ಸುದ್ದಿಮೂಲ ವಾರ್ತೆ ಮೈಸೂರು, ಜ.05:
ನೂತನ ವರ್ಷದ ಕ್ಯಾಾಲೆಂಡರ್ ಬಿಡುಗಡೆ ಮಾಡುವ ಮೂಲಕ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆೆ ಪ್ರತಾಪ್ ಸಿಂಹ ಪ್ರವೇಶ ಮಾಡುವ ಮೂಲಕ ರಾಜ್ಯ ರಾಜಕಾರಣಕ್ಕೆೆ ಬರುವ ಮುನ್ಸೂಚನೆ ನೀಡಿದ್ದಾರೆ.
ಮೈಸೂರು ನಗರದ ವ್ಯಾಾಪ್ತಿಿಯ ಚಾಮರಾಜ ವಿಧಾನಸಭೆ ಕ್ಷೇತ್ರದಲ್ಲಿ ಸೋಮವಾರ ಪ್ರತಾಪ್ ಸಿಂಹ ಸ್ನೇಹ ಬಳಗದ ಹೆಸರಿನಲ್ಲಿ ಕ್ಯಾಾಲೆಂರ್ಡ ಬಿಡುಗಡೆ ಮಾಡಲಾಯಿತು. ಕ್ಯಾಾಲೆಂಡರ್ನಲ್ಲಿ ಪ್ರಧಾನಿ ನರೇಂದ್ರಮೋದಿ ೆಟೊ ಜೊತೆಗೆ ಪ್ರತಾಪ್ ಸಿಂಹ ೆಟೊ ಮತ್ತು ಬಿಜೆಪಿ ಸಿಂಬಲ್ ಮಾತ್ರ ಬಳಕೆ ಮಾಡಲಾಗಿತ್ತು.
ಕ್ಯಾಾಲೆಂಡರ್ನ ಪ್ರತಿ ಹಾಳೆಯಲ್ಲಿ ಈ ಹಿಂದೆ ಮೈಸೂರು-ಕೊಡಗು ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿಿ ಕಾರ್ಯಕ್ರಮಗಳ ೆಟೊಗಳನ್ನು ಹಾಕಲಾಗಿತ್ತು. ಒಕ್ಕಲಿಗರ ಪ್ರಾಾಬಲ್ಯದ ಚಾಮರಾಜ ವಿಧಾನಸಭೆ ಕ್ಷೇತ್ರ ಒಕ್ಕಲಿಗರ ಪ್ರಾಾಬಲ್ಯ ಇರುವ ಕ್ಷೇತ್ರವಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಚಾಮರಾಜ ಕ್ಷೇತ್ರದಿಂದಲೇ ಕಣಕ್ಕಿಿಳಿಯಲು ಪ್ರತಾಪ್ ಸಿಂಹ ತಯಾರಿ ನಡೆಸುತ್ತಿಿದ್ದಾರೆ ಎನ್ನಲಾಗಿದ್ದು, ಕ್ಯಾಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಮಾಜಿ ನಗರಪಾಲಿಕೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
ಇದು ಸಹಜ:
ಈ ಬಗ್ಗೆೆ ಪ್ರತಿಕ್ರಿಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ನಾನು ರಾಜ್ಯ ರಾಜಕಾರಣಕ್ಕೆೆ ಬಂದಿದ್ದೇನೆ. ಇದು ಸಹಜ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯ ರಾಜಕಾರಣಕ್ಕೆೆ ಬರಬೇಕು ತಾನೇ. ಎಲ್ಲಾ ದೃಷ್ಟಿಿಯಿಂದಲೂ ಚಾಮರಾಜ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ಸಹಜವಾಗಿಯೇ ಚಾಮರಾಜ ಕ್ಷೇತ್ರ ನನ್ನ ಆಯ್ಕೆೆಯಾಗಿರುತ್ತದೆ. ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಇದು ಬಿಜೆಪಿ ಪ್ರಾಾಬಲ್ಯದ ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ ಎಂದು ಹೇಳಿದರು.
ಚಾಮರಾಜ ವಿಧಾನಸಭೆ ಕ್ಷೇತ್ರ ಹಣದ ಪ್ಯಾಾಕೆಟ್ ಕೊಟ್ಟು ಗೆಲ್ಲುವ ಕ್ಷೇತ್ರವಲ್ಲ.ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀೀತಿ ತೋರಿಸುವ ಜನ. ಬರಿ ಒಕ್ಕಲಿಗರ ಪ್ರಾಾಬಲ್ಯದ ಲೆಕ್ಕದಲ್ಲಿ ಈ ಕ್ಷೇತ್ರವನ್ನು ನೋಡುತ್ತಿಿಲ್ಲ.ಇಲ್ಲಿ ಎಲ್ಲ ರೀತಿಯ ವರ್ಗದ ಜನರು ಇದ್ದಾರೆ. ಪ್ರಜ್ಞಾವಂತರು ಬುದ್ಧಿಿವಂತರಿದ್ದಾರೆ. ಹೀಗಾಗಿ ಸಹಜವಾಗಿ ಚಾಮರಾಜ ಕ್ಷೇತ್ರ ನನ್ನ ಆಯ್ಕೆೆಯಾಗಿದೆ ಎಂದು ಸಮರ್ಥನೆ ನೀಡಿದರು.

