ಸುದ್ದಿಮೂಲ ವಾರ್ತೆ
ರಾಯಚೂರು,ಜು.11:ರಾಯಚೂರು ನಗರದ ವಾರ್ಡ್ 29ರ ಎಲ್ ಬಿಎಸ್ ನಗರದ ನಿವಾಸಿಗಳು ಕುಡಿಯುವ ನೀರಿಗಾಗಿ ಬಿಂದಿಗೆ ಹಿಡಿದು ಪಂಪ್ ಹೌಸ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವಾರ್ಡಿನ ಸದಸ್ಯರು ಸಹಿತ ಸಮಸ್ಯೆ ಆಲಿಸಿ ಪರಿಹಾರ ಹುಡುಕದೆ ಇರುವುದು ಮುಂದುವರಿದಿದೆ.
ನೀರು ಬರದ ಕಾರಣ ವಾರ್ಡಿನ ನಿವಾಸಿಗಳು ಏಕಾಏಕಿ ಹೈದರಾಬಾದ್ ರಸ್ತೆಯಲ್ಲಿರುವ ನಗರಸಭೆಯ ಪಂಪ್ ಹೌಸಿಗೆ ಮತ್ತಿಗೆ ಹಾಕಿ ಪ್ರತಿಭಟಿಸಿದರು.
ನಮ್ಮ ಗೋಳು ಕೇಳುವವರಿಲ್ಲ. ನಗರಸಭೆಯ ವರು ಕನಿಷ್ಠ ನೀರು ಸಹಿತ ಪೂರೈಕೆ ಮಾಡದೆ ಹೋದರೆ ಹೇಗೆ. ನಿತ್ಯ ನೀರಿಗಾಗಿ ಖಾಸಗಿ ಬೋರವೆಲ್ ಇರುವ ಮನೆಯವರಿಗೆ ದುಂಬಾಲು ಬೀಳುವಂತಾಗಿದೆ ಎಂದು ದೂರಿದರು.
ತಕ್ಷಣ ಸ್ಥಳಕ್ಕೆ ಪೌರಾಯುಕ್ತರು ಆಗಮಿಸಿ ನೀರು ಪೂರೈಕೆಗೆ ಸೂಚಿಸಬೇಕು. ಇಲ್ಲವಾದರೆ ಪಂಪ್ ಹೌಸ್ ನ ಬಾಗಿಲು ಹೊಡೆದು ನೀರು ಬಿಟ್ಟುಕೊಳ್ಳುತ್ತೇವೆ ಎಂದು ಎಚ್ವರಿಸಿದರು.