ಸುದ್ದಿಮೂಲವಾರ್ತೆ
ಕೊಪ್ಪಳ ಜು 30:ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿದ್ದನ್ನು ವಿರೋಧಿಸಿ ಕವಿಗೋಷ್ಠಿ ಆಯೋಜಿಲಾಗಿತ್ತು. ಕೊಪ್ಪಳದ ಮಹಿಳಾ ಲೋಕ ಪತ್ರಿಕಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಲೋಕ ಮಾಸ ಪತ್ರಿಕೆಯ ಸಂಪಾದಕಿ ಸಾವಿತ್ರಿ ಮುಜುಮದಾರ ಮಾತನಾಡಿ ” ಇಡೀ ದೇಶ ತಲೆತಗ್ಗಿಸುವಂತಹ ಹೇಯ ಕೃತ್ಯ ಮಣಿಪುರದಲ್ಲಿ ನಡೆದಿದ್ಧು, ಮಹಿಳೆಯರೆಲ್ಲರೂ ಖಂಡಿಸಬೇಕಾದ ಮತ್ತು ಜಾಗೃತಿ ಮೂಡಿಸಬೇಕಾದ ಸಂದರ್ಭವಿದು.
ಈ ನಿಟ್ಟಿನಲ್ಲಿ ಈ ಕವಿಗೋಷ್ಠಿ ಒಂದು ಒಳ್ಳೆಯ ಪ್ರಯತ್ನ ” ಎಂದರು. ಕವಿಯತ್ರಿಗಳಾದ….ವಿಮಲಾ ಇನಾಮದಾರ, ವಿಜಯಲಕ್ಷ್ಮಿ ಕೊಟಗಿ,ಮಾಲಾ ಬಡಿಗೇರ, ನಿರ್ಮಲಾ ಬಳ್ಳೊಳ್ಳಿ, ಅನ್ನಪೂರ್ಣ ಪದ್ಮಸಾಲಿ, ಸಾವಿತ್ರಿ ಮುಜುಮದಾರ ಹಾಗೂ ಕವಿಗಳಾದ ಡಿ.ರಾಮಣ್ಣಾ ಅಲ್ಮರ್ಸಿಕೇರಿ,ಜಿ.ಎಸ್.ಗೋನಾಳ,ಶಿವರಾಜ ಕೆ.ವಿ. ರಂಗಕರ್ಮಿ ರಂಗನಾಥ ಕೋಳೂರು ಉಮೇಶ ಕಾತರಕಿ ಇವರು ಘಟನೆಯನ್ನು ಕುರಿತು ರಚಿಸಿದ ಕವನಗಳನ್ನು ವಾಚಿಸಿದರು.
ಮಣಿಪುರದ ಘಟನೆಯನ್ನು ಕುರಿತು ವಕೀಲರಾದ ವಿಜಯ ಅಮೃತರಾಜ ಅವರು ಮಾತನಾಡಿದರು.ಶಿಲ್ಪಾ ರಾಜೇಶ್ ಸಸಿಮಠ ಅವರು ಪ್ರಾಸ್ತಾವಿಕವಾಗಿಮಾತನಾಡಿದರು.
ಕಾರ್ಯಕ್ರಮವನ್ನುnಉಮೇಶ ಬಾಬು ಸುರ್ವೆ ನಡೆಸಿಕೊಟ್ಟರು.