ಸುದ್ದಿಮೂಲ ವಾರ್ತೆ
ತುಮಕೂರು, ಆ.24: ತುಮಕೂರು ನಗರ ಉಪವಿಭಾಗ-2ರ ಸರಸ್ವತಿಪುರಂ ಶಾಖಾ ವ್ಯಾಪ್ತಿಗೆ ಸಂಬಂಧಿಸಿದಂತೆ ರಿಂಗ್ ರಸ್ತೆ ಹೆಚ್.ಟಿ. ಮತ್ತು ಎಲ್ಟಿ ಲೈನ್ ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವುದರಿಂದ ಆಗಸ್ಟ್ 26ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ.
ಟೂಡಾ ಲೇ ಔಟ್, ರಿಂಗ್ ರಸ್ತೆ, ಅಶ್ವಿನಿ ಕಾಲೇಜು, ಗೆದ್ದಲಹಳ್ಳಿ, ಮಾನಂಗಿ, ಚಿಕ್ಕಹೊಸೂರು, ಕೊಂಡಾಪುರ,
ಗೋಮಾಳ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ವಡ್ಡರಹಳ್ಳಿ, ಬಾಣಾವಾರ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9449844296 ಸಂಪರ್ಕಿಸಬಹುದಾಗಿದೆ.