ಸುದ್ದಿಮೂಲ ವಾರ್ತೆ (ಸಂತೆಕೆಲ್ಲೂರು) ಲಿಂಗಸಗೂರು, ಡಿ.22:
ಇಂದಿನ ರಾಜಕೀಯ ವ್ಯವಸ್ಥೆೆಯಲ್ಲಿ ಹಣ ಮತ್ತು ರಾಜಕೀಯ ಪ್ರಭಾವದಿಂದಾಗಿ ಮೌಲ್ಯಾಾಧಾರಿತ ರಾಜಕಾರಣ ನಿಧಾನವಾಗಿ ಕಣ್ಮರೆಯಾಗುತ್ತಿಿದೆ ಪ್ರಜೆಗಳು ಉತ್ತಮ ರಾಜಕೀಯ ಪಟುಗಳನ್ನು ಗುರುತಿಸಿದಾಗ ಮೌಲ್ಯಾಾಧಾರಿತ ರಾಜಕೀಯಕ್ಕೆೆ ಜೀವ ಬರಲಿದೆ ಎಂದು ಸಂಯುಕ್ತ ಜನತಾ ದಳದ ರಾಜ್ಯಾಾಧ್ಯಕ್ಷ ಮಹಿಮಾ ಜೆ.ಎಚ್ಪಟೇಲ್ ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.
ಗ್ರಾಾಮದಲ್ಲಿ ಲಿಂ. ಘನಮಠ ಶಿವಯೋಗಿಗಳ 146ನೇ ಜಾತ್ರಾಾ ಮಹೋತ್ಸವ ನಿಮಿತ್ತ ರವಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮಠದಿಂದ ನೀಡಲಾಗುವ ಘನಶ್ರೀ ಪ್ರಶಸ್ತಿಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದೆ ರಾಜ್ಯದ ರಾಜಕಾರಣದಲ್ಲಿ ತತ್ವ, ಸಿದ್ಧಾಾಂತ ಹಾಗೂ ಮೌಲ್ಯಗಳಿಗೆ ಹೆಚ್ಚಿಿನ ಬೆಲೆ ಇತ್ತು ಇದೀಗ ಜಾತಿ ಮತ್ತು ಹಣದ ಪ್ರಭಾವದಿಂದ ಮೌಲ್ಯಾಾಧಾರಿತ ರಾಜಕಾರಣ ಕಣ್ಮರೆಯಾಗಿದೆ. ಅಂತಹ ಕನಸಿನೊಂದಿಗೆ ವಿಧಾನಸಭೆಗೆ ಪ್ರವೇಶಿಸಿದ ನನಗೆ ವಿಧಾನಸಭೆಯಲ್ಲಿ ಶಾಸಕರ ಕಚ್ಚಾಾಟ ಕಂಡು ಇಲ್ಲಿಗೆ ಯಾಕೆ ಬಂದೆ ಎಂಬ ಪ್ರಶ್ನೆೆ ಕಾಡಿತು ಎಂದು ಆತ್ಮಾಾವಲೋಕನ ಮಾಡಿಕೊಂಡ ಅವರು ಚುನಾವಣೆಯಲ್ಲಿ ಮತ ಮಾರಾಟವಾಗದೆ ಉತ್ತಮ ವ್ಯಕ್ತಿಿಗಳ ಆಯ್ಕೆೆಯಾದಾಗ ರಾಜಕೀಯದಲ್ಲಿ ಮೌಲ್ಯಗಳು ಉಳಿದು ಜನ ಸೇವೆ ಸಾರ್ಥಕವಾಗುತ್ತದೆ ಎಂದರು.
ಇಂದು ಪರಿಸರ ಹಾನಿ ಮತ್ತು ಅತಿಯಾದ ರಾಸಾಯನಿಕ ಪಾಸ್ಟಿಿಕ್ ಬಳಕೆ ಸೇರಿ ಜಲಮೂಲಗಳು ಕಲುಷಿತದಿಂದ ಸಾಮಾಜಿಕ ಸ್ವಾಾಸ್ಥ ಹಾಳಾಗಿದೆ. ಜನತೆ ನಾನಾ ರೋಗ ರುಜಿನಗಳಿಗೆ ನಿತ್ಯ ಆಸ್ಪತ್ರೆೆಗಳಿಗೆ ಅಲೆಯುವಂತಾಗಿದೆ. ವೈದ್ಯರಿಗೆ ಇದೊಂದು ಆದಾಯದ ವೃತ್ತಿಿಯಾಗಿದೆ. ನಾನು ಕಳೆದ 33 ವರ್ಷಗಳಿಂದ ಯಾವುದೇ ವೈದ್ಯರ ಬಳಿ ಹೋಗಿಲ್ಲ. ಶುದ್ದ ಗಾಳಿ, ಶುದ್ದ ಆಹಾರ ಶುದ್ದ ನೀರು ಮತ್ತು ಶುದ್ದ ಕೃಷಿ ಉತ್ಪನ್ನ ಬೆಳೆದು ಸ್ವಾಾಸ್ಥ ಸಮಾಜ ನಿಮಾರ್ಣಕ್ಕೆೆ ನಾವೆಲ್ಲರೂ ಪಣ ತೊಡಬೇಕಿದೆ. ರಾಷ್ಟ್ರೀಯ ಸ್ವಾಾಭಿಮಾನ ಅಂದೋಲನ ಅಡಿ ಗಂಗಾವತಿ ಬಳಿಯ (ಕಿಷ್ಕಿಿಂದೆ)ಯಿಂದ ಮಂತ್ರಾಾಲಯದವರೆಗೆ ನಿರ್ಮಲ ತುಂಗಭದ್ರಾಾ ಅಭಿಯಾನ ಪಾದಯಾತ್ರೆೆ ಡಿ,27ರಿಂದ ಜ,04ರವರೆಗೆ ನಡೆಯಲಿದ್ದು ಕೃಷಿಕರು, ಪರಿಸರ ಪ್ರೇೇಮಿಗಳು ಸೇರಿ ಸಾರ್ವಜನಿಕರು ಭಾಗವಹಿಸಿ ಸ್ವಾಾಸ್ಥ ಸಮಾಜ ನಿಮಾಣಕ್ಕೆೆ ಕೈಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಸ್ಕಿಿ ಗಚ್ಚಿಿನಮಠದ ವರರುದ್ರಮುನಿ ಸ್ವಾಾಮೀಜಿ ವಹಿಸಿದ್ದರು. ಸಂತೆಲ್ಲೂರ ಘನಮಠೇಶ್ವರ ಮಠದ ಗುರುಬಸವ ಸ್ವಾಾಮೀಜಿ, ಪ್ರವಚನಕಾರರಾದ ಯಡ್ರಾಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಾಮೀಜಿ ಪ್ರಶಾಂತ, ದೇವರು, ರೈತ ಮುಖಂಡ ಹನಮನಗೌಡ ಬೆಳಗುರ್ಕಿ, ಓಪೆಕ್ ಆಸ್ಪತ್ರೆೆ ವೈದ್ಯ ಸುರೇಶ ಸಗರದ ವೇದಿಕೆಯಲಿದ್ದರು ಘನಮಠದಯ್ಯ ಮಹಾಂತಿನಮಠ ನಿರ್ವಹಿಸಿದರು. ಕೆ.ಅಮರೇಗೌಡ ಪಾಟೀಲ್, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಮಲ್ಲೇಶಗೌಡ ಮಟ್ಟೂರ, ಸಾಹಿತಿ ಗಿರಿರಾಜ ಹೊಸಮನಿ, ಮರಿಗೌಡ ಪಾಟೀಲ್, ಡಾ,ಎನ್ಎಲ್ ನಡುವಿನಮನಿ ವಿಸಿಬಿ ನಿವೃತ್ತ ಪ್ರಾಾಚಾರ್ಯ ಸಿ.ಶರಣಪ್ಪ, ಗುರುನಾಥರೆಡ್ಡಿಿ ದೇಸಾಯಿ, ಸಿದ್ದನಗೌಡ ಹಳ್ಳಿಿ, ಸೇರಿದಂತೆ ಇತರರು ಭಾಗಿಯಾಯಾಗಿದ್ದರು.
ಹಣ ಜಾತಿಯ ಪ್ರಭಾವದಿಂದ ರಾಜಕೀಯ ಮೌಲ್ಯಗಳು ಕುಸಿತ ಮೌಲ್ಯಾಾಧಾರಿತ ರಾಜಕಾರಣಕ್ಕೆೆ ಪುನಃ ಮತದಾರರು ಮರುಜೀವ ತುಂಬಬೇಕಿದೆ : ಮಹಿಮಾ ಜೆ.ಎಚ್ ಪಾಟೀಲ್

