ಗುವಾಹಟಿ(ಅಸ್ಸಾಾಂ) ಡಿ. 22:
ಅಸ್ಸಾಾಂ ರಾಜ್ಯಕ್ಕೆೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬ್ರಹ್ಮಪುತ್ರ ನದಿಯಲ್ಲಿ ಕ್ರೂಸ್ ಹಡಗಿನಲ್ಲಿ ಸಂಚರಿಸಿದರು. ಜೊತೆಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ 25 ವಿದ್ಯಾಾರ್ಥಿಗಳೊಂದಿಗೆ ’ಪರೀಕ್ಷಾ ಪೆ ಚರ್ಚೆ’ ನಡೆಸಿದರು.
ಕಾಮ್ರೂಪ್ ಮೆಟ್ರೋೋಪಾಲಿಟನ್, ಮೋರಿಗಾಂವ್, ದಿಬ್ರುಗಢ, ಕ್ಯಾಾಚರ್, ಶ್ರೀಭೂಮಿ, ಬಕ್ಸಾಾ, ದಿಮಾ ಹಸಾವೊ, ಕೊಕ್ರಝಾರ್, ಗೋಲಾಘಾಟ್, ಕರ್ಬಿ ಆಂಗ್ಲಾಾಂಗ್ ಮತ್ತು ನಲ್ಬರಿ ಜಿಲ್ಲೆ ಸೇರಿದಂತೆ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾಾರ್ಥಿಗಳೊಂದಿಗೆ ಬೆಳಗ್ಗೆೆ 8:45 ರಿಂದ 9:40 ರವರೆಗೆ ಬ್ರಹ್ಮಪುತ್ರ ನದಿಯಲ್ಲಿ ಎಂ.ವಿ. ಚರೈಡಿಯೋ -2 ಎಂಬ ಕ್ರೂಸ್ನಲ್ಲಿ ಪ್ರಧಾನಿ ಸಂವಾದದಲ್ಲಿ ಭಾಗಿಯಾದರು.
ಹುತಾತ್ಮರಿಗೆ ಗೌರವ ಸಲ್ಲಿಕೆ: ಗುವಾಹಟಿಯ ಪಶ್ಚಿಿಮ ಬರಗಾಂವ್ನಲ್ಲಿರುವ ಸ್ವಹಿದ್ ಸ್ಮಾಾರಕಕ್ಕೆೆ ಭೇಟಿ ನೀಡಿದ ಪ್ರಧಾನಿ ಮೋದಿ, ಐತಿಹಾಸಿಕ ಅಸ್ಸಾಾಂ ಚಳವಳಿಯ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಜೊತೆಗೆ, ಮುಖ್ಯಮಂತ್ರಿಿ ಹಿಮಂತ ಬಿಸ್ವ ಶರ್ಮಾ ಮತ್ತು ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಇತರರು ಇದ್ದರು.
ಯೂರಿಯಾ ಉತ್ಪಾಾದನಾ ಘಟಕಕ್ಕೆೆ ಶಂಕುಸ್ಥಾಾಪನೆ: ದಿಬ್ರುಗಢ ಜಿಲ್ಲೆಯಲ್ಲಿ 10,601 ಕೋಟಿ ರೂಪಾಯಿ ವೆಚ್ಚದ ಬ್ರೌೌನ್ಫೀಲ್ಡ್ ಅಮೋನಿಯಾ ಯೂರಿಯಾ ಘಟಕಕ್ಕೆೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಾಪನೆ ನೆರವೇರಿಸಿದರು.
ಕಾರ್ಖಾನೆ ಸ್ಥಾಾಪನೆಯಿಂದ ಸ್ಥಳೀಯರಿಗೆ ಉದ್ಯೋೋಗ
ವಾರ್ಷಿಕ 12 ಲಕ್ಷ ಮೆಟ್ರಿಿಕ್ ಟನ್ಗಳಿಗೂ ಹೆಚ್ಚು ರಸಗೊಬ್ಬರ ಉತ್ಪಾಾದಿಸುವ ಯೋಜನೆಯಲ್ಲಿ ಸುಮಾರು 11,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು. ಸ್ಥಳೀಯವಾಗಿ ಉತ್ಪಾಾದನೆ ನಡೆಯುವುದರಿಂದ, ಪೂರೈಕೆ ವೇಗವಾಗಿರುತ್ತದೆ. ಸಾಗಣೆ ವೆಚ್ಚಗಳು ಕಡಿಮೆಯಾಗುತ್ತವೆ ಎಂದು ಪ್ರಧಾನಿ ಹೇಳಿದರು.
ನಮ್ರಪ್ ಘಟಕಕ್ಕೆೆ ಸ್ಥಳೀಯರಿಗೆ ಹೊಸ ಉದ್ಯೋೋಗಾವಕಾಶಗಳನ್ನು ಸೃಷ್ಟಿಿಸುತ್ತದೆ. ಈ ಘಟಕವು ದೇಶದ ಕೈಗಾರಿಕಾ ಬೆಳವಣಿಗೆಯ ಸಂಕೇತವಾಗಲಿದೆ. ಸ್ಥಾಾವರವನ್ನು ಆಧುನೀಕರಿಸಲು ಮತ್ತು ರೈತರು ಎದುರಿಸುತ್ತಿಿರುವ ಸಮಸ್ಯೆೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಕಾಂಗ್ರೆೆಸ್ ಪ್ರಯತ್ನಗಳನ್ನು ಮಾಡದಿರುವುದು ದುಃಖಕರ ಸಂಗತಿ ಎಂದು ಅವರು ಹೇಳಿದರು.
ಅಸ್ಸಾಾಂ ರಾಜ್ಯಕ್ಕೆೆ ಭೇಟಿ ನೀಡಿರುವ ಪ್ರಧಾನಿ ಬ್ರಹ್ಮಪುತ್ರ ನದಿಯ ಕ್ರೂಸ್ನಲ್ಲಿ ವಿದ್ಯಾಾರ್ಥಿಗಳ ಜೊತೆ ಮೋದಿ ಸಂವಾದ

