ಸುದ್ದಿಮೂಲ ವಾರ್ತೆ ಬೆಂಗಳೂರು, ಸೆ.24:
ನಿವೃತ್ತಿಿಗೂ ಮೊದಲೇ ನಿಧನರಾದ 100 ಸರ್ಕಾರಿ ನೌಕರರ ಕುಟುಂಬದವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಅನುಕಂಪದ ಆಧಾರದ ಮೇಲೆ ಉದ್ಯೋೋಗ ಕಲ್ಪಿಿಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಲಾನುಭವಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಕುಟಂಬಕ್ಕೆೆ ಆರ್ಥಿಕ ಬೆನ್ನೆೆಲುಬಾಗಿದ್ದವರನ್ನು ಕಳೆದುಕೊಂಡಾಗ ದೊಡ್ಡ ಆಘಾತವಾಗುತ್ತದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆನ್ನುವ ನಿಯಮವಿದ್ದರೂ ಸಾಕಷ್ಟು ವಿಳಂಬವಾಗುತ್ತದೆ. ಆದರೆ, ನಮ್ಮ ಸರಕಾರ ಯಾರನ್ನೂ ಅಲೆದಾಡಿಸದೇ ತಕ್ಷಣ ಉದ್ಯೋೋಗ ನೀಡಿದೆ ಎಂದರು.
ಸದ್ಯ 116 ಮಂದಿಗೆ ಅನುಕಂಪದ ಆಧಾರದಲ್ಲಿ ಉದ್ಯೋೋಗ ನೀಡಲಾಗಿದ್ದು, ಇನ್ನೂ 60 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಕೂಡ ಅತಿ ಶೀಘ್ರದಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಸರ್ಕಾರದ ಜವಾಬ್ದಾಾರಿಯನ್ನು ಅತ್ಯಂತ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ, ತ್ವರಿತಗತಿಯಲ್ಲಿ ಅನುಷ್ಠಾಾನ ಮಾಡಿರುವಂತ ಒಂದು ಕಾರ್ಯ ಆರೋಗ್ಯ ಇಲಾಖೆಯಲ್ಲಿ ನಡೆದಿದೆ. ಸರ್ಕಾರಿ ವ್ಯವಸ್ಥೆೆಯಲ್ಲಿ ಸರ್ಕಾರದ ಸೇವೆ ಮಾಡುತ್ತಿಿದ್ದಂತಹ ನೌಕರರಿಗೆ ಅವರು ಮೃತಪಟ್ಟಾಾಗ ಅವರ ಕುಟುಂಬದ ಯಾರಾದರೂ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವಂತಹ ಯೋಜನೆ ಇದೆ.
ಆದರೆ ನಮ್ಮ ಆಡಳಿತ ವ್ಯವಸ್ಥೆೆಯಲ್ಲಿ ವರ್ಷಾನುಗಟ್ಟಲೆ ಅವರಿಗೆ ಉದ್ಯೋೋಗ ಸಿಗುವುದಿಲ್ಲ. ಅದಕ್ಕಾಾಗಿ ಓಡಾಡುವಂತ ಪರಿಸ್ಥಿಿತಿ ನಿರ್ಮಾಣವಾಗಿರುತ್ತದೆ. ಈ ಪ್ರಕ್ರಿಿಯೆಗಳು, ಅದರ ಅನುಸರಣೆಗಳು ಮುಂತಾದ ಹಲವರು ಓಡಾಟದಿಂದಾಗಿ ಹಲವಾರು ಬಾರಿ ಎಷ್ಟು ವರ್ಷಗಳಾದರೂ ಕೆಲಸ ಸಿಗುವುದಿಲ್ಲ. ಆದರೆ ಆರೋಗ್ಯ ಇಲಾಖೆಯಲ್ಲಿ ತ್ವರಿತಗತಿಯಲ್ಲಿ ಉದ್ಯೋೋಗ ದೊರಕಿಸಿಕೊಡಲಾಗಿದೆ ಎಂದರು.
ಸರ್ಕಾರಿ ಕೆಲಸ ಪಡೆದುಕೊಂಡವರು ಪ್ರಾಾಮಾಣಿಕವಾಗಿ ಕೆಲಸ ಮಾಡಬೇಕು. ಇಲಾಖೆಗೆ, ಸಮಾಜಕ್ಕೆೆ ಮಾದರಿಯಾಗಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ನೇಮಕಾತಿಗೆ ಬೇಕಾದ ಎಲ್ಲಾ ಪ್ರಕ್ರಿಿಯೆ ಪೂರ್ಣಗೊಳಿಸಿ ಶೀಘ್ರ ಉದ್ಯೋೋಗ ಸಿಗುವಂತೆ ಮಾಡಿರುವ ಕೆಲಸ ಶ್ಲಾಾಘನೀಯ ಎಂದರು.
ಆರೋಗ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯ, ದ್ವಿಿತೀಯ ದರ್ಜೆ ಸಹಾಯಕ, ಆರೋಗ್ಯಾಾಧಿಕಾರಿ, ಗ್ರೂಪ್ ಡಿ ದರ್ಜೆ ಹುದ್ದೆಗಳನ್ನು ನೀಡಲಾಗಿದೆ.
ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್ ಮಾತನಾಡಿ, ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಹಲವಷ್ಟು ವಿನಂತಿಗಳು ಹಾಗೂ ದೂರುಗಳನ್ನು ಇಲಾಖೆ ಸ್ವೀಕರಿಸಿದ್ದು ಪ್ರತಿಯೊಂದನ್ನೂ ಪರಿಶೀಲಿಸಿ ಮೂರು ಹಂತಗಳಲ್ಲಿ ಸಮಾಲೋಚನೆ ನಡೆಸಿ ಈಗಾಗಲೇ ಒಟ್ಟು 116 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ನೀಡಲಾಗಿದೆ ಎಂದರು.
ರಾಷ್ಟ್ರೀಯ ಅರೋಗ್ಯ ಅಭಿಯಾನದ ನಿರ್ದೇಶಕ ಡಾ.ಅವಿನಾಶ್ ಮೆನನ್ ಆರೋಗ್ಯ ಇಲಾಖೆಯ ನಿರ್ದೇಶಕ ವಸಂತ್ ಕುಮಾರ್,ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿಿತರಿದ್ದರು.

