ಸುದ್ದಿಮೂಲ ವಾರ್ತೆ ಲಿಂಗಸುಗೂರು ,ಡಿ.07:
ನಾಟಕ ಬರಹಗಾರರು ಸಮಾಜದ ಅಂಕುಡೊಂಕುಗಳನ್ನು ನಾಟಕದ ಪಾತ್ರಗಳಿಂದ ಸಮಾಜಕ್ಕೆೆ ತಿಳಿಸಿಕೊಡುವ ಬಹುದೊಡ್ಡ ಕಾರ್ಯಮಾಡುತ್ತಿಿದ್ದು ದುಶ್ಚಟಕ್ಕೆೆ ಬಲಿಯಾಗದೆ ತಮ್ಮ ಆರೋಗ್ಯ ಕಾಪಾಡಿಕೊಂಡು ನಾಡಿಗೆ ಉತ್ತಮಸೇವೆ ನೀಡಬೇಕೆಂದು ಗದುಗಿನ ವೀರೇಶ್ವರ ಪುಣ್ಯಾಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ನಾಗರಾಳ ಗ್ರಾಾಮದಲ್ಲಿ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಸಂಘ ಬೆಂಗಳೂರು, ರಾಯಚೂರು ಜಿಲ್ಲಾಾ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ, ನಾಟಕ ಪುಸ್ತಕ ಬಿಡುಗಡೆ ಸಾಧಕರಿಗೆ ಸನ್ಮಾಾನ ಕಾರ್ಯಕ್ರಮದಲ್ಲಿ 2990ನೇ ತುಲಾಭಾರ ಸ್ವೀಕರಿಸಿ ಮಾತನಾಡುತ್ತಾಾ ರಾಜಾಶ್ರಯದಲ್ಲಿದ್ದಂತಹ ಸಂಗೀತ, ನಾಟಕ, ಕಾವ್ಯಗಳು ಅರಮನೆಯಿಂದ ಗುರುಮನೆಗೆ ಬಂದಿವೆ. ಹಾನಗಲ್ ಕುಮಾರಸ್ವಾಾಮಿಗಳು, ಪಂ,ಪಂಚಾಕ್ಷರಿ ಗವಾಯಿಗಳು ಹಾಗೂ ವೀರೇಶ್ವರ ಪುಣ್ಯಾಾಶ್ರಮದ ಪುಟ್ಟರಾಜ ಗುರುಗಳು ಜನಸಾಮಾನ್ಯರ ಬಳಿ ತರುವ ಬಹುದೊಡ್ಡ ಕೆಲಸ ಮಾಡಿದ್ದಾಾರೆ, ಸಾವಿರಾರು ಅನಾಥ ಅಂಧ ವಿಕಲಹೀನರಿಗೆ ಭಿಕ್ಷೆ ಪಾತ್ರೆೆಯನ್ನು ಬಿಡಿಸಿ ಸಂಗೀತ ಸಾಹಿತ್ಯದ ಅಕ್ಷಯ ಪಾತ್ರೆೆಯನ್ನು ನೀಡಿದ್ದಾಾರೆ. ನಾಟಕದ ಪಾತ್ರಗಳ ಮೂಲಕ ಕವಿ ಸುವಿಚಾರಗಳನ್ನು ತಿಳಿಸಲು ಯತ್ನಿಿಸುತ್ತಾಾನೆ ಸಮಾಜವನ್ನು ಏನಾದರು ಸುಧಾರಣೆ ಮಾಡಲು ಸಾಧ್ಯವಿದ್ದರೆ ಅದು ಕವಿಗಳಿಂದ ಮಾತ್ರ ಸಾಧ್ಯ ನಾಗರಾಳದಂತಹ ಕುಗ್ರಾಾಮದಲ್ಲಿ ನಿರುಪಾದಿ ಕವಿಗಳ ಬಹುದೊಡ್ಡ ಕಾರ್ಯ ಶ್ಲಾಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ಘಾಾಟಿಸಿದ ಲಿಂಗಸಗೂರು ಮಾತಾ ಮಾಣಿಕೇಶ್ವರಿ ಮಠದ ನಂದಿಕೇಶ್ವರಿ ಅಮ್ಮನವರು ಮನುಷ್ಯನ ಮನಸ್ಸು ಪಕ್ವವಾಗಲು ಗುರುಗಳು ಮತ್ತು ಬೆಳಕು ಅಗತ್ಯವಾಗಿದೆ ಅಂತಹ ಗುರುವಿನ ಬೆಳಕು ಕವಿಗಳ ಮೇಲೆ ಇರಲಿ ಉತ್ತಮ ಬರವಣಿಗೆ ಬರಲಿ ಎಂದು ಆಶಿಸಿದರು.
ತಿಮ್ಮಾಾಪುರ ಕಲ್ಯಾಾಣಾಶ್ರಮದ ಮಹಾಂತಸ್ವಾಾಮಿಜಿ ಆಧ್ಯಾಾತ್ಮಿಿಕ ಚಿಂತಕರು ನಾಟಕ ರಚನೆಕಾರ ಕಾಕರಗಲ್, ರಮೇಶ ಗುತ್ತೇದಾರ ಮಾತನಾಡಿದರು.
ಇದೇ ವೇಳೆ ಅಂಕಲಿಮಠದ ಶ್ರೀಗಳಿಗೆ ತುಲಾಭಾರ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿಿಗಳನ್ನು ಪ್ರದಾನ ಮಾಡಲಾಯಿತು. ನಿರುಪಾದಿ ಕವಿಗಳ ಚನ್ನಿಿಯ ಚಲ್ಲಾಾಟ ಗೌಡನ ಆರ್ಭಟ, ಶಿವರಡ್ಡಿಿ ಸಣ್ಣಗೌಡ್ರ ಭೂತಲದಿನ್ನಿಿಯವರ ಪ್ರೀೀತಿ ಹೋದರು ಸ್ನೇಹ ಬೇಕು, ದುರುಗೇಶ ಬೈಲಗುಡ್ಡರವರ ಪ್ರೇೇಮದ ಹುಚ್ಚು ಸೇಡಿನ ಕಿಚ್ಚು ನಾಟಕಗಳ ಪುಸ್ತಕ ಬಿಡುಗಡೆಯಾದವು ನಾಟಕ ರಚನೆಕಾರರ ರಾಜ್ಯಾಾಧ್ಯಕ್ಷ ಶಂಕರ ಹೂವಿನಹಿಪ್ಪರಗಿ ಅಧ್ಯಕ್ಷತೆವಹಿಸಿದ್ದರು.
ಸಿದ್ದನಗೌಡ ಬಯ್ಯಾಾಪೂರ, ರಡ್ಡೇರ ಬ್ಯಾಾಂಕ ಅಧ್ಯಕ್ಷ ಕುಮಾರೆಪ್ಪ ಹೊಳೆಯಾಚೆ, ಪಂಚಾಕ್ಷರಿ ದೊಡ್ಡಮನಿ, ಎಸ್ಆರ್ ರಸೂಲ್, ಬಸವರಾಜ ಪಂಚಗಲ್, ಪ್ರೇೇಮಾ ರಾಜುತಾಳಿಕೋಟಿ, ನಿರುಪಾದಿ ಕವಿಗಳು ಗ್ರಾಾಮದ ಮುಖಂಡರು ಕವಿಗಳು ಕಲಾವಿದರಿದ್ದರು. ಪ್ರಾಾಧ್ಯಾಾಪಕ ಖಾಜಾವಲಿ ಈಚನಾಳ ಹಾಗೂ ಶರಣಬಸವ ಅತ್ನೂರು ಕಾರ್ಯಕ್ರಮ ಶಶಿನಾ ಚಿಕ್ಕಹೆಸರೂರು ನಿರ್ವಹಿಸಿದರು.
ನಾಟಕ ಬರಹಗಾರರು ಆರೋಗ್ಯ ಕಾಪಾಡಿಕೊಂಡು ಉತ್ತಮ ಸೇವೆ ನೀಡಬೇಕು: ಕಲ್ಲಯ್ಯಜ್ಜ

