ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.10:
ಸಮೀಪದ ಬುಂಕಲದೊಡ್ಡಿಿ ಗ್ರಾಾಮದ ವಾರ್ಡ್ ಸಂಖ್ಯೆೆ 1 ರಲ್ಲಿ ಇರುವಂತಹ ವಿದ್ಯುತ್ ಪರಿವರ್ತಕ ತಕ್ಷಣವೇ ಸ್ಥಳಾಂತರ ಮಾಡಬೇಕೆಂದು ಕರ್ನಾಟಕ ಪ್ರಾಾಂತ ರೈತ ಸಂಘದ ಮುಖಂಡರು ಜೆಸ್ಕಾಾಂ ಸಂಸ್ಥೆೆಯ ಎಂಜನಿಯರ್ ಶ್ರೀನಿವಾಸ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.
ಗ್ರಾಾಮದ ನಿವಾಸಿಗಳಾದ ದೇವರಾಜ ಹೋಟಲ್ ಹಾಗೂ ಬಸವರಾಜ ಗಬ್ಬೂರು ಈ ಇಬ್ಬರ ಮನೆಗಳ ಮೇಲೆ ವಿದ್ಯುತ್ ಪರಿವರ್ತಕ ಘಟಕಕ್ಕೆೆ ಸಂಪರ್ಕಿಸುವ ವಿದ್ಯುತ್ ಪೂರೈಕೆ ತಂತಿ ಹಾಯ್ದು ಹೋಗಿದ್ದು, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದು. ಅಂತಹ ಸ್ಥಿಿತಿ ಇದ್ದು ಎರಡು ಕುಟುಂಬ ಸದಸ್ಯರು ಜೀವ ಕೈ ಯಲ್ಲಿಡಿದು ಬದುಕು ನಡೆಸುತ್ತಿಿದ್ದಾರೆ.
ಅಲ್ಲದೇ ವಾರ್ಡ್ ಸಂಖ್ಯೆೆ 2ರಲ್ಲಿ ಕೂಡ ಶಿಥಿಲಗೊಂಡ ವಿದ್ಯುತ್ ಕಂಬಗಳನ್ನು ಬದಲಿಸಬೇಕೆಂದು ಮನವಿ ಮಾಡಿದ್ದಾರೆ.
ಒಂದು ವೇಳೆ ಅಧಿಕಾರಿಗಳು ಸಮಸ್ಯೆೆ ಬಗ್ಗೆೆ ನಿರ್ಲಕ್ಷ್ಯ ಮಾಡಿದರೆ, ಜೆಸ್ಕಾಾಂ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರಾಾಂತ ರೈತ ಸಂಘ ಗ್ರಾಾಮ ಸಮಿತಿ ಅಧ್ಯಕ್ಷ ನಿಂಗನಗೌಡ ವಟಗಲ್, ಕಾರ್ಯದರ್ಶಿ ಹನಮುಂತ ಅಗಳದಾಳ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಪರಿವರ್ತಕ ಸ್ಥಳಾಂತರಿಸಲು ಒತ್ತಾಯ

