ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.15
ರಾಯಚೂರಿನಲ್ಲಿ ಮೆಣಸಿನಕಾಯಿ ಖರೀದಿ ಮಾರುಕಟ್ಟೆೆ ಪ್ರಾಾರಂಭಿಸಬೇಕು, ಜಿಲ್ಲೆೆಯಲ್ಲಿ ಮೆಣಸಿನಕಾಯಿ ಬೆಳೆದ ರೈತರಿಗೆ ಅನುಕೂಲ ಆಗುತ್ತಿಿದ್ದು, ಜಿಲ್ಲಾಾಡಳಿತ ನಿರ್ಲಕ್ಷ್ಯ ಮಾಡಿದರೆ ಸಾವಿರಾರು ರೈತರೊಂದಿಗೆ ಡಿಸಿ ಕಚೇರಿಗೆ ಮುತ್ತಿಿಗೆ ಹಾಕಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ್ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಸೋಮವಾರ ಮಾತನಾಡಿ, ದೇವದುರ್ಗ, ಲಿಂಗಸುಗೂರು ರಾಯಚೂರು ಗ್ರಾಾಮೀಣ, ಮಾನ್ವಿಿ, ಮಸ್ಕಿಿ ತಾಲೂಕು ಸೇರಿ ಜಿಲ್ಲೆೆಯ ವಿವಿಧಡೆ ರೈತರು ಮೆಣಸಿನಕಾಯಿ ಬೆಳೆಯುತ್ತಿಿದ್ದಾಾರೆ. ಆದರೆ ಸೂಕ್ತ ಮಾರುಕಟ್ಟೆೆ ಇಲ್ಲದೆ ಚಿಲ್ಲಿ ಬೆಳೆಗೆ ಬೆಲೆ ಸಿಗುತ್ತಿಿಲ್ಲ. ವ್ಯಾಾಪಾರಿಗಳು, ದಲ್ಲಾಾಳಿಗಳು ನಿಗದಿ ಮಾಡುವ ಬೆಲೆ ರೈತರಿಗೆ ಸಿಗುತ್ತಿಿದೆ. ಹಲವು ಕಡೆ ಮಾರಾಟದ ನಂತರ ಹಣ ಕೊಡದೆ ಪರಾರಿಯಾಗಿದ್ದು, ರೈತು ಭಾರಿನಷ್ಟ ಅನುಭವಿಸಿದ್ದಾಾರೆ.
ಮೆಣಸಿನ ಕಾಯಿಗೆ ರೂ12-14ಸಾವಿರ ಬೆಲೆಯಿದ್ದು ರೈತರಿಗೆ ನಷ್ಟ ಉಂಟಾಗಲಿದೆ. ಬೆಳಗಾವಿಯ ವಿಕಾಸ ಸೌಧದ ಮುಂದೆ ರೈತರು ಪ್ರತಿಭಟನೆ ನಡೆಸಿದಾಗ ಸಿಎಂ ಸಿದ್ದರಾಮಯ್ಯ ಮೆಣಸಿನಕಾಯಿ ಮಾರುಕಟ್ಟೆೆ ತೆರೆಯುವುದಾಗಿ ಭರವಸೆ ನೀಡಿದ್ದರು. ಮಾರುಕಟ್ಟೆೆ ತೆರೆಯಲು ರೂ25ಕೋಟಿ ಮೀಸಲಿಟ್ಟಿಿದ್ದರು. ಆದರೆ ಜಿಲ್ಲಾಾಡಳಿತ ಹಾಗೂ ಜಿಲ್ಲಾಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ಮಾಡಿ ಅನುದಾನ ಬಳಸಿಕೊಳ್ಳುವಲ್ಲಿ ವಿಲರಾಗಿದ್ದಾಾರೆಂದು ಟೀಕಿಸಿದರು.
ಜಿಲ್ಲೆೆಯ ಅಧಿಕಾರಿಗಳು ರೈತರ ಮಾತು ಕೇಳದಂಥ ಸ್ಥಿಿತಿಯಲ್ಲಿದ್ದಾಾರೆ. ಅಧಿಕಾರಿಗಳು ಆಡಿದ್ದೆೆ ಆಟ ಎನ್ನುವಂತಾಗಿದ್ದು ರೈತರು ಸಂಕಷ್ಟ ಅನುಭವಿಸುತ್ತಿಿದ್ದಾಾರೆ. ಅತಿವೃಷ್ಟಿಿಯಿಂದ ಬೆಳೆ ನಷ್ಟವಾದ ತಾಲೂಕಿನ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾಾರೆ. ಜಿಲ್ಲೆೆಯ ವಿವಿಧ ತಾಲೂಕಿನ ರೈತರಿಗೆ ರೂ50ಸಾವಿರ ವರೆಗೆ ಪರಿಹಾರ ಬಂದಿದೆ. ತಾಲೂಕಿನ ರೈತರಿಗೆ ರೂ2500-3400, ಬಿಡಿಗಾಸು ನೀಡಿದ್ದಾಾರೆ. ಅರಕೇರಾ ತಾಲೂಕಿನ ಬಹುತೇಕ ರೈತರಿಗೆ ಪರಿಹಾರವೇ ಬಂದಿಲ್ಲಾಾವೆಂದು ಆರೋಪಿಸಿದ್ದು, ತಹಸೀಲ್ದಾಾರ್ ನಾಗಮ್ಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದ ಕಾರಣ ರೈತರಿಗೆ ಪರಿಹಾರ ದೊರೆತಿಲ್ಲ. ಕೂಡಲೇ ಸರ್ಕಾರ ಹಾಗೂ ಜಿಲ್ಲಾಾಡಳಿತ ಎಚ್ಚೆೆತ್ತುಕೊಂಡು ರಾಯಚೂರಿನ ಹಳೆಯ ಹತ್ತಿಿ ಮಾರುಕಟ್ಟೆೆ ಜಾಗದಲ್ಲಿ ಮೆಣಸಿನಕಾಯಿ ಮಾರುಕಟ್ಟೆೆ ಪ್ರಾಾರಂಭ ಮಾಡಬೇಕು.ದೇವದುರ್ಗ ಹಾಗೂ ಅರಕೇರಾ ತಾಲೂಕಿನ ರೈತರಿಗೆ ಬೆಳೆ ಪರಿಹಾರಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಜನವರಿಯಲ್ಲಿ ಜಿಲ್ಲಾಾಧಿಕಾರಿ ಕಚೇರಿಗೆ ಮುತ್ತಿಿಗೆ ಹಾಕಲಾಗುವುದೆಂದು ಎಚ್ಚರಿಸಿದರು. ಮುಖಂಡರಾದ ಹಾಜಿ ಮಸ್ತಾಾನ್, ಹುಸೇನ್ ಬಾಷಾ ಹನುಮಗೌಡ, ತಿಮ್ಮನಗೌಡ ಸೇರಿದಂತೆ ಅನೇಕರಿದ್ದರು.
ಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸಲು ಪ್ರಭಾಕರ್ ಆಗ್ರಹ

