ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.4: ಭಾರತದ ಪ್ರಮುಖ ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿರುವ, ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್. ಬೆಂಗಳೂರಿನ ಮಂತ್ರಿ ಮಾಲ್ನಲ್ಲಿ ಎಲೆಕ್ಟ್ರಿಷಿಯನ್ಗಳಿಗಾಗಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿ ವೀಕ್ಷಿಸುವ ವಿಶೇಷ ಕಾರ್ಯಕ್ರಮವನ್ನು ಹೆಮ್ಮೆಯಿಂದ ಆಯೋಜಿಸಿತ್ತು. ನಗರದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಎಲೆಕ್ಟ್ರಿಷಿಯನ್ಗಳು ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಕೇವಲ ಟ್ರೋಫಿಯ ವಿಶೇಷ ವೀಕ್ಷಣೆ ಉದ್ದೇಶಕ್ಕೆ ಮಾತ್ರವಲ್ಲದೆ ಭಾರತದ ಕ್ರಿಕೆಟ್ ತಂಡವನ್ನು ಹುರಿದುಂಬಿಸುವುದೂ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಪಾಲಿಕ್ಯಾಬ್ ಏರ್ಪಡಿಸಿದ್ದ ಈ ಕಾರ್ಯಕ್ರಮವು ಎಲೆಕ್ಟ್ರಿಷಿಯನ್ಗಳ ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಕಂಪನಿಯ ಗಾಢ ಮೆಚ್ಚುಗೆಯನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿತ್ತು. ಈ ಘಟನೆ ಕೇವಲ ಒಂದು ಅನನ್ಯ ಅನುಭವವಾಗಿರಲಿಲ್ಲ. ಇದು ಎಲ್ಲಾ ಎಲೆಕ್ಟ್ರಿಷಿಯನ್ಗಳಿಗೆ ಜೀವಮಾನದಲ್ಲಿ ಒಮ್ಮೆ ಮಾತ್ರ ಲಭಿಸಬಹುದಾದ ಅವಕಾಶವಾಗಿತ್ತು. ಕಾರ್ಯಕ್ರಮದಲ್ಲಿ ಅವರು ಒಟ್ಟುಗೂಡುತ್ತಿದ್ದಂತೆ, ಅಲ್ಲೆಲ್ಲ ಉತ್ಸಾಹದ ಮತ್ತು ದೇಶಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ಅವರೆಲ್ಲರೂ ಭಾರತದ ಕ್ರಿಕೆಟ್ ತಂಡವನ್ನು ಹುರಿದುಂಬಿಸಲು ಅಲ್ಲಿ ಒಟ್ಟಿಗೆ ಸೇರಿದ್ದರು. ಅದೊಂದು ನಿಜವಾಗಿಯೂ ಸ್ಮರಣೀಯ ಮತ್ತು ಹೃದಯಸ್ಪರ್ಶಿ ಸಂದರ್ಭವಾಗಿತ್ತು.
ಪಾಲಿಕ್ಯಾಬ್ ಇಂಡಿಯಾದ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ ನಿಲೇಶ್ ಮಲಾನಿ ಅವರು ಮಾತನಾಡಿ, ‘ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಕ್ರಿಕೆಟ್ ಪ್ರತಿಧ್ವನಿಸುತ್ತಿರುತ್ತದೆ. ಕ್ರಿಕೆಟ್ ಕ್ರೀಡೆಗಿಂತ ಮಿಗಿಲಾಗಿದೆ. ಅದು ಎಲ್ಲರನ್ನೂ ಒಗ್ಗೂಡಿಸುವ ಭಾವೋದ್ರೇಕವಾಗಿದೆ. ದೇಶದಾದ್ಯಂತ ಮನೆ ಮತ್ತು ಕ್ರೀಡಾಂಗಣಗಳಲ್ಲಿ ಕ್ರೀಡೆಗಳನ್ನು ವೀಕ್ಷಿಸಿ ಆನಂದಿಸಲು ವಿದ್ಯುತ್ ಸಂಪರ್ಕ ಸುಲಲಿತವಾಗಿರುವುದನ್ನು ಖಚಿತಪಡಿಸಲು ಎಲೆಕ್ಟ್ರಿಷಿಯನ್ನರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಈ ಟ್ರೋಫಿಯ ವಿಶೇಷ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದ ಈ ಕಾರ್ಯಕ್ರಮದ ಮೂಲಕ ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳು, ಎಲೆಕ್ಟ್ರಿಷಿಯನ್ನರು ಮತ್ತು ಎಲೆಕ್ಟ್ರಿಕ್ ಉತ್ಪನ್ನಗಳ ಮಾರಾಟಗಾರರು ಪರಸ್ಪರ ಒಡನಾಟ ಹೊಂದಿರುವುದಕ್ಕೆ ನಿಜಕ್ಕೂ ಅರ್ಥಪೂರ್ಣವಾದ ಅವಕಾಶ ಒದಗಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ವಿವಿಧ ಶ್ರೇಣಿಯ ಉತ್ಪನ್ನಗಳಿಂದ ನಾವು ಸೇವೆ ಸಲ್ಲಿಸುತ್ತಿರುವ ಗ್ರಾಹಕರು ಮತ್ತು ಸಮುದಾಯಗಳಿಗೆ ಉತ್ತಮವಾದ ಸೇವೆ ಸಲ್ಲಿಸುವ ಮೂಲಕ ಒಳಿತನ್ನು ಮಾಡುವುದಕ್ಕೆ ನಮ್ಮ ಗುರಿಯು ಯಾವಾಗಲೂ ಗಮನ ನೀಡುತ್ತದೆ. ದೀಪ ಬೆಳಗಲು ಮತ್ತು ಸಂತಸ ಹಂಚಿಕೊಳ್ಳಲು ನಾವು ಸಾಧನಗಳನ್ನು ಪರಸ್ಪರ ಜೋಡಿಸುತ್ತಿದ್ದಂತೆ, ಸಾಧ್ಯವಿರುವ ಎಲ್ಲ ರೀತಿಗಳಲ್ಲಿ ಅವರ ಉತ್ಸಾಹ ಬೆಳಗಿಸಲು ನಮ್ಮ ಸಮುದಾಯದ ಜೊತೆಗೆ ಸಂಪರ್ಕ ಸಾಧಿಸುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ, ಈ ಉಪಕ್ರಮವು ನಮ್ಮ ಮೌಲ್ಯಗಳಿಗೆ ಪುರಾವೆಯಾಗಿದೆ. ನಮ್ಮ ಎಲ್ಲಾ ಗ್ರಾಹಕರಿಗೆ ಪರಿಣಾಮಕಾರಿ ಅನುಭವಗಳನ್ನು ಒದಗಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮವು ಕ್ರಿಕೆಟ್ ಎಲ್ಲರನ್ನು ಹೇಗೆ ಒಟ್ಟುಗೂಡಿಸುತ್ತದೆ ಮತ್ತು ಪರಸ್ಪರರ ಪ್ರಯತ್ನಗಳನ್ನು ಶ್ಲಾಘಿಸಲು ನಮಗೆ ಸಹಾಯ ಹೇಗೆ ಮಾಡುತ್ತದೆ ಎಂಬುದನ್ನು ವಿವರಿಸುತ್ತದೆ.