ಸುದ್ದಿಮೂಲ ವಾರ್ತೆ ಮಾನ್ವಿ, ಡಿ.02:
ಮಾನ್ವಿಿ ಹಾಗೂ ನಸಲಾಪುರ ಗ್ರಾಾಮಗಳಲ್ಲಿ ಅಂಬೇಡ್ಕರ್ ಅಭಿವೃದ್ಧಿಿ ನಿಗಮದಿಂದ ಮಂಜೂರಿಯಾದ ಅಂದಾಜು 20 ಎಕರೆ ಭೂಮಿಯನ್ನು ಅಮಾಯಕ ದಲಿತ ಮಹಿಳೆಯರಿಂದ ಮಯೂರ ನಸಲಾಪುರ ಎಂಬ ವ್ಯಕ್ತಿಿ ಅಂದಾಜು ಅನಧಿಕೃತವಾಗಿ ಖರೀದಿಸಿ ತನ್ನ ಹೆಸರಿನಲ್ಲಿ ವರ್ಗಾವಣೆ ಮಾಡಿಸಿಕೊಂಡಿರುವುದನ್ನು ರದ್ದುಪಡಿಸಿ ರಾಯಚೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿ ಸರಕಾರಕ್ಕೆೆ ವಾಪಸ್ಸು ಪಡೆದಿರುವ ಕ್ರಮ ಸ್ವಾಾಗತಾರ್ಹ ಎಂದು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಜನಶಕ್ತಿಿ ಕೇಂದ್ರದ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿಿ ತಿಳಿಸಿದರು.
ಮಂಗಳವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಕ್ರಮ, ಅನಧಿಕೃತ ಖರೀದಿ, ನೊಂದಣಿ ವಿರುದ್ದ ಅನೇಕ ವರ್ಷಗಳ ಕಾಲ ನಮ್ಮ ಸಂಘಟನೆಯ ಪದಾಧಿಕಾರಿಗಳು ನಿರಂತರ ಹೋರಾಟ ಮಾಡಿದ ಲವಾಗಿ ಸೂಕ್ತ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳನ್ನೊೊಳಗೊಂಡ ಸಹಾಯಕ ಅಯುಕ್ತರು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆೆ ಕಲಂ 1978 ಕಲಂ 5 ರ ಪ್ರಕಾರ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿದ್ದ ಮಯೂರನ ಹೆಸರಿನಲ್ಲಿರುವ ನೊಂದಣಿ ರದ್ದುಪಡಿಸಿ ಹಾಗೂ ಸದರಿ ಜಮೀನುಗಳ ದಾಖಲಾತಿಗಳಲ್ಲಿ ಕರ್ನಾಟಕ ಸರಕಾರ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿಿ ನಿಗಮ ಎಂದು ನಮೂದಿಸುವಂತೆ ಹಾಗೂ 90 ದಿನಗಳೊಳಗಾಗಿ ಸರಕಾರದ ಸ್ವಾಾಧೀನಕ್ಕೆೆ ಹಿಂದಿರುಗಿಸಲು ಕ್ರಮ ಕೈಗೊಳ್ಳುವಂತೆ ದಿನಾಂಕ 27-11-2025 ರಂದು ಆದೇಶ ಹೊರಡಿಸಿದ್ದಾರೆ.
ಅದೇ ರೀತಿ ಮಾನ್ವಿಿ ಸೀಮಾದ 415, 407, 416 ಸರ್ವೆ ನಂಬರುಗಳ 86 ಎಕರೆ ವಕ್ಫ್ ಜಮೀನುಗಳನ್ನು ಅನಧಿಕೃತವಾಗಿ ಖರೀದಿ ಮಾಡಿ ಶರಣೇಗೌಡ ಹಾಗೂ ಇನ್ನಿಿತರರು ನೊಂದಣಿ ಮಾಡಿಕೊಂಡಿರುವುದನ್ನು ಕೂಡಾ ರದ್ದು ಮಾಡಿ ಪುನಃ ಕರ್ನಾಟಕ ವಕ್ಫ್ ಮಂಡಳಿಗೆ ಮರಳಿ ವಾಪಸ್ಸು ಪಡೆಯುವ ಆದೇಶ ಹೊರಡಿಸಿರುವ ಕ್ರಮವನ್ನು ನಾವು ಅಭಿನಂದಿಸುತ್ತೇವೆ ಎಂದು ಪ್ರಭುರಾಜ ಕೊಡ್ಲಿಿ ತಿಳಿಸಿದರು.
ಹೋರಾಟಕ್ಕೆೆ ಮಣಿದು ಅನಧಿಕೃತ ಖರೀದಿ ಮತ್ತು ನೋಂದಣಿ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಕಾರಣೀಕರ್ತರಾದ ಅಧಿಕಾರಿಗಳು, ಹಾಗೂ ಸಚಿವರಿಗೆ ಧನ್ಯವಾದ ಸಲ್ಲಿಸುವುದಾಗಿ ಪ್ರಭುರಾಜ ಕೊಡ್ಲಿಿ ಹೇಳಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಮೇಜರ್ ಶಾನವಾಜ್ ಖಾನ್ ಕಲ್ಯಾಾಣ ಕರ್ನಾಟಕ ಸಂಘದ ಅಧ್ಯಕ್ಷ ಎಸ್.ಎಂ.ಶಾನವಾಜ್, ಮುಖಂಡರಾದ ಮೈನುದ್ದೀನ್, ಎಂ.ಡಿ.ನುಸರತ್, ಜಯರಾಜ ಕೊಡ್ಲಿಿ, ರಮೇಶ ನಾಯಕ, ಪ್ರಭು ಮೇಧಾ, ಪಂಪಾಪತಿ ಹಡಪದ, ಶಾಮಸಿಂಗ್ ಕೊಟ್ನೆೆಕಲ್, ಯಲ್ಲಪ್ಪ ಚೀಕಲಪರ್ವಿ, ಆನಂದ ಕೊರವಿ ಮುಂತಾದವರು ಉಪಸ್ಥಿಿತರಿದ್ದರು.
ನಿರಂತರ ಹೋರಾಟಕ್ಕೆ ಸಂದ ಜಯ ಅನಧಿಕೃತವಾಗಿ ಖರೀದಿಸಿ, ವರ್ಗಾವಣೆ ಮಾಡಿಕೊಂಡಿದ್ದ 20 ಎಕರೆ ಭೂಮಿ ಹಿಂಪಡೆದ ಸಹಾಯಕ ಆಯುಕ್ತರ ಕ್ರಮ ಸ್ವಾಗತಾರ್ಹ – ಪ್ರಭುರಾಜ ಕೊಡ್ಲಿ

