ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.24
ಪ್ರಸಕ್ತ 2025-26 ನೇ ಸಾಲಿನಲ್ಲಿ ರಾಜ್ಯಾಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸುಮಾರು 360.01 ಕೋಟಿ ರೂ. ವೆಚ್ಚದಲ್ಲಿ ಸುಮಾರು 2,200 ತರಗತಿ ಕೊಠಡಿಗಳ ನಿರ್ಮಾಣಕ್ಕೆೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿ ಆದೇಶಿಸಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಶಾಲಾವಾರು ಪಟ್ಟಿಿಯಂತೆ ಹಾಗೂ ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ನಿಗದಿತ ಕಾಲಾವಧಿಯಲ್ಲಿ ಅನುಷ್ಠಾಾನಗೊಳಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಮೂಲಕ ವಲಯ ಮಟ್ಟದಲ್ಲಿ ಟೆಂರ್ಡ ಕರೆಯಲು ಅವಕಾಶ ನೀಡುವುದು, ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆೆಗಳ ನಿರ್ವಹಣಾ ಕೇಂದ್ರಕ್ಕೆೆ ವಹಿಸಿ ಟೆಂರ್ಡ ಕರೆಯಲು ಅವಕಾಶ ನೀಡುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾಮಟ್ಟದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಉಪನಿರ್ದೇಶಕರು ಕಾಮಗಾರಿಗಳ ಮೇಲ್ವಿಿಚಾರಣೆ ನಡೆಸಬೇಕು. ಪ್ರಾಾಥಮಿಕ ಮತ್ತು ಪ್ರೌೌಢಶಾಲೆಗಳಿಗೆ ಮೂಲ ಸೌಕರ್ಯಕ್ಕೆೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನವನ್ನು ತ್ರೈಮಾಸಿಕವಾರು ಬಿಡುಗಡೆ ಮಾಡಲು ಆಯುಕ್ತರಿಗೆ ಅನುಮತಿ ನೀಡಲಾಗಿದೆ.
ಅನುದಾನ ಬಳಕೆಯಲ್ಲಿ ಯಾವುದೇ ಇತರ ಯೋಜನೆಯಲ್ಲಿ ಪುನರಾವರ್ತನೆ ಹಾಗೂ ಅನುದಾನ ದುರುಪಯೋಗವಾಗದಂತೆ ಆಯುಕ್ತರು ಖಚಿತಪಡಿಸಿಕೊಳ್ಳಬೇಕು. ಉದ್ದೇಶಿತ ಕಾಮಗಾರಿಗಳನ್ನು ನಿಗದಿಪಡಿಸಿದ ಸಂಸ್ಥೆೆಯಿಂದ ನಿರ್ವಹಿಸಬೇಕು. ಪ್ರಾಾಥಮಿಕ ಶಾಲಾ ತರಗತಿ ಕೊಠಡಿ ನಿರ್ಮಾಣ ಕಾಮಗಾರಿಗೆ 14.50 ಲಕ್ಷ ಪ್ರೌೌಢಶಾಲಾ ತರಗತಿ ಕೊಠಡಿ ನಿರ್ಮಾಣ ಕಾಮಾರಿಗೆ 17.15 ಲಕ್ಷ ಘಟಕ ವೆಚ್ಚದಂತೆ ಕಾಮಗಾರಿ ನಿರ್ವಹಿಸಬೇಕು ಎಂಬುದೂ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.

