ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಆ.30:ರಾಜ್ಯ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ. ಆದರೆ ನಗರದ ಮಹದೇವಪುರ ಬಿಬಿಎಂಪಿ ವಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಲಿ ಕುರ್ಚಿಗಳಿಗೆ ಕಾಂಗ್ರೇಸ್ ನಾಯಕರು ಭಾಷಣ ಮಾಡುವಂತಾಗಿತ್ತು.
ಮಹದೇವಪುರ ಕ್ಷೇತ್ರದ ಹಗದೂರು ವಾಡ್೯ನ ಇಮ್ಮಡಹಳ್ಳಿ ಸರ್ಕಾರಿ ಶಾಲೆ, ಕಾಡುಗೂಡಿ ಖಾಸಗಿ ಕಲ್ಯಾಣ ಮಂಡಪ ಹೀಗೆ ಹಲವಾರು ಭಾಗಗಳಲ್ಲಿ ಹತ್ತು ಹದಿನೈದು ಜನರನ್ನು ಕೂರಿಸಿಕೊಂಡು ಭಾಷಣ ಮಾಡಿದ ಕಾಂಗ್ರೇಸ್ ನ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಮಾಜಿ ಸಚಿವ ಹೆಚ್.ನಾಗೇಶ್ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಇದೊಂದು ಮಹತ್ತರವಾದ ಯೋಜನೆ ಮನೆ ಯಜಮಾನಿಗೆ ಒಂದು ಗೌರವ ಕೊಡುವ ಕಾರ್ಯಕ್ರಮ, ತನ್ನ ಸಂಸಾರ ಜವಾಬ್ದಾರಿ ಹೊತ್ತು ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬುವ ಯೋಜನೆ ಇದಾಗಿದೆ, ಇಂತಹ ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ವಾಡ್೯ ಮಟ್ಟದಲ್ಲಿ ಜನರಿಗೆ ಮಾಹಿತಿ ನೀಡಲಿಲ್ಲ, ಪ್ರತಿ ವಾಡ್೯ನಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ ಅಧಿಕಾರಿಗಳು ಕಾಟಾಚಾರಕ್ಕೆ ಆಯೋಜನೆ ಮಾಡಿದ್ದಾರೆ ಎಂದರು.