ವಿರೂಪಾಕ್ಷ ಹೊಕ್ರಾಾಣಿ ಬೆಂಗಳೂರು, ಸೆ.28:
ನಿಮಗೆ ಅಹಾರೋದ್ಯಮ ಕ್ಷೇತ್ರದಲ್ಲ ಆಸಕ್ತಿಿ ಇದ್ದು, ಸ್ವಯಂ ಉದ್ಯೋೋಗ ಮಾಡುವ ಆಸಕ್ತಿಿ ಇದೆಯೇ? ನಮ್ಮಲ್ಲಿಗೆ ಬನ್ನಿಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ ಯೋಜನೆಯಡಿ ನಿಮ್ಮ ಉದ್ಯಮಕ್ಕೆೆ ಸಹಾಯಧನ ಮತ್ತು ಸಾಲಸೌಲಭ್ಯ ಒದಗಿಸಿ ನಿಮಗೆ ಬೆನ್ನೆೆಲುಬಾಗಿ ಇರುತ್ತೇವೆ ಎಂದು ಆಹ್ವಾಾನ ನೀಡುತ್ತಿಿದೆ ರಾಜ್ಯದ ಕಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮ) ಸಂಸ್ಥೆೆ.
ಹೌದು, ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಿಗಳ ಕಿರು ಅಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎ್ಎಂಇ) ಯೋಜಯಡಿ ರಾಜ್ಯದಲ್ಲಿ ಇದುವರೆಗೆ 7000ಕ್ಕೂ ಅಧಿಕ ವೈಯಕ್ತಿಿಕ ಮತ್ತು ಸಂಘ ಸಂಸ್ಥೆೆಗಳಿಗೆ ಉದ್ಯಮ ಸ್ಥಾಾಪಿಸಲು ನೆರವು ನೀಡುವ ಮೂಲಕ ಇಡೀ ದೇಶದಲ್ಲಿಯೇ ಪ್ರಥಮ ಸ್ಥಾಾನದಲ್ಲಿದೆ.
ರಾಜ್ಯದಲ್ಲಿ ಈಗಾಗಲೇ ಒಂದು ಜಿಲ್ಲೆ ಒಂದು ಉತ್ಪನ್ನ ಜಾರಿಯಲ್ಲಿದೆ. ಆಯಾ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುವಂತಹ ಕೃಷಿ ಉತ್ಪನ್ನವನ್ನು ಸಂಸ್ಕರಣೆ ಮಾಡಿ ಅದರಿಂದ ಬೇರೆ ಬೇರೆ ಮೌಲ್ಯಾಾಧಾರಿತ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆೆಗೆ ಬಿಡುಗಡೆ ಮಾಡುವುದಕ್ಕೆೆ ಮತ್ತು ಅವುಗಳನ್ನು ಪ್ರಚುರಗೊಳಿಸಿ ರ್ತು ಮಾಡುವುದಕ್ಕೂ ಸಹ ಈ ಯೋಜನೆ ಸಹಕಾರಿ ಆಗಲಿದೆ.
ಕಪೆಕ್ ಸಂಸ್ಥೆೆಯ ವ್ಯವಸ್ಥಾಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರು ಪಿಎಂಎ್ಎಂಇ ಯೋಜನೆಯ ಬಗ್ಗೆೆ ವಿಶೇಷ ಕಾಳಜಿವಹಿಸಿ ಇಡೀ ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿಯೂ ಇದರ ಬಗ್ಗೆೆ ಪ್ರಚಾರ ಮಾಡಿಸಿ ಇದುವರೆಗೆ 7000 ಕ್ಕೂ ಅಧಿಕ ವೈಯಕ್ತಿಿಕ ಮತ್ತು ಸಂಘ ಸಂಸ್ಥೆೆಗಳಿಗೆ ನೆರವು ಒದಗಿಸಿದ್ದಾರೆ. ಈಗ ಪಿಎಂಎ್ಎಂಇ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರದ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.
ಏನಿದು ಯೋಜನೆ?:
ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಿಗಳ ಕಿರು ಅಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಕೆ (ಪಿಎಂಎ್ಎಂಇ) ಯೋಜಯಡಿ ರಾಜ್ಯದ ಸಾವಿರಾರು ಮಹಿಳೆಯರನ್ನು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಿಗೆ ಸಹಕಾರ ನೀಡಿ ಅವರನ್ನು ಮಹಿಳಾ ಉದ್ಯಮಿಗಳಾಗಿಸಲು ಯಶಸ್ವಿಿ ಕಾರ್ಯಕ್ರಮಗಳನ್ನು ಅನುಷ್ಠಾಾನಗೊಳಿಸುತ್ತಿಿದೆ.
ಪಿಎಂಎ್ಎಂಇ ಯೋಜನೆ ಮೂಲಕ ವೈಯಕ್ತಿಿಕ ಉದ್ದಿಮೆಗಳಿಗೆ, ರೈತ ಉತ್ಪಾಾದಕ ಸಂಸ್ಥೆೆಗಳು, ಸ್ವಸಹಾಯ ಗುಂಪುಗಳು ಮತ್ತು ಉತ್ಪಾಾದಕರ ಸಹಕಾರಿ ಸಂಸ್ಥೆೆಗಳಂತಹ ಕೃಷಿ-ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ವೈಯಕ್ತಿಿಕ ಉದ್ದಿಮೆಗಳು ಮತ್ತು ಗುಂಪುಗಳಿಗೆ ಗರಿಷ್ಠ 15 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.35ರಷ್ಟು ಮತ್ತು ರಾಜ್ಯ ಸರ್ಕಾರದ ಪಾಲು ಶೇ.15ರಷ್ಟು ಇರುತ್ತದೆ. ಇದರ ಜೊತೆಗೆ ಬ್ಯಾಾಂಕ್ಗಳಿಂದ ಮತ್ತು 15 ಲಕ್ಷ ರೂ.ವರೆಗೆ ಬ್ಯಾಾಂಕ್ ಸಾಲದ ನೆರವು ಒದಗಿಸಿ ಅವರಿಗೆ ಪ್ರೋೋತ್ಸಾಾಹ ನೀಡಲಾಗುತ್ತಿಿದೆ.
ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾಾರಂಭಿಸಲು ಮತ್ತು ಚಾಲ್ತಿಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶ ಇದೆ. 18 ವರ್ಷ ಮೇಲ್ಪಟ್ಟವರು ಯಾವುದೇ ಕನಿಷ್ಠ ವಿದ್ಯಾಾರ್ಹತೆಯ ಮಿತಿ ಇಲ್ಲದೆ ಅರ್ಜಿ ಸಲ್ಲಿಸಬಹುದು.
ಈಗಾಗಲೇ ಅಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ ಗರಿಷ್ಠ 40,000 ರೂ.ಗಳನ್ನು ಕಡಿಮೆ ಬಡ್ಡಿಿದರದಲ್ಲಿ ಸಾಲ ಒದಗಿಸಿದರೆ, ಪ್ರತಿ ಸ್ವ ಸಹಾಯ ಸಂಘಕ್ಕೆೆ ಗರಿಷ್ಠ 4 ಲಕ್ಷ ರೂ. ಪಡೆಯಲು ಅವಕಾಶ ಇದೆ.
ಯಾವುದಕ್ಕೆೆ ಸಹಾಯ?
ಉದಾಹರಣೆಗೆ ಸಿರಿಧಾನ್ಯ ಮತ್ತು ಇತರೆ ಧಾನ್ಯಗಳನ್ನು ಸಂಸ್ಕರಿಸಿ ಅದರಿಂದ ಉತ್ಪನ್ನಗಳನ್ನು ತಯಾರಿಸುವುದು, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಗಾಣದ ಎಣ್ಣೆೆ ತಯಾರಿ, ಮೆಣಸಿನ ಪುಡಿ ಘಟಕಗಳು, ಶುಂಠಿ ಅನಾನಸ್ ಘಟಕಗಳು, ಮಸಾಲಾ ಉತ್ಪನ್ನಗಳು, ತೆಂಗು, ಕುಕ್ಕುಟ, ಮೀನುಗಾರಿಕೆ ಮತ್ತು ವಿವಿಧ ಹಣ್ಣು ಹಾಗೂ ತರಕಾರಿಗಳನ್ನು ಸಂಸ್ಕರಿಸಿ ತಯಾರಿಸಿದ ಉತ್ಪನ್ನಗಳಿಗೆ ಸಹಕಾರ ಸಿಗುತ್ತದೆ. ಇವು ಕೇವಲ ಮಾದರಿ ಅಷ್ಟೇ. ಇದಲ್ಲದೆಯೂ ನಿಮ್ಮಲ್ಲಿ ವಿನೂತನ ಯೋಚನೆಗಳಿದ್ದು, ಅದರ ಬಗ್ಗೆೆ ಸೂಕ್ತ ಮಾಹಿತಿ ಒದಗಿಸಿದಲ್ಲಿಯೂ ಅದಕ್ಕೂ ಸಹ ಇದೇ ರೀತಿಯ ಸಹಕಾರ ನೀಡಲು ಕಪೆಕ್ ಸಿದ್ದವಾಗಿದೆ.
ಇದಲ್ಲದೆ, ಬ್ರ್ಯಾಾಂಡಿಂಗ್ ಮತ್ತು ಮಾರುಕಟ್ಟೆೆ ಚಟುವಟಿಕೆಗಳಾದ ಪ್ಯಾಾಕೇಜಿಂಗ್, ಜಾಹೀರಾತು, ಚಿಲ್ಲರೆ ಮಾರಾಟ ಸಂಸ್ಥೆೆಗಳೊಂದಿಗೆ ಒಡಂಬಡಿಕೆ ಇತ್ಯಾಾದಿಗಳಿಗಾಗಿಯೂ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ.
ನವೋದ್ಯಮಿಗಳನ್ನು ಹೆಚ್ಚಿಿಸುವುದೇ ಕಪೆಕ್ ಗುರಿ: ಸಿ.ಎಸ್. ಶಿವಪ್ರಕಾಶ್
ರಾಜ್ಯದಲ್ಲಿ ಆಹಾರ ಉತ್ಪನ್ನಗಳ ಆಧಾರಿತವಾಗಿ ನವೋದ್ಯಮಿಗಳನ್ನು ಮತ್ತು ಮಹಿಳಾ ಉದ್ಯಮಿಗಳನ್ನು ಹೆಚ್ಚಿಿಸುವುದೇ ಕಪೆಕ್ ಗುರಿ. ಈ ನಿಟ್ಟಿಿನಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ವಿಶೇಷ ಪ್ರಯತ್ನ ಮಾಡಿ ಈ ವರೆಗೆ ಸುಮಾರು 7000 ಉದ್ಯಮಿಗಳನ್ನು ಸೃಷ್ಟಿಿ ಮಾಡಿದೆ ಎಂದು ಕಪೆಕ್ ವ್ಯವಸ್ಥಾಾಪಕ ನಿರ್ದೇಶಕ ಸಿ.ಎಸ್. ಶಿವಪ್ರಕಾಶ್ ಹೇಳಿದರು.
ಇಡೀ ರಾಜ್ಯಾಾದ್ಯಂತ ಉದ್ಯಮಗಳನ್ನು ಉತ್ತೇಜಿಸಲು ಪ್ರತಿ ಜಿಲ್ಲೆಯಲ್ಲಿಯೂ ಸಂಪನ್ಮೂಲ ವ್ಯಕ್ತಿಿಗಳನ್ನ ನಿಯೋಜಿಸಲಾಗಿದೆ. ಎಲ್ಲಿಂದಲೇ ಅರ್ಜಿ ಬಂದರೂ ಸಹ ಸಂಪನ್ಮೂಲ ವ್ಯಕ್ತಿಿಗಳು ಅವರನ್ನು ಸಂಪರ್ಕಿಸಿ ಯೋಜನೆಯ ಬಗ್ಗೆೆ ಡಿಪಿಆರ್ ಮಾಡಿಸುವುದು, ಸೂಕ್ತ ದಾಖಲೆಗಳನ್ನು ಹೊಂದಿಸುವುದು, ಅವರಿಗೆ ಮಾರ್ಗದರ್ಶನ ಮಾಡುವುದು, ಬ್ಯಾಾಂಕಿಂಗ್ ನೆರವು ನೀಡುವ ಕೆಲಸ ಮಾಡಲಾಗುತ್ತದೆ. ಇದಷ್ಟೇ ಅಲ್ಲದೆ, ಉದ್ಯಮ ಸ್ಥಾಾಪನೆಯಾದ ಬಳಿಕ ಅವರ ಉತ್ಪನ್ನಗಳಿಗೆ ಪ್ರಚಾರ ನೀಡಿ ಮಾರುಕಟ್ಟೆೆ ಮತ್ತು ರ್ತು ಮಾಡುವವರೆಗೂ ಕಪೆಕ್ ಬೆಂಬಲವಾಗಿ ನಿಲ್ಲುತ್ತದೆ.
ಇದಕ್ಕಾಾಗಿ ಕಪೆಕ್ನಲ್ಲಿ ವಿಶೇಷ ಕೌಶಲ್ಯ ಇರುವ ಮತ್ತು ತರಬೇತಿ ಪಡೆದ ಆಯಾ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಿಗಳು ಇದ್ದಾರೆ. ಈಗಲೂ ಸಹ ಆಹಾರ ಕ್ಷೇತ್ರದ ಬಗ್ಗೆೆ ಆಸಕ್ತಿಿ ಇರುವವರು ಅರ್ಜಿ ಸಲ್ಲಿಸುವುದಕ್ಕೆೆ ಮುಕ್ತವಾಗಿದೆ ಎಂದು ಶಿವಪ್ರಕಾಶ್ ಅವರು ‘ಸುದ್ದಿಮೂಲ’ಕ್ಕೆೆ ತಿಳಿಸಿದ್ದಾರೆ.