ಸುದ್ದಿಮೂಲ ವಾರ್ತೆ
ತುಮಕೂರು, ಜೂ.8 : ಕವಿಪ್ರನಿನಿ ಉಪಸ್ಥಾವರಗಳ ತ್ರೈಮಾಸಿಕ ನಿರ್ವಹಣಾ ಕೆಲಸ ನಡೆಯುತ್ತಿರುವ ಕಾರಣ ಈ ಕೆಳಕಂಡ ಸ್ವೀಕರಣಾ ಕೇಂದ್ರಗಳು ಮತ್ತು ಉಪಕೇಂದ್ರಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ತಿಳಿಸಿದ್ದಾರೆ.
ನಿಟ್ಟೂರು, ಗುಬ್ಬಿ, ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು,ಕೆ.ಜಿ.ಟೆಂಪಲ್ ಉಂಗ್ರ ಮತ್ತುಸೋಮಲಾಪುರ 110/11 ಕೆವಿ ಉಪಸ್ಥಾವರ ಹಾಗೂ 220/66/11 ಕೆವಿ ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 10 ರಂದು ಬೆಳಿಗ್ಗೆ10
ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ತುಮಕೂರು, ಊರ್ಡಿಗೆರೆ, ಮೆಳೇಕೋಟೆ, ಕೋರಾ, ಬಡ್ಡಿಹಳ್ಳಿ,
ಸಿ.ಟಿ.ಕೆರೆ 66/11 ಕೆವಿ ಉಪಸ್ಥಾವರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಜೂನ್ 11ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು
ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.