ಸುದ್ದಿಮೂಲ ವಾರ್ತೆ ರಾಯಚೂರು, ಡಿ.18:
ವಿಶಾಖಪಟ್ಟಣದಿಂದ ಮೆಹಬೂಬ್ ನಗರ ನಡುವೆ ದಿನಂಪ್ರತಿ ಓಡಾಡುತ್ತಿಿರುವ ರೈಲನ್ನು ರಾಯಚೂರವರೆಗೆ ವಿಸ್ತರಿಸುವಂತೆ ರಾಯಚೂರು ಸಂಸದ ಜಿ.ಕುಮಾರ ನಾಯಕ ಹಾಗೂ ಮಹಿಬೂಬ್ ನಗರ ಸಂಸದೆ ಡಿ. ಅರುಣಾ ಅವರು ಕೇಂದ್ರ ರೈಲ್ವೆೆ ಸಚಿವರಿಗೆ ಜಂಟಿಯಾಗಿ ಮನವಿ ಮಾಡಿದರು.
ಉಭಯ ಸಂಸದರು ಇಂದು ರೈಲ್ವೆೆ ಮಂತ್ರಿಿಗಳಾದ ಅಶ್ವಿಿನ್ ವೈಷ್ಣವ್ ಅವರ ಭೇಟಿಯಾಗಿ ಮನವಿ ಸಲ್ಲಿಸಿ ಜನರಿಗೆ ಅನುಕೂಲ ಮಾಡಿಕೊಡಲು ಕೋರಿದರು. ಸದ್ಯ ಈ ರೈಲು ವಿಶಾಖಪಟ್ಟಣ ಮೂಲಕ ಬಂದು ಮಹಬೂಬನಗರಕ್ಕೆೆ ಬೆಳಿಗ್ಗೆೆ 9ರಿಂದ ನಿಲುಗಡೆಯಾಗಲಿದೆ. ಇದನ್ನು ರಾಯಚೂರವರೆಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಅನುಕೂಲದ ಜೊತೆಗೆ ಆದಾಯವೂ ಹೆಚ್ಚಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಈ ರೈಲು ಮಕ್ತಲ್, ಕೃಷ್ಣಾಾ ಮೂಲಕ ರಾಯಚೂರಿಗೆ ಮಧ್ಯಾಾಹ್ನ 12ಕ್ಕೆೆ ತಲುಪಿದರೆ ಪುನಃ 3ಕ್ಕೆೆ ಮಹಬೂನಗರ ತಲುಪಿ ಅಲ್ಲಿಂದ ವಿಶಾಖಪಟ್ಟಣಕ್ಕೆೆ ಮರಳಲಿದೆ. ಸಂಜೆ 4ಕ್ಕೆೆ ಗಂಟೆಗೆ ವಿಶಾಖಪಟ್ಟಣಂ ಕಡೆಗೆ ಪ್ರಯಾಣ ಬೆಳೆಸಬಹುದು ಎಂದು ಮಾಹಿತಿ ನೀಡಿದರು. ಈ ಈ ರೈಲು ಎರಡೂ ರಾಜ್ಯಗಳನ್ನು ಹಾದು ಹೋಗುತ್ತದೆ ಅಲ್ಲದೆ ಪವಿತ್ರ ಕ್ಷೇತ್ರಗಳಾದ ಅನ್ನಾಾವರಂ ಮತ್ತು ಸಿಂಹಾಚಲಂ ಸಂದರ್ಶಿಸಲು ಅನುಕೂಲವಾಗಲಿದೆ ಎಂದರು.
ಇದಕ್ಕೂ ಮುನ್ನ ರಾಯಚೂರು ಜಿಲ್ಲಾಾ ಕಮ್ಮಾಾ ಸಮಾಜದ ಅಧ್ಯಕ್ಷ ಪ್ರಸಾದ್, ಆನಂದ್, ಕೊಂಡಯ್ಯ, ರಮೇಶ್ ಬೋಸ್ ಇತರರು ನವದೆಹಲಿಗೆ ತೆರಳಿ ಈ ಸಂಬಂಧ ಉಭಯ ಜಿಲ್ಲೆೆಗಳ ಸಂಸದರಿಗೆ ಹಾಗೂ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರು. ಇದನ್ನು ತಕ್ಷಣ ಕಣನೆಗೆ ತೆಗೆದುಕೊಂಡ ಉಭಯ ಸಂಸದರು ತಕ್ಷಣ ನಿಯೋಗಕ್ಕೆೆ ರೈಲ್ವೆೆ ಮಂತ್ರಿಿ ಅಶ್ವಿಿನ್ ವೈಷ್ಣವ ಅವರಿಗೆ ಭೇಟಿ ಮಾಡಿಸಿದರು. ಕಮ್ಮಾಾ ಸಮಾಜದ ಮನವಿ ಆಲಿಸಿದ ಸಚಿವರು ಇಬ್ಬರು ಲೋಕಸಭಾ ಸದಸ್ಯರು ಲಿಖಿತವಾಗಿ ಈ ರೈಲು ಒದಗಿಸುವಂತೆ ಮನವಿ ಪತ್ರ ನೀಡಿದರೆ ತಕ್ಷಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾಾರೆ ಎಂದು ರಾಯಚೂರಿನ ಮುಖಂಡರಾದ ಎಸ್. ನಾಗೇಶ್ವರರಾವ್ ಗಡಿನಾಡು ಕನ್ನಡಿಗರ ಹೋರಾಟಗಾರ ಅಮರ ದೀಕ್ಷಿತ್ ತಿಳಿಸಿದ್ದಾರೆ.
ಉಭಯ ಸಂಸದರಿಂದ ರೈಲ್ವೆ ಸಚಿವರಿಗೆ ಮನವಿ ವಿಶಾಖಪಟ್ಟಣ ಮಹಿಬೂಬ ನಗರ ರೈಲು ರಾಯಚೂರಿಗೆ ವಿಸ್ತರಿಸಲು ಮನವಿ, ಸಮ್ಮತಿ

