ಸುದ್ದಿಮೂಲ ವಾರ್ತೆ ಚಿಂತಾಮಣಿ, ಡಿ.11 : ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಈ ಹಿಂದೆ 10,15,20 ವರ್ಷಗಳ ಕಾಲ ಅತಿ ಕಡಿಮೆ ಸಂಬಳಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅತಿಥಿ ಉಪನ್ಯಾಸಕರಿಗೆ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಗೆ ವಿರುದ್ಧವಾಗಿ ಇಂದು ಶಾಶ್ವತ ನಿರುದ್ಯೋಗ ಭಾಗ್ಯವನ್ನು ಕಲ್ಪಿಸಿ ಬಿಡಿಗಾಸು ಇಲ್ಲದೆ ಹೊರತಳ್ಳಿದೆ.
2003 ಲ್ಲಿ ಅರೆಕಾಲಿಕ ಉಪನ್ಯಾಸಕರನ್ನು ಖಾಯಂ ಉಪನ್ಯಾಸಕರಾಗಿ ಮಾಡಿದ ಅಂದಿನ ಸರ್ಕಾರಗಳು, ನಂತರದ ದಿನಗಳಲ್ಲಿ ಅರೆಕಾಲಿಕ ಬದಲಿಗೆ ಅತಿಥಿ ಉಪನ್ಯಾಸಕರ ಪಟ್ಟವನ್ನು ನೀಡಿ ಅತಿಥಿ ಉಪನ್ಯಾಸಕರ ಜೀವನದೊಂದಿಗೆ ಆಟವಾಡಿದ್ದು, ಇಂದು 6600 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾಗಿದ್ದರೂ ಸರ್ಕಾರಕ್ಕೆ ಕಣ್ಣಿಗೆ ಕಾಣದಂತಾಗಿದೆ. ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ಪ್ರಶ್ನೆ ಮುಂದಿಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ನಿಮ್ಮ ಮಗ ಯತೀಂದ್ರ ಸಿದ್ಧರಾಮಯ್ಯರಿಗೆ ರಾಜಕೀಯ ದಾರಿಯನ್ನು ಏಕೆ ತೋರಿಸಿದ್ದೀರಿ ನಮ್ಮಂತೆ ಯಾವುದಾದರೂ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನನ್ನಾಗಿಸಬಹುದಿತ್ತಲ್ಲವೇ? ನಿಮ್ಮ ಮಕ್ಕಳಿಗೊಂದು ನ್ಯಾಯ ರಾಜ್ಯದ ಜನತೆಯ ಮಕ್ಕಳಿಗೊಂದು ನ್ಯಾಯವೇ?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರೇ, ಪಂಚಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ನೀವುಗಳು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಾಗಿ ಹೇಳಿ ಇಂದು ಸಂಪೂರ್ಣವಾಗಿ ಅವರನ್ನು ಬೀದಿಗೆ ತಳ್ಳಿದ್ದೀರಾಲ್ಲವೇ ಇದೇ ಪರಿಸ್ಥಿತಿ ನಿಮ್ಮ ಮನೆಯಲ್ಲಿಯುಂಟಾಗಿದ್ದರೆ ನೀವು ಯಾರನ್ನು ಪ್ರಶ್ನಿಸುತ್ತಿದ್ದೀರಿ? ಎಂ.ಎ, ಎ.ಕಾಂ, ಎಂ.ಎಸ್ಸಿ, ಬಿ.ಎಡ್, ಎಂ.ಫಿಲ್, ಪಿಹೆಚ್ಡಿ ಸೇರಿದಂತೆ ಹಲವು ಪದವಿಗಳನ್ನು 20,15, 10 ವರ್ಷಗಳ ಹಿಂದೆ ಪಡೆದಿದ್ದು ಆಗ ಆಯ್ಕೆ ಮಾಡಿಕೊಳ್ಳುವಾಗ ಯಾಕೆ ನೆಟ್, ಸ್ಲೇಟ್, ಪಿಹೆಚ್ಡಿ ಕಡ್ಡಾಯವಾಗಿಸಲಿಲ್ಲ, ಅತಿಥಿ ಉಪನ್ಯಾಸಕರ ಶಕ್ತಿಯನ್ನು ಹೀರಿ ಹಿಪ್ಪೆ ಮಾಡಿ ಹೊರತಳ್ಳುವುದು ಸರಿಯೇ?
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಳಾ ಮೇಡಮ್ರವರೇ: ನೀವು ಬರುವ ಮುಂಚೆ ಸಾಕಷ್ಟು ಆಯುಕ್ತರು ಬಂದು ಹೋಗಿದ್ದಾರೆ ಬಡ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಸಂತೃಪ್ತಿಯಿAದ ಕಡಿಮೆ ವೇತನದಲ್ಲೇ ಪಡೆಯುತ್ತಿದ್ದರೂ ಏಕಾಏಕೀ ಯುಜಿಸಿ – ನಾನ್ ಯುಜಿಸಿ ಎಂದು ಅತಿಥಿ ಉಪನ್ಯಾಸಕರನ್ನು ಹಿಬ್ಭಾಗ ಮಾಡಿ ಶಾಶ್ವತವಾಗಿ ಅತಿಥಿ ಉಪನ್ಯಾಸಕರಿಗೆ ತಿಥಿ ಗ್ಯಾರಂಟಿ ನೀಡಿದ ಮಹಾನ್ ಮಾತೃ ಹೃದಯದವರು ನೀವು ಮೇಡಮ್.
ಹೈಕೋರ್ಟ್ ನ್ಯಾಯಾಧೀಶರವರೇ: ಅತಿಥಿ ಉಪನ್ಯಾಸಕರ ಕೆಲಸಗಳಲ್ಲಿ ನಿಮ್ಮ ಮಕ್ಕಳು ಇಲ್ಲ ಅಲ್ಲವೇ ಯಾಕೆಂದರೆ ತಾವು ನೀಡಿದ ಅಸಂಬದ್ಧ ತೀರ್ಪಿನಿಂದಾಗಿ 6600 ಅತಿಥಿ ಉಪನ್ಯಾಸಕರು ಅವರನ್ನು ನಂಬಿದ ೩೦ಸಾವಿರ ಮಂದಿ ಶಾಶ್ವತ ನಿರುದ್ಯೋಗವನ್ನು ಕರುಣಿಸಿದ ಒಂದು ಕಡೆಯವರ ವಾದವನ್ನು ಮಾತ್ರ ಪುರಸ್ಕರಿಸಿ ಮತ್ತೊಂದೆಡೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಹೊರಹೋದರೆ ಅವರಿಗೆ ಸಮಾಜದಲ್ಲಿ ಉದ್ಯೋಗವಕಾಶ ಸಿಗಲಿದೆಯೇ ಅವರ ಮುಂದಿನ ಜೀವನದ ಬಗ್ಗೆ ಕಿಂಚಿತ್ತು ಆಲೋಚನೆ ಇಲ್ಲದೆ ನೀಡಿದ ತೀರ್ಪು ಭಾರತ ಸ್ವಾತಂತ್ರö್ಯಕ್ಕಾಗಿ ಬ್ರೀಟಿಷರ ವಿರುದ್ಧ ಹೋರಾಡಿ ಮಡಿದ ಅನಾಮಧೇಯರಂತಿದೆ. ಈ ಪರಿಸ್ಥಿತಿ ನಿಮ್ಮ ನ್ಯಾಯಾಂಗ ಇಲಾಖೆಯಲ್ಲಿ ಮಾಡುತ್ತಿರುವ ಯಾರ ಮಕ್ಕಳಿಗೂ ಬರದಿರಲಿ.
2023ರ ಕಾಂಗ್ರೇಸ್ ಸರ್ಕಾರ ಶಾಶ್ವತ ನಿರುದ್ಯೋಗವನ್ನು ಒದಗಿಸಿದ ಮಾತು ತಪ್ಪಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಸಚಿವ ಸಂಪುಟ ನೀತಿಗಳಿಂದ ಬಂದ ದುಸ್ಥಿತಿಯೆಂದು ಅತಿಥಿ ಉಪನ್ಯಾಸಕರ ರೋಧನೆಯಾಗಿದೆ.

