ಸದೃಢ ಆರೋಗ್ಯಕ್ಕೆ ಯೋಗ ರೂಢಿಸಿಕೊಳ್ಳಿ : ನ್ಯಾ.ಬಸವರಾಜ ಸನದಿ
ಸುದ್ದಿಮೂಲ ವಾರ್ತೆ
ಹೊಸಕೋಟೆ,ಜೂ.21: ಸದೃಢ ಆರೋಗ್ಯಕ್ಕಾಗಿ ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ಎಂದು ಜೆಎಂಎಪ್ ಮುಖ್ಯ ನ್ಯಾಯಾಧೀಶ ಬಸವರಾಜ್ ಸನದಿ ಹೇಳಿದರು.
ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಪ್ ಸಿ ಕೋರ್ಟ್ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿನಿತ್ಯ ಒಂದು ಗಂಟೆಗಳ ಕಾಲ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯವಂತರಾಗಬಹುದು. ಒತ್ತಡದ ಜೀವನ ಜಂಜಾಟದಲ್ಲಿ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸಿ ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ಹಣ ವ್ಯಯಮಾಡುವುದಕ್ಕಿಂತ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ, 184 ದೇಶಗಳಲ್ಲಿ ಯೋಗದಿನಾಚರಣೆ
ಮಾಡಲಾಗುತ್ತಿದೆ. ದೀರ್ಘಕಾಲದ ಯೋಗಭ್ಯಾಸವು ಉತ್ತಮ ಆರೋಗ್ಯಕ್ಕೆ ಉಚಿತ ಔಷಧಿಯಂತೆ ಕೆಲಸ ಮಾಡಲಿದೆ ಎಂದರು.
ಈ ಸಂಧರ್ಭದಲ್ಲಿ ಯೋಗ ಗುರುಗಳಾದ ಭಾಸ್ಕರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ , ಖಜಾಂಚಿ ರವಿಕುಮಾರ್ ಕೆ.ಎಂ, ಜಂಟಿ ಕಾರ್ಯದರ್ಶಿ ಮುನಿರಾಜು ನಿರ್ದೇಶಕರಾದಕೃಷ್ಣಪ್ಪ .ವಿ, ವಕೀಲರಾದ ಸರ್ವಮಂಗಳ ಸೇರಿದಂತೆ ಹಲವರು ಇದ್ದರು.