ಸುದ್ದಿಮೂಲ ವಾರ್ತೆ ಮಾನ್ವಿ, ಜ.27:
ಸಂವಿಧಾನದ ಮೌಲ್ಯಗಳನ್ನು ನಾವು ಜನರಿಗೆ ತಿಳಿಸಬೇಕಾಗಿದೆ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿಿ ಹೇಳಿದರು.
77ನೇ ಗಣರಾಜ್ಯೋೋತ್ಸವ ಪ್ರಯುಕ್ತ ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಿಲಾ ಲಕದ ಮೂಲಕ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸಿ, ಈ ಮೂಲಕ ಸಮಾನತೆ, ಸೌಹಾರ್ದತೆ ಮೂಡಿಸುವ ಪ್ರಯತ್ನ ಹಿರಿಯರು ಹಾಗೂ ಯುವಕರಿಂದ ಆಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ.ಬಸವಂತಪ್ಪ, ಲಕ್ಷ್ಮಿಿದೇವಿ ನಾಯಕ ಸಂವಿಧಾನ ಹಾಗೂ ಗಣರಾಜ್ಯೋೋತ್ಸವ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಿಕಾರ್ಡ್ ಬ್ಯಾಾಂಕಿನ ಮಾಜಿ ಅಧ್ಯಕ್ಷ ಸೈಯದ್ ಆಬೀದ್ ಖಾದ್ರಿಿ, ವಿಎಸ್ಎಸ್ಎನ್ ಸಂಘದ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ಮುಖಂಡರಾದ ಸೈಯದ್ ಸಾಜೀದ್ ಖಾದ್ರಿಿ, ಹುಸೇನ್ ಬೇಗ್, ಪಿ.ಜಯಪ್ರಕಾಶ, ಮೊಹಮ್ಮದ್ ಇಸ್ಮಾಾಯಿಲ್, ಎಂ.ಡಿ.ಮಹೆಮೂದ್, ಯಲ್ಲಪ್ಪ ವಕೀಲ, ದತ್ತಾಾತ್ರೇೇಯ ಕೊಟ್ನೆೆಕಲ್ ವಕೀಲ, ರಹೆಮತ್ ಸೇರಿದಂತೆ ಯುವಕರು ಉಪಸ್ಥಿಿತರಿದ್ದರು.
ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಿಳಿಸಬೇಕಾಗಿದೆ-ಸೈ.ನಜೀರುದ್ದೀನ್ ಖಾದ್ರಿ

