ದಯಾಶಂಕರ ಮೈಲಿ ಮೈಸೂರು, ಜ.07:
ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ಮುಕ್ಕಾಾಲು ವರ್ಷಗಳು ಇದೆ. ಆಗಲೇ ಸಾಂಸ್ಕೃತಿಕ ರಾಜದಾನಿ ಮೈಸೂರು ನಗರದ ವ್ಯಾಾಪ್ತಿಿಯೊಳಗೆ ಬರುವ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆೆ ಇಳಿಯಲು ಬಿಜೆಪಿ ಮಾಜಿ ಸಂಸದ ಪ್ರತಾಪ್ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ನಡುವೆ ಒಂದು ಬಗೆಯ ಮೆಗೌಟ್ ಶುರುವಾಗಿದೆ.
ಇದನ್ನು ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದಂತೆ ಎನ್ನಬೇಕೋ.. ಅಥವಾ ಕಾಣದ ಕಡಲಿಗೆ ಹಂಬಲಿಸಿದೆ ಮನ ಎನ್ನಬೇಕೋ ಎಂಬುದು ಕಾರ್ಯಕರ್ತರಿಗೆ ಅರಿಯದಾಗಿದೆ. ಏಕೆಂದರೆ ಬಿಜೆಪಿ ರಾಷ್ಟ್ರೀಯ ಪಕ್ಷ. ಇಲ್ಲಿ ಹೈಕಮಾಂಡ್ನದ್ದೇ ದರ್ಬಾರ್. ಸೃಳೀಯರ ಕಾರುಬಾರು ಏನು ನಡೆಯಲ್ಲ.
ಬಿಜೆಪಿ ಹೈಕಮಾಂಡ್ ಆಚ್ಚರಿ ಪ್ರಯೋಗಗಳನ್ನು ಮಾಡಿರುವುದುಂಟು. ಪ್ರಥಮ ಬಾರಿಗೆ ಎಂಎಲ್ಎ ಆದ ಮಹಿಳೆಯನ್ನು ದೆಹಲಿ ಮುಖ್ಯಮಂತ್ರಿಿ ಗದ್ದುಗೆಗೆ ಕೂರಿಸಿದ್ದು ಇದೆ. ಅದೇ ಏಕೆ? ಚಾಮರಾಜ ಕ್ಷೇತ್ರಕ್ಕೆೆ ಅಂಟಿಕೊಂಡಂತೆ ಇರುವ ಕೃಷ್ಣರಾಜ ಕ್ಷೇತ್ರದಲ್ಲಿ ಹಲವು ಬಾರಿ ಶಾಸಕರಾಗಿ, ಮಂತ್ರಿಿ ಆಗಿದ್ದ ಎಸ್.ಎ. ರಾಮದಾಸ್ ಅವರಂತವರಿಗೆ ಟಿಕೆಟ್ ನಿರಾಕರಿಸಿ, ಸಾಮಾನ್ಯ ಕಾರ್ಯಕರ್ತರಾಗಿದ್ದ ಶ್ರೀವತ್ಸ ಅವರಿಗೆ ಟಿಕೆಟ್ ನೀಡಿರುವ ಜೀವಂತ ನಿದರ್ಶಗಳು ಇವೆ.
ಜೊತೆಗೆ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಿ ಇದೆ. ಒಂದು ವೇಳೆ ಈ ಕ್ಷೇತ್ರದಲ್ಲಿ ಒಕ್ಕಲಿಗರೇ ಹೆಚ್ಚಾಾಗಿರುವ ಇರುವ ಕಾರಣ ಜೆಡಿಎಸ್ಗೆ ಬಿಟ್ಟುಕೊಡುವ ಸಾಧ್ಯತೆಗಳನ್ನು ತಳ್ಳಿಿ ಹಾಕುವಂತಿಲ್ಲ. ಇದು ಗೊತ್ತಿಿರುವ ಪ್ರತಾಪ್ಸಿಂಹ- ನಾಗೇಂದ್ರ ಈಗಲೇ ಟಿಕೆಟ್ಗಾಗಿ ಕಾದಾಟ ನಡೆಸುತ್ತಿಿರುವುದು ಎಷ್ಟು ಸರಿ? ಎಂಬ ಪ್ರಶ್ನೆೆಯನ್ನು ರಾಜಕೀಯವಲಯದಲ್ಲಿ ಕೇಳಲಾಗುತ್ತಿಿದೆ.
ಚಾಮರಾಜ ಕ್ಷೇತ್ರದಲ್ಲಿ ಕ್ಯಾಾಲೆಂಡರ್ ಬಿಡುಗಡೆ ಮಾಡಿದ ವೇಳೆ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆಯನ್ನು ಪ್ರತಾಪ್ಸಿಂಹ ಬಹಿರಂಗವಾಗಿ ವ್ಯಕ್ತಪಡಿಸಿದರು. ಇದು ಈ ಕ್ಷೇತ್ರದ ಮಾಜಿ ಶಾಸಕ ನಾಗೇಂದ್ರ ಅವರನ್ನು ಕೆಂಡಾಮಂಡಲವಾಗಿಸಿದೆ.
ಎರಡು ಬಾರಿ ಮೈಸೂರು-ಕೊಡಗು ಕ್ಷೇತ್ರದಿಂದ ಎಂ.ಪಿ ಆಗಿ ಗೆದ್ದಿದ್ದ ಪ್ರತಾಪ್ಸಿಂಹ ಅವರಿಗೆ ಚಾಮರಾಜ ಕ್ಷೇತ್ರ ಹೆಚ್ಚಿಿನ ಮತ ನೀಡಿತ್ತು. ಅಲ್ಲದೇ ಒಕ್ಕಲಿಗರ ಕ್ಷೇತ್ರ ಈ ಹಿನ್ನೆೆಲೆಯಲ್ಲಿ ಹಾಸನ ಜಿಲ್ಲೆ ಸಕಲೇಶಪುರದವರಾದ ಸಿಂಹ ಅವರನ್ನು ಇಲ್ಲಿಂದ ಸ್ಫರ್ಧಿಸಲು ಮುಂದಾಗಿರಬಹುದು.
ಗೌಡರ ಗದ್ಲ
ಈ ಕ್ಷೇತ್ರ ಈಗಲ್ಲ ಹಿಂದಿನಿಂದಲೂ ಗೌಡರ ಗದ್ಲಕ್ಕೆೆ ೇಮಸ್. ಏಕೆಂದರೆ ಇಲ್ಲಿ ಒಕ್ಕಲಿಗರ ಪ್ರಾಾಬಲ್ಯವಿದೆ. ಅದಕ್ಕಾಾಗಿ ಇಲ್ಲಿ ಗೌಡರ ನಡುವೆಯೇ ಗುದ್ದಾಟ, ಗದ್ದಲ ನಡೆಯುತ್ತಿಿದೆ. ಸಾಮಾನ್ಯವಾಗಿ ಹಿಂದೆಲ್ಲಾ ಚುನಾವಣೆಗಳಲ್ಲಿ ಪೈಪೋಟಿ ನಡೆಯುತ್ತಿಿತ್ತು. ಇದೀಗ ಪ್ರಥಮ ಬಾರಿಗೆ ಚುನಾವಣೆ ದೂರ ಇರುವಾಗಲೇ ಬಿಜೆಪಿ ನಾಯಕರ ನಡುವೆ ೈಟ್ ಏರ್ಪಟ್ಟಿಿದೆ.
ಹಿಂದೆಯೆಲ್ಲಾ ಶುದ್ಧ ವ್ಯಕ್ತಿಿತ್ತವುಳ್ಳ ರಾಜಕಾರಣಿಗಳು ಈ ಕ್ಷೇತ್ರದಿಂದ ಆಯ್ಕೆೆ ಆಗಿದ್ದಾರೆ. 1978 ರಲ್ಲಿ ಚಾಮರಾಜ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆೆ ಆಗಿದ್ದ ಕೆ.ಪುಟ್ಟಸ್ವಾಾಮಿ ಅವರು ಸಿದ್ದವನಹಳ್ಳಿಿ ನಿಜಲಿಂಗಪ್ಪ, ವಿರೇಂದ್ರ ಪಾಟೀಲರ ಸಚಿವ ಸಂಪುಟದಲ್ಲಿ ಸಚಿವರಾಗಿ ಅಪಾರ ಕೀರ್ತಿ ಗಳಿಸಿದ್ದು ಈಗಲೂ ಸ್ಮರಣೀಯವೇ. ಹಾಗೇಯೇ ಬಿ.ಎನ್.ಕೆಂಗೇಗೌಡರು, ಪಿ.ಎಂ. ಚಿಕ್ಕಬೋರಯ್ಯ, ಹರಳಹಳ್ಳಿಿ ಕೆಂಪೇಗೌಡ, ಕೆ.ಕೆಂಪೀರೆಗೌಡ, ಎಚ್.ಎಸ್. ಶಂಕರಲಿಂಗೇಗೌಡ ಮತ್ತು ವಾಸು ಅವರಂತಹ ಸಜ್ಜನರು ಈ ಕ್ಷೇತ್ರದಿಂದಲೇ ಆಯ್ಕೆೆಯಾಗಿದ್ದರು.
ಮಾರ್ವಾಡಿ ಮತದಾರರು ಹೆಚ್ಚಳ:
ಹೌದು.. ಕ್ಷೇತ್ರದಲ್ಲಿ ಒಕ್ಕಲಿಗರು 1.15 ಲಕ್ಷ ಇದ್ದಾರೆ. ಆದರೆ ಈಗ ಮಾರ್ವಾಡಿ ಮತದಾರರ ಸಂಖ್ಯೆೆ 30 ಸಾವಿರಕ್ಕೆೆ ಏರಿದೆ. ಜೊತೆಗೆ ಬ್ರಾಾಹ್ಮಣ ಮತ್ತು ಮುಸ್ಲಿಿಂಮರು ಕೂಡ ತಲಾ 30 ಸಾವಿರ ಇದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆೆಸ್ನಿಿಂದ ಒಕ್ಕಲಿಗರೇ ಅಭ್ಯರ್ಥಿಗಳು ಆಗುವುದರಿಂದ ಆ ವರ್ಗಕ್ಕೆೆ ಸೇರಿದ ಮತಗಳು ವಿಭಜನೆ ಆಗುವುದು ಸಹಜ. ಆಗ ಇತರೇ ಸಮುದಾಯಗಳ ಮತಗಳನ್ನು ಪಡೆಯುವುದರ ಮೇಲೆ ಗೆಲುವು ಅವಲಂಬಿತವಾಗಿದೆ.
ಈ ಕ್ಷೇತ್ರದಲ್ಲಿ ಒಕ್ಕಲಿಗರೇ ಅಧಿಕವಾಗಿದ್ದರೂ ಈಗಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್ ಗೆದ್ದಿಲ್ಲ. ಆದರೆ ಮಹಾನಗರಪಾಲಿಕೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಗೆಲ್ಲುತ್ತಾಾರೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಲ್ಕುಲ್ ಸಾಧ್ಯವಾಗಿಲ್ಲ.
ನಾಲ್ಕು ಬಾರಿ ಎಂಎಲ್ಎ ಆಗಿದ್ದ ಎಚ್.ಎಸ್. ಶಂಕರಲಿಂಗೇಗೌಡರನ್ನು ಹಿರಿತನದ ಮೇಲೆ ಸಚಿವರನ್ನಾಾಗಿ ಮಾಡದೇ ಎಸ್.ಎ. ರಾಮದಾಸ್ ಅವರನ್ನು ಸಚಿವರನ್ನಾಾಗಿ ಮಾಡಲಾಯಿತು. ಆಗ ಗೌಡರು ಬಿಜೆಪಿ ತೊರೆದು ಜೆಡಿಎಸ್ನಿಂದ ಸ್ಪರ್ಧಿಸಿ ಸೋಲುಂಡರು.
ಹೇಳಿಕೆಗಳು
ರಾಜ್ಯ ರಾಜಕಾರಣಕ್ಕೆೆ ಬರಬೇಕು ತಾನೇ
ಇದು ಸಹಜ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯ ರಾಜಕಾರಣಕ್ಕೆೆ ಬರಬೇಕು ತಾನೇ. ಎಲ್ಲಾ ದೃಷ್ಟಿಿಯಿಂದಲೂ ಚಾಮರಾಜ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ಸಹಜವಾಗಿಯೇ ಚಾಮರಾಜ ಕ್ಷೇತ್ರ ನನ್ನ ಆಯ್ಕೆೆಯಾಗಿರುತ್ತದೆ. ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಇದು ಬಿಜೆಪಿ ಪ್ರಾಾಬಲ್ಯದ ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ.
– ಪ್ರತಾಪ್ಸಿಂಹ, ಮಾಜಿ ಸಂಸದ
ಹಿಂದೂ ಹುಲಿ ಇದ್ದೀನಿ ಅಂತಾರೆ ಸಿಂಹ
ನಾನೊಬ್ಬ ಹಿಂದೂ ಹುಲಿ ಅಂತಾರೆ ಸಿಂಹ ಅವರು. ರಾಜ್ಯ ನಾಯಕರಾಗಿ ಬೆಳೆದಿದ್ದಾರೆ. ಅವರು ಬೇರೆ ಎಲ್ಲಾದರೂ ಸ್ಪರ್ಧೆ ಮಾಡಲಿ. ಅವರು ಬೇರೆ ಊರಿನಿಂದ ಬಂದವರು. ನಾನು ಇದೇ ಊರಿನವನು, ಬೇರೆ ಕಡೆ ಹೋಗಲು ಆಗೋದಿಲ್ಲ. ನನ್ನ ಹುಟ್ಟೂರಿನಲ್ಲೇ ನನ್ನ ಹೋರಾಟ. 2028ಕ್ಕೂ ನನಗೇ ಟಿಕೆಟ್ ಸಿಗುವ ವಿಶ್ವಾಾಸ ಇದೆ. ಮಂಡಲದ ಅಧ್ಯಕ್ಷರು ಯಾರು ಪರ ಇದ್ದಾರೆ ಒಮ್ಮೆೆ ಕೇಳಿ. ಟಿಕೆಟ್ ಯಾರಿಗೆ ನೀಡಬೇಕು ಎಂದು ನಿರ್ಧರಿಸುವುದು ಹೈಕಮಾಂಡ್. ಪ್ರತಾಪ್ ಸಿಂಹಗೆ ಅದರ ಬಗ್ಗೆೆ ಅರಿವಿರಬೇಕಿತ್ತು.
– ಎಲ್. ನಾಗೇಂದ್ರ, ಚಾಮರಾಜ ಕ್ಷೇತ್ರದ ಮಾಜಿ ಶಾಸಕ, ಹಾಲಿ ಬಿಜೆಪಿ ನಗರಾಧ್ಯಕ್ಷ
ನಾವ್ಯಾಾರು ತೀರ್ಮಾನ ಮಾಡಲ್ಲ
ಎಂಟ್ರಿಿ ಹಾಗೂ ಎಕ್ಸಿಿಟ್ ನಾವ್ಯಾಾರು ತೀರ್ಮಾನ ಮಾಡಲ್ಲ. ಅದನ್ನು ನಿರ್ಧಾರ ಮಾಡುವುದು ರಾಜ್ಯ, ರಾಷ್ಟ್ರದ ವರಿಷ್ಠರು. ಅವರು ಉತ್ತಮ ಕೆಲಸ ಮಾಡಲಿ. ಎಲ್ಲರೂ ಒಗ್ಗೂಡಿ ಪಕ್ಷಕ್ಕಾಾಗಿ ಕೆಲಸ ಮಾಡುವುದು ಮೊದಲ ಆದ್ಯತೆ ಆಗಿರಲಿ. ಚಾಮರಾಜ ಕ್ಷೇತ್ರಕ್ಕೆೆ ಅಭ್ಯರ್ಥಿ ಆಗುವ ವಿಚಾರ. ನಮಗೆಲ್ಲರಿಗೂ ಅಭಿವ್ಯಕ್ತಿಿ, ವಾಕ್ ಸ್ವಾಾತಂತ್ರ್ಯ ಇದೆ. ವರಿಷ್ಠರು ಯಾರಿಗೆ ಸೂಚಿಸ್ತಾಾರೋ ಅವರಿಗೆ ನಮ್ಮ ಬೆಂಬಲ. ಪಕ್ಷದ ಗೆಲುವಿಗಾಗಿ ಶ್ರಮಿಸುವುದು ಎಲ್ಲರ ಕರ್ತವ್ಯವಾಗಿದೆ.
-ಯದುವೀರ್ ಒಡೆಯರ್, ಸಂಸದ

