ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.11:
ತಾಲ್ಲೂಕಿನ ಶ್ರೀಪುರಂಜಂಕ್ಷನ್ ಬಳಿ ಬೆಳಗಿನ ಜಾವ ಬುಲೆರೋ ವಾಹನ ಡಿಕ್ಕಿಿ ಹೊಡೆದ ಪರಿಣಾಮ ಓರ್ವ ವ್ಯಕ್ತಿಿ ಸ್ಥಳದಲ್ಲಿಯೇ ಮೃತಪಟ್ಟಿಿದ್ದಾಾರೆ.
ಕಲಬುರಗಿ ಮೂಲದ ಶಿವಕರಣ (58) ಮೃತ ದುರ್ದೈವಿ. ಈತನು ರಸಗೊಬ್ಬರ ವ್ಯಾಾಪಾರಿಯಾಗಿದ್ದು, ಬೆಂಗಳೂರಿನಿಂದ ಸಭೆ ಮುಗಿಸಿಕೊಂಡು ತಮ್ಮ ಗೆಳೆಯರೊಂದಿಗೆ ಕಲಬುರಗಿಗೆ ಖಾಸಗಿ ಬಸ್ನಲ್ಲಿ ಪ್ರಯಾಣಿ ಸುತ್ತಿಿದ್ದರು. ಬೆಳಗಿನ ಜಾವ ಸಿಂಧನೂರು ತಾಲ್ಲೂಕಿನ ಶ್ರೀಪುರಂಜಂಕ್ಷನ್ನಲ್ಲಿರುವ ಎ1 ಹೋಟೆಲ್ ಬಳಿ ಚಹ ಕುಡಿಯಲು ಬಸ್ ನಿಲ್ಲಿಸಿದಾಗ ಮೂತ್ರ ವಿಸರ್ಜನೆಗೆಂದು ರಸ್ತೆೆ ದಾಟುವಾಗ ಸಿಂಧನೂರಿನಿಂದ ಗಂಗಾವತಿ ಕಡೆಗೆ ಹೊರಟಿದ್ದ ಬುಲೆರೋ ವಾಹನ ಡಿಕ್ಕಿಿ ಹೊಡೆದಿದೆ. ಇದರಿಂದ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾಾವವಾಗಿ ಸಾವನ್ನಪ್ಪಿಿದ್ದಾಾನೆ.
ವಿಷಯ ತಿಳಿಯುತ್ತಿಿದ್ದಂತೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆೆ ಧಾವಿಸಿ ಮೃತದೇಹವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಾಂತರಿಸಿದ್ದಾಾರೆ. ಬುಲೆರೋ ವಾಹನ ಚಾಲಕ ಸುರೇಶ ಯಮನಪ್ಪ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದಾಗಿ ಸಬ್ಇನ್ಸ್ಪೆಕ್ಟರ್ ಚಂದ್ರಶೇಖರ ಹಿರೇಮಠ ಅವರು ತಿಳಿಸಿದ್ದಾಾರೆ.

