ಸುದ್ದಿಮೂಲ ವಾರ್ತೆ ಬೆಂಗಳೂರು, ನ.22:
ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆೆಸ್ ಸರ್ಕಾರವನ್ನು ಅಸ್ಥಿಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿಿಯಾಗಲಿದ್ದರೆ, ಬಿವೈ ವಿಜಯೇಂದ್ರ ಉಪಮುಖ್ಯಮಂತ್ರಿಿ ಆಗುತ್ತಾಾರೆ ಎಂಬ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಅಂತಹ ಯಾವುದೇ ಯೋಚನೆ ನಮ್ಮ ಪಕ್ಷದ್ದಲ್ಲ ಎಂದರು.
ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಈ ಸರ್ಕಾರದ ಅಸ್ಥಿಿರತೆಯನ್ನು ನಾವು ಬಯಸುವುದಿಲ್ಲ. ಈ ಸರ್ಕಾರ ಐದು ವರ್ಷಗಳ ಕಾಲ ತಮ್ಮ ಅವಧಿಯನ್ನು ಮುಗಿಸಬೇಕು, ಇದು ನಮ್ಮ ಆಶಯ ಎಂದು ಜೋಶಿ ಹೇಳಿದ್ದಾರೆ.
ಇಂಡಿ ಮೈತ್ರಿಿಕೂಟ ಪ್ರಸ್ತುತತೆ ಕಳೆದುಕೊಂಡಿದೆ. ಮೈತ್ರಿಿಕೂಟದ ಸ್ವರೂಪ ಅಸ್ವಾಾಭಾವಿಕ ಎಂದ ಅವರು, ಇಂತಹ ಸಂಗತಿಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದಿದ್ದಾರೆ.
ಕಾಂಗ್ರೆೆಸ್ ಸರ್ಕಾರದ ವಿರುದ್ಧ ಭ್ರಷ್ಟಾಾಚಾರದ ಆರೋಪಗಳಿದ್ದರೂ, ಜನಾದೇಶಕ್ಕೆೆ ಗೌರವ ನೀಡಿ, ಸರ್ಕಾರಕ್ಕೆೆ ಐದು ವರ್ಷಗಳ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕೆಂಬುದು ಬಿಜೆಪಿಯ ನಿಲುವು ಎಂದು ಪ್ರಲ್ಹಾಾದ್ ಜೋಶಿ ತಿಳಿಸಿದ್ದಾರೆ.

