಳಿತ ನಡೆಸುತ್ತದೆ. ಚುನಾವಣೆ ಎಂದರೆ ಎಚ್ಚರವಾಗಿರಬೇಕು. ಅನೇಕ ಪಕ್ಷಗಳನ್ನು ತೊರೆದು ಇಂದು ನಮ್ಮ ಪಕ್ಷಕ್ಕೆ ಸೇರಪಡೆ ಗೊಂಳುತ್ತಿದ್ದಾರೆ. ನಾವೆಲ್ಲರು ಕೂಡ ಒಂದಾಗಿ ಚುನಾವಣೆಯನ್ನ ಮಾಡೊಣ. ನಾನೊಬ್ಬನೆ ಎನು ಮಾಡಿದರು ಆಗುವುದಿಲ್ಲ, ನೀವೆಲ್ಲರು ಸೇರಿ ಚುನಾವಣೆಯಲ್ಲಿ ಶ್ರಮಿಸಿದರೆ ಮಾತ್ರ ಸಾದ್ಯವಾಗುತ್ತದೆ.
ಶರಣಗೌಡ ಪೊಲೀಸ್ ಪಾಟೀಲ್ ನರಿಬೋಳ, ಭೀಮಣ್ಣ ನಾಯ್ಕೋಡಿ, ವಿಜಯ್ ನಾಯ್ಕೋಡಿ, ವೀರಭದ್ರ, ನಿಂಗಣ್ಣ ಗಡ್ಡದ, ಸಿದ್ದರಾಮ್ ಗಡ್ಡದ, ನಬೀಶ್, ದೊಡ್ಡಪ್ಪ, ಶರಣಪ್ಪ, ಅಂಬ್ರಪ್ಪ, ಶರಣಪ್ಪ, ಅಯ್ಯಣ್ಣ ದೇಸಾಯಿ, ಪರಿಸರಂ ದೇಸಾಯಿ,
ಈ ಸಂದರ್ಭದಲ್ಲಿ ಸಿದ್ದಲಿಂಗ ರೆಡ್ಡಿ ಇಟಗಾ, ಚಂದ್ರಶೇಖರ ಹರನಾಳ, ಕಾಸಿಂ ಪಟೇಲ್ ಮುದವಾಲ, ರಾಜಶೇಖರ ಸೀರಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ್, ರಾಘವೇಂದ್ರ ಕುಲಕರ್ಣಿ, ಶಾಂತಪ್ಪ ಕೂಡಲಗಿ, ಚನ್ನಮಲಯ್ಯ ಹಿರೇಮಠ, ರವಿ ಕೋಳಕೂರ, ಸಾಯಬಣ್ಣ ಬಳಬಟ್ಟಿ, ಶರಣಗೌಡ ಪೊಲೀಸ್ ಪಾಟೀಲ್ ನರಿಬೋಳ, ಮೈಮುದ ನೂರಿ, ಫಾತಿಮ ಬೇಗಂ, ಮಾಜೀದ ಸೇಠ ಗಿರಣಿ, ವಿಜಯಕುಮಾರ ಹಿರೇಮಠ, ಭಗವಂತ್ರಾಯ ಪಾಟೀಲ್, ಶಿವಕುಮಾರ ಕಲ್ಲಾ, ಶೌಕತ ಅಲಿ ಆಲೂರ, ಗುರು ಸುಭೆಧಾರ, ಕಾಶಿರಾಯ ಯಲಗೋಡ ಸೇರಿದಂತೆ ಅನೇಕರಿದ್ದರು.