ಸುದ್ದಿಮೂಲ ವಾರ್ತೆ ರಾಯಚೂರು, ಫೆ.12:
ಅಖಿಲ ಭಾರತ ದಲಿತ ಲೇಖಕರ ಸಮಾವೇಶದಲ್ಲಿ ಭಾಗವಹಿಸುವಂತೆ ಪ್ರೊ. ಎಚ್.ಟಿ. ಪೋತೆಯವರಿಗೆ ಆಹ್ವಾನಿಸಲಾಗಿದೆ.
ಫೆಬ್ರವರಿ 20 ಹಾಗೂ 21 ರಂದು ಈ ಸಮಾವೇಶವು ನವದೆಹಲಿಯಲ್ಲಿ ಜರುಗಲಿದೆ. ಈ ಸಮಾವೇಶದಲ್ಲಿ ಪ್ರೊ. ಎಚ್.ಟಿ. ಪೋತೆ ತಮ್ಮದೊಂದು ಕಥೆಯನ್ನು ಇಂಗ್ಲಿಷ ಮತ್ತು ಹಿಂದಿ ಭಾಷೆಯಲ್ಲಿ ವಾಚಿಸಲಿದ್ದಾರೆ. ದೇಶದ ಪ್ರಸಿದ್ದ ದಲಿತ ಲೇಖಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ಕೆ. ಶ್ರೀನಿವಾಸರಾವ್ ಕಾರ್ಯದರ್ಶಿ ಕೇಂದ್ರ ಸಾಹಿತ್ಯ ಅಕಾಡೆಮಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಪ್ರೊ. ಎಚ್.ಟಿ. ಪೋತೆಯವರು ಸಾಹಿತ್ಯ, ಸಂಶೋಧನೆ ಜಾನಪದದಲ್ಲಿ ವಿಶೇಷ ಕೃಷಿ ಮಾಡುತ್ತ ಬಂದಿದ್ದಾರೆ. ತಮ್ಮ ಕಥೆ ಮತ್ತು ಕಾದಂಬರಿಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ ಇವರ ತರುವಾಯ ದಲಿತ ಸಂವೇದನೆಯನ್ನು ವಿಶಿಷ್ಟವಾಗಿ ರೂಪಿಸಿದ್ದಾರೆ.