ಬೆಂಗಳೂರು,ಜೂ.19: ಬೆಂಗಳೂರಿನಲ್ಲಿ ವಿಶೇಷವಾಗಿ ಕೈಗೆಟಕುವಂಥ ಮನೆ ಸಾಲ ಉತ್ಪನ್ನ ರೋಶನಿಯ 4 ಹೊಸ ಶಾಖೆಗಳನ್ನು ಪಿಎನ್ಬಿ ಹೌಸಿಂಗ್ ಫೈನಾನ್ಸ್ ಸಂಸ್ಥೆ ತೆರೆದಿದೆ. ಸ್ವಂತ ಸೂರನ್ನು ಹೊಂದುವ ದೀರ್ಘ ಕಾಲದ ಕನಸನ್ನು ಸಾಕಾರಗೊಳಿಸಲು ಜನರಿಗೆ ನೆರವಾಗುವ ನೀತಿಗೆ ಇದು ಅನುಗುಣವಾಗಿದೆ. ತನ್ನ ಸಂರಚನೆಯೊಳಗಡೆ ವಿಶಿಷ್ಟವಾದ ಕೈಗೆಟಕುವಂಥ ಲಂಬ ವ್ಯವಸ್ಥೆಯನ್ನು ಕಂಪನಿ ಸ್ಥಾಪಿಸಿದೆ. ಅದು ಮಾರಾಟ, ಸಾಲ, ಸಂಗ್ರಹಗಳು ಮತ್ತು ಕಾರ್ಯಾಚರಣೆಗಳಿಗೆ ಸಮರ್ಪಿತವಾದ ತಂಡಗಳನ್ನು ಒಳಗೊಂಡಿದೆ.
ಪಿಎನ್ಬಿ ಹೌಸಿಂಗ್ ಫೈನಾನ್ಸ್ನ ಎಂಡಿ ಹಾಗೂ ಸಿಇಒ ಗಿರೀಶ್ ಕೌಸ್ಗಿ, ಕೆಂಗೇರಿ ಶಾಖೆಯ ಉದ್ಘಾಟನೆ ಸಮಾರಂಭಕ್ಕೆ ಕಳೆ ತಂದರು. ಬೆಂಗಳೂರು ಪ್ರಗತಿಪರ ಮೂಲಸೌಕರ್ಯದೊಂದಿಗೆ ಪ್ರಮುಖ ಮೆಟ್ರೋಪಾಲಿಟನ್ ನಗರದ ಗೌರವ ಹೊಂದಿರುವುದರಿಂದ ತನ್ನ ಮಾರುಕಟ್ಟೆ ಸಾಹಸಗಳ ಮೇಲೆ ಕಾರ್ಯತಂತ್ರಾತ್ಮಕವಾಗಿ ಗಮನ ಕೇಂದ್ರೀಕರಿಸಲು ಪಿಎನ್ಬಿ ಹೌಸಿಂಗ್ ಫೈನಾನ್ಸ್ಗೆ ಒಂದು ಸೂಕ್ತ ಗಮ್ಯ ಸ್ಥಾನವಾಗಿದೆ.
ಹೊಸಕೋಟೆ, ಯಲಹಂಕ ಮತ್ತು ಅತ್ತಿಬೆಲೆಯಲ್ಲಿ ಕೂಡ ಇದೇ ರೀತಿಯ ಶಾಖೆಗಳನ್ನು ಚೀಫ್ ಪೀಪಲ್ ಆಫೀಸರ್ ಶ್ರೀ ಅಮಿತ್ ಸಿಂಗ್, ಉತ್ಪನ್ನಗಳ ರಾಷ್ಟ್ರೀಯ ಮುಖ್ಯಸ್ಥ ಶ್ರೀ ಪ್ರಶಾಂತ್ ಶೆಣೈ ಮತ್ತು ಪಿಎನ್ಬಿ ಹೌಸಿಂಗ್ ಫೈನಾನ್ಸ್ ಆಡಳಿತ ಮುಖ್ಯಸ್ಥ ವಿಶಾಲ್ ಕೌಶಿಕ್ ಉದ್ಘಾಟಿಸಿದರು.
ರೋಶನಿ ಯೋಜನೆಯೊಂದಿಗೆ ಸಂಸ್ಥೆಯು ವಿಶೇಷವಾಗಿ ಟಯರ್-1, ಟಯರ್-2 ಮತ್ತು ಟಯರ್-3 ನಗರಗಳ ಹೊರವಲಯಗಳಲ್ಲಿ ಕೈಗೆಟಕುವ ಗೃಹ ಸಾಲಗಳನ್ನು ಒದಗಿಸುತ್ತದೆ. ಮನೆ ಆಸ್ತಿ ಖರೀದಿ, ಸ್ವಂತ-ನಿರ್ಮಾಣ, ಮನೆ ವಿಸ್ತರಣೆ/ನವೀಕರಣ, ಜಾಗ ಖರೀದಿ ಹಾಗೂ ನಿರ್ಮಾಣ ಮತ್ತು ಆಸ್ತಿ ಅಡಮಾನವಿಟ್ಟು ಸಾಲ ನೀಡಿಕೆ ಮುಂತಾದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಅಂಶಗಳನ್ನು ಯೋಜನೆ ಒಳಗೊಂಡಿದೆ.
ಹೀಗಾಗಿ, ಅರ್ಜಿದಾರರು ಮೊದಲ ಬಾರಿಗೆ ಸಾಲ ಸೌಲಭ್ಯ ಬಳಸುವವರು, ಔಪಚಾರಿಕ ಆದಾಯವಿಲ್ಲದ ಸ್ವಯಂ-ಉದ್ಯೋಗಿಗಳು ಮತ್ತು ಮಾಸಿಕ 10,000 ರೂಪಾಯಿಯಷ್ಟು ಕಡಿಮೆ ಆದಾಯ ಹೊಂದಿರುವ ವೇತನದಾರ ಕುಟುಂಬದಿಂದ ಮಧ್ಯಮವರ್ಗದ ಕುಟುಂಬಗಳು -ಹೀಗೆ ಎಲ್ಲರೂ ಸಾಲಕ್ಕೆ ಅರ್ಹರಾಗಿದ್ದಾರೆ.
ʻಹೋಮ್ಟೌನ್ಶಿಪ್ ದೂರದೃಷ್ಟಿಗೆ ಸದೃಢವಾದ ಬೆಂಬಲ ನಿಡುವ ಉದ್ದೇಶದಿಂದ, ವ್ಯಕ್ತಿಗಳ ಸಬಲೀಕರಣ ಮತ್ತು ಅವರ ಆಶೋತ್ತರಗಳನ್ನು ಈಡೇರಿಸಲು ನಾವು ಪ್ರಯತ್ನಿಸುತ್ತೇವೆʼ ಎಂದು ಪಿಎನ್ಬಿ ಹೌಸಿಂಗ್ ಫೈನಾನ್ಸ್ನ ಎಂಡಿ ಮತ್ತು ಸಿಇಒ ಗಿರೀಶ್ ಕೌಸ್ಗಿ ಹೇಳಿದರು. ʻಕೈಗೆಟಕುವಂಥ ಅಗ್ಗದ ಗೃಹ ಸಾಲಗಳನ್ನು ಒದಗಿಸಿ ವೈಯಕ್ತಿಕವಾಗಿ ವ್ಯಕ್ತಿಗಳು ಮತ್ತು ಸಮುದಾಯದ ಸಾಮಾಜಿಕ-ಆರ್ಥಿಕ ಪ್ರಗತಿ ಸಾಧನೆಗೆ ನೆರವಾಗುವುದು ನಮ್ಮ ಮಿಷನ್ ಆಗಿದೆ. ಹೊಸ ಸ್ಥಳಗಳ ಪೈಕಿ, ರಿಯಲ್ ಎಸ್ಟೇಟ್ ಮಾರುಕಟ್ಟೆ ಹೇರಳವಾಗಿರುವ ಮತ್ತು ಕೈಗೆಟಕುವ ಗೃಹ ಸಾಲಕ್ಕೆ ಬೇಡಿಕೆಯಿರುವ ಬೆಂಗಳೂರನ್ನು ಸೇರ್ಪಡೆ ಮಾಡಿರುವುದರಿಂದ ವಿಶೇಷವಾಗಿ ನಮಗೆ ರೋಮಾಂಚನವಾಗಿದೆ. ರೋಶನಿ ಮೂಲಕ ಕೈಗೆಟಕುವ ಗೃಹ ಸಾಲ ವಿಭಾಗವನ್ನು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ. ಆ ಮೂಲಕ ಕೇಂದ್ರ ಸರಕಾರದ ʻಎಲ್ಲರಿಗೂ ವಸತಿʼ ಉಪಕ್ರಮಕ್ಕೆ ಅನುಗುಣವಾಗಿ ದೇಶದಾದ್ಯಂತ ವಿಶಾಲ ಜನವಿಭಾಗಗಳಿಗೆ ತಲುಪಲು ನಮಗೆ ನೆರವಾಗುತ್ತದೆ. ಮೂರು ವರ್ಷಗಳಲ್ಲಿ, ಅಗ್ಗದ ಗೃಹ ಸಾಲಗಳು ಮತ್ತು ಇಡೀ ರೀಟೇಲ್ ಅವಕಾಶದೊಳಗೆ ಪ್ರಮುಖ ಸಾಲಗಳ ಉತ್ತಮ ಮಿಶ್ರಣವಾಗಿದೆʼ ಎಂದು ಗಿರೀಶ್ ಕೌಸ್ಗಿ ಹೇಳಿದರು.
ದೇಶದಾದ್ಯಂತ ವ್ಯವಹಾರ ವಿಸ್ತರಣೆಯ ಭಾಗವಾಗಿ ತನ್ನ ರೋಶನಿ-ಕೇಂದ್ರಿತ 10 ಹೊಸ ಶಾಖೆಗಳನ್ನು ಕಂಪನಿ ಘೋಷಿಸಿದೆ. 4 ರಾಜ್ಯಗಳ ಹೊಸಕೋಟೆ, ಕೆಂಗೇರಿ, ಯಲಹಂಕ ಮತ್ತು ಅತ್ತಿಬೆಲೆ, ವಾಘೋಲಿ, ಬೊಲಿಂಜ್, ಓಲ್ಡ್ ಪನ್ವೇಲ್, ತಿಲ್ಲೈ ನಗರ್, ನಾಗರಕೋಯಿಲ್, ಮಥುರಾ, ಜೋಧಪುರ ಮತ್ತು ಅಹಮದಾಬಾದ್ 6 ರಾಜ್ಯಗಳಲ್ಲಿ ಹರಡಿಕೊಂಡಿವೆ.
ಈ ಶಾಖೆಗಳ ಆರಂಭದೊಂದಿಗೆ 150 ಜಿಲ್ಲೆಗಳ 500-ಪ್ಲಸ್ ಸ್ಥಳಗಳಲ್ಲಿ ರೋಶನಿ ಶಾಖೆಗಳು 88ಕ್ಕೆ ವಿಸ್ತರಣೆಗೊಂಡಿವೆ. ಇನ್ನೂ ಅಧಿಕ ವಿಸ್ತರಣೆಗಾಗಿ ಕಂಪನಿ ಕಾರ್ಯನಿರ್ವಹಿಸುತ್ತಿದೆ.
ವಸತಿ ಉದ್ಯಮದಲ್ಲಿ 34 ವರ್ಷಗಳ ಅಸ್ತಿತ್ವ ಮತ್ತು ಗ್ರಾಹಕರ ವಿಶ್ವಾಸದೊಂದಿಗೆ, ಅಖಿಲ-ಭಾರತ ಶಾಖಾ ಜಾಲ ಮತ್ತು ಕ್ರಿಯಾಶೀಲ ಸೇವೆಯ ಮಾದರಿಯೊಂದಿಗೆ ಪಿಎನ್ಬಿ ಹೌಸಿಂಗ್ ಫೈನಾನ್ಸ್ ದೇಶದಾದ್ಯಂತ ಸಾಲ ಬಯಸುವವರಿಗೆ ಸೇವೆ ಸಲ್ಲಿಸುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯ ಪ್ರದೇಶ, ಛತ್ತೀಸ್ಗಢ, ರಾಜಸ್ಥಾನ, ಗುಜರಾತ್, ತಮಿಳು ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿ-ಎನ್ಸಿಆರ್ ಸಹಿತ 15 ರಾಜ್ಯಗಳಲ್ಲಿ ಬೆಳೆಯುವುದು ಕಂಪನಿಯ ಗುರಿಯಾಗಿದೆ.