ಸುದ್ದಿಮೂಲ ವಾರ್ತೆ ಯಾದಗಿರಿ, ನ.30:
ಗುರುಮಿಠಕಲ್ ಮತಕ್ಷೇತ್ರದ ಪ್ರಮುಖ ಹೋಬಳಿಗಳಲ್ಲಿ ಹತ್ತಿಿಕುಣಿ ಗ್ರಾಾಮ ಒಂದಾಗಿದೆ, ಸರ್ಕಾರ ಇಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರಾಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆೆ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ ಮಾಡಿದೆ, ಕಾರಣ ಈ ಭಾಗದ ಜನರು ಹೆಚ್ಚಿಿನ ಸಂಖ್ಯೆೆಯಲ್ಲಿ ಆರೋಗ್ಯ ಸೇವೆ ಬಳಸಿಕೊಳ್ಳಬೇಕು ಎಂದು ಆಸ್ಪತ್ರೆೆಯ ವೈದ್ಯಾಾಧಿಕಾರಿಗಳಾದ ಡಾ. ಬಿ.ಎಸ್ ಪಾಟೀಲ್ ಗಾಜರಕೋಟ್ ಹೇಳಿದರು.
ಶನಿವಾರ ಹತ್ತಿಿಕುಣಿ ಗ್ರಾಾಮದ ನೂತನ ಆಸ್ಪತ್ರೆೆಯಲ್ಲಿ ಸುಭಾಶ್ಚಂದ್ರಸ್ವಾಾಮಿ ನೇತೃತ್ವದಲ್ಲಿ ಹಮ್ಮಿಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇತ್ತೀಚೆಗೆ ಗುರುಮಿಠಕಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಆಸ್ಪತ್ರೆೆಯನ್ನು ಉದ್ಘಾಾಟಿಸಿದ್ದಾರೆ, ಸಂಪ್ರದಾಯದಂತೆ ಪೂಜೆ ಮಾಡಿ, ರೋಗಿಗಳಿಗೆ ಚಿಕಿತ್ಸೆೆ ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿಿದ್ದೇವೆ ಎಂದು ತಿಳಿಸಿದರು.
ಇಲ್ಲಿಯೇ ಸಿಬ್ಬಂದಿಗಳಿಗೆ ರಾತ್ರಿಿ ತಂಗಲು ವಸತಿ ಗೃಹಗಳನ್ನು ನಿರ್ಮಾಣ ಮಾಡಿದಿರುವುದರಿಂದ ತುರ್ತು ಚಿಕಿತ್ಸೆೆ ನಿಮಿತ್ಯ ಆಸ್ಪತ್ರೆೆಗೆ ಬರುವ ರೋಗಿಗಳಿಗೆ ಚಿಕಿತ್ಸೆೆ ನೀಡಲು ಸಹಕಾರಿಯಾಗಿದೆ.
ಆರೋಗ್ಯ ಕೇಂದ್ರ ವ್ಯಾಾಪ್ತಿಿಯಲ್ಲಿ ಅತಿ ಹೆಚ್ಚು ಗ್ರಾಾಮಗಳು, ತಾಂಡಾಗಳು ಬರುತ್ತವೆ, ರೋಗಿಗಳಿಗೆ ನಮ್ಮ ತಂಡ ಗುಣಮಟ್ಟದ ವೈದ್ಯಾಾಕೀಯ ಸೇವೆ ನೀಡುತ್ತಿಿದೆ, 1 ತಿಂಗಳಲ್ಲಿ ಆಸ್ಪತ್ರೆೆಯಲ್ಲಿ 25-30 ಮಹಿಳೆಯರ ಹೆರಿಗೆ ಆಗುತ್ತಿಿವೆ, ಇತ್ತೀಚೆಗೆ ಆಸ್ಪತ್ರೆೆಗೆ ಭೇಟಿ ನೀಡಿದ್ದ ಡಿಹೆಚ್ಓ ಅವರು ಇಲ್ಲಿನ ಚಟುವಟಿಕೆಗಳಿಗೆ ಗಮನಿಸಿ, ರೋಗಿಗಳಿಗೆ ಅನುಕೂಲವಾಗಲು ಸರ್ಕಾರದಿಂದ ಆಂಬ್ಯುಲೆನ್ಸ್ ವಾಹನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆೆಯಲ್ಲಿ ಹಾಗೂ ಆವರಣದಲ್ಲಿ ಪರಿಸರ ಸ್ವಚ್ಚತೆಗೆ ನಾವೂ ಮೊದಲು ಆದ್ಯತೆ ನೀಡುತ್ತೇವೆ, ಬರುವ ದಿನಗಳಲ್ಲಿ ಗಿಡ-ಮರಗಳನ್ನು ಬೆಳೆಸಿ, ಉತ್ತಮ ವಾತಾವರಣ ನಿರ್ಮಾಣಕ್ಕೆೆ ಪ್ರಾಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆೆಯ ಆಡಳಿತ ಮಂಡಳಿಯ ವೈದ್ಯಾಾಧಿಕಾರಿ ಡಾ, ಮುಧಾಸೀರ್ ಅಹ್ಮದ್, ಸಿಬ್ಬಂದಿಗಳಾದ ಭೀಮರಾಯ, ದೇವಿಂದ್ರಪ್ಪ, ಪಾಲಪ್ಪ, ಶ್ವೇತಾ, ಪುಷ್ಪಾಾಂಜಲಿ, ಶಾಲಿನಿ, ವಿಮಲಾ, ಶ್ರೀದೇವಿ, ದಶರಥ ಎಲ್ಲಾ ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಾಮಸ್ಥರು ಉಪಸ್ಥಿಿತರಿದ್ದರು.
ಜನರು ನೂತನ ಆಸ್ಪತ್ರೆಯ ಆರೋಗ್ಯ ಸೇವೆ ಬಳಸಿಕೊಳ್ಳಿ : ಡಾ. ಪಾಟೀಲ್

