ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.06:
ಬೆಂಗಳೂರು ಸೇರಿದಂತೆ ಇತರೆ ಕಡೆಗಳಲ್ಲಿ ಅಕ್ರಮ ವಲಸೆ ಬಾಂಗ್ಲಾಾ ರೋಹಿಂಗ್ಯಗಳ ಕುರಿತು ಸರ್ವೇ ಮಾಡಲಾಗುತ್ತಿಿದ್ದು ಆಧಾರ್ ದುರ್ಬಳಕೆ ಕುರಿತು ಮಾಹಿತಿ ಲಭ್ಯವಾಗಿದೆ. ಮೂಲ ಸ್ಥಳದ ಶೋಧನೆ ಮಾಡಲಾಗಿದೆ. ದುರ್ಬಳಕೆ ಕುರಿತು ಸರಕಾರ ಗಮನಕ್ಕೆೆ ತಂದರೂ ಕ್ರಮ ಕೈಗೊಂಡಿಲ್ಲ.ಕರ್ನಾಟಕದಲ್ಲಿ 5 ಲಕ್ಷ ಅಕ್ರಮ ಬಾಂಗ್ಲಾಾ ವಲಸಿಗರು ಇದ್ದಾರೆ. ಸಚಿವ ಜಮೀರ್ ರವರ ಚಾಮರಾಜಪೇಟೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾಾ ವಲಸಿಗರು ಇದ್ದಾರೆ ಎಂಬುದು ನಮಗೆ ಮಾಹಿತಿ ಇದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ತಾಲ್ಲೂಕಿನ ಕೋಮರನಹಳ್ಳಿಿ ಬಳಿ ಇರುವ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾಾ ಆಸ್ಪತ್ರೆೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ನಡೆದ ಪತ್ರಿಿಕಾಗೋಷ್ಠಿಿಯಲ್ಲಿ ಅವರು ಮಾತನಾಡಿದರು.
ದೇಶದ ರಕ್ಷಣೆಗಾಗಿ ಮೋದಿ ಅವರನ್ನು ದೇಶದ ಜನ ಮೂರು ಬಾರಿ ಕೇಂದ್ರದಲ್ಲಿ ಕೂಡಿಸಿದ್ದಾರೆ. ಮುಂಬರುವ ಭಾರತ – ಬಾಂಗ್ಲಾಾದೇಶ ಕ್ರಿಿಕೆಟ್ ಟೂರ್ನಮೆಂಟ್ ಅನ್ನು ನಿಷೇಧಿಸಬೇಕು. ಕೂಡಲೇ ಪ್ರಧಾನ ಮಂತ್ರಿಿ ನರೇಂದ್ರ ಮೋದಿಯವರು ಮಧ್ಯೆೆ ಪ್ರವೇಶಿಸಬೇಕು ಎಂದು ಒತ್ತಾಾಯಿಸಿದರು.
ಮರ್ಯಾದ ಹತ್ಯೆೆ ತೀವ್ರವಾಗಿ ಖಂಡಿಸಿದ ಅವರು, ಮಾನವ ಕುಲವೇ ತಲೆ ತಗ್ಗಿಿಸುವ ಕೃತ್ಯವಾಗಿದೆ. ಲವ್ ಜಿಹಾದ್ ನಲ್ಲಿ ಸಿಲುಕಿಸಿದವರ ಸಹಾಯಕ್ಕಾಾಗಿ ಸಹಾಯವಾಣಿ ಯನ್ನು ತೆರೆಯಲಾಗಿದೆ ಇದೊಂದು ಇಸ್ಲಾಾಮೀಕರಣದ ಸಂಕೇತ ಎಂದರು.
ದಕ್ಷಿಣ ರಾಜ್ಯದ ಕಾರ್ಯಾಧ್ಯಕ್ಷ ಸುಂದರೇಶ್ ನರಗಲ್ ಮಾತನಾಡಿ, ಸರ್ಕಾರ ಹೋರಾಟಗಾರನ್ನು ಹತ್ತಿಿಕ್ಕಲು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ನ್ಯಾಾಯ ಸಿಗುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ರವರಿಗೆ ಜನನಿ ಯೋಗ ಆಸ್ಪತ್ರೆೆಯಿಂದ ಗೌರವ ಸಮರ್ಪಿಸಲಾಯಿತು. ಕೇಂದ್ರದ ನಿರ್ವಾಹಕರಾದ ಡಾ. ರಾಜೇಶ್ ಪಾದೇಕಲ್, ಉದಯ ಶಂಕರ್ ಭಟ್ ಹಾಗು ಚಿಕಿತ್ಸಾಾ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.
ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಪ್ರಮೋದ ಮುತಾಲಿಕ್ ಆಗ್ರಹ

