ಸುದ್ದಿಮೂಲ ವಾರ್ತೆ ಮಸ್ಕಿ, ನ.30:
ಕಾಂಗ್ರೆೆಸ್ ಪಕ್ಷದ ಸರ್ಕಾರ ರೈತರಿಗೆ ಅನ್ಯಾಾಯ ಮಾಡಿದೆ. ಅಭಿವೃದ್ದಿಯನ್ನು ಕಡೆಗಣಿಸಿ ಕೇವಲ ಪಂಚ ಗ್ಯಾಾರಂಟಿ ಯೋಜನೆಗಳ ಸರ್ಕಸ್ ಮಾಡುತ್ತ ಮುಖ್ಯಮಂತ್ರಿಿ ಕುರ್ಚಿಗಾಗಿ ಕಾಲಹರಣ ಮಾಡಿ ರೈತರನ್ನು ಕಡೆಗಣಿಸಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆರೋಪಿಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಾಣದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಹತ್ತಿಿರ ಬಿಜೆಪಿಯಿಂದ ಶನಿವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತುಂಗಭದ್ರ ಎಡದಂಡೆ ನಾಲೆಗೆ ನೀರು ಕೊಡಿ ಇಲ್ಲ ಪ್ರತಿ ಎಕರೆಗೆ 2500 ಪರಿಹಾರ ಕೊಡಿ, ಅತಿವೃಷ್ಟಿಿಗೆ ತುತ್ತಾಾದ ಬೆಳೆಗೆ ರಾಜ್ಯ ಸರ್ಕಾರ ಶೀಘ್ರ ಪರಿಹಾರ ಕೊಡಿ, ಮಸ್ಕಿಿ ತಾಲ್ಲೂಕಿನಲ್ಲಿ ನೆನೆಗುದ್ದಿಗೆ ಬಿದ್ದಿರುವ ನೀರಾವರಿ ಯೋಜನೆಗಳಾದ ನಂದವಾಡಗಿ ಏತ ನೀರಾವರಿ ಯೋಜನೆ, ಕೆರೆ ತುಂಬುವ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು. 5ಎ ಕಾಲುವೆ ಕಾಮಗಾರಿ ಆರಂಭಿಸಿ ರೈತರ ಹೊಲಗಳಿಗೆ ನೀರು ಹರಿಸಿ ಚುನಾವಣೆಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಿಿ, ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಿಸಿಕೊಡಿ, ಹಾಲಿಗೆ ಸಹಾಯ ಧನ ಹೆಚ್ಚಿಿಸಿ, ಮುದ್ರಾಾಂಕ ಶುಲ್ಕ ಕಡಿಮೆ ಮಾಡಿಕೊಡಿ ಎಂದು ಹಲವು ಬೇಡಿಕೆಗಳನ್ನಿಿಟ್ಟುಕೊಂಡು ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ಪ್ರತಿಭಟನೆ ಆರಂಭಿಸಿದ ಪಕ್ಷದ ಪದಾಧಿಕಾರಿಗಳು ಹಾಗೂ ರೈತರು ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಿಮಠ ಉಪ ತಹಸೀಲ್ದಾಾರ ನಾಗರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವಂತರಾಯ ಕುರಿ, ಚಂದ್ರಶೇಖರ ಗೂಗೆಬಾಳ, ಮಲ್ಲಪ್ಪ ಅಂಕುಶದೊಡ್ಡಿಿ, ಡಾ.ಬಿ.ಎಚ್.ದಿವಟರ್, ಶೇಖರಪ್ಪ ಹುಲ್ಲೂರು, ಬಸವರಾಜಸ್ವಾಾಮಿ ಹಸಮಕಲ್, ಪ್ರಸನ್ನ ಪಾಟೀಲ್, ಶರಣಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಕುರ್ಚಿಗಾಗಿ ಕಾಲಹರಣ, ರೈತ ಕಡೆಗಣನೆ – ಪ್ರತಾಪಗೌಡ ಪಾಟೀಲ ಆರೋಪ

