ಸುದ್ದಿಮೂಲ ವಾರ್ತೆ (ಮಟ್ಟೂರು) ಲಿಂಗಸಗೂರ, ಡಿ.02:
ಶಾಲಾ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯ ಕ್ರಮಗಳು ಸಹಕಾರಿಯಾಗಿವೆ. ಸೋಲು ಗೆಲುವು ಸಹಜ ಆದರೆ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊೊಳ್ಳುವ ಮೂಲಕ ಮಕ್ಕಳು ಪ್ರತಿಭೆಯನ್ನು ಗುರುತಿಸಲು ಇಂಥ ವೇದಿಕೆಗಳು ತುಂಬಾ ಉಪಯುಕ್ತವಾಗಿವೆ ಎಂದು ಮಸ್ಕಿಿ ನೂತನ ನಗರ ಯೋಜನೆ ಪ್ರಾಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರ್ವಿಹಾಳ ಹೇಳಿದರು.
ಶಿಕ್ಷಣ ಇಲಾಖೆ ಲಿಂಗಸ್ಗೂರು. ಕಿರಿಯ. ಹಿರಿಯ ಪ್ರಾಾಥಮಿಕ. ಪ್ರೌೌಢಶಾಲಾ ವಿಭಾಗ ಮಟ್ಟೂರವ ಸಯುಕ್ತ ಆಶ್ರಯದಲ್ಲಿ ಸಂತೆಕೆಲ್ಲೂರು ಸಿಆರ್ಸಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ. ಉದ್ಘಾಾಟನೆ ನೆರವೇರಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರ ಶಿಕ್ಷಣಕ್ಕೆೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿಿದ್ದು. ಸದುಪಯೋಗ ಪಡೆದುಕೊಂಡು. ಉತ್ತಮ ಶಿಕ್ಷಣ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದರು.
ಲಿಂಗಸೂಗೂರು ಬಿಇಓ ಸುಜಾತ ಹೂನೂರ್ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ್. ಲಿಂಗಸುಗೂರು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಗುರುಸಂಗಯ್ಯ, ಸಿ.ಆರ್.ಪಿ. ಪರಶುರಾಮ್ ಗ್ರಾಾ.ಪಂ, ಪಿಡಿಓ ತಿಮ್ಮನಗೌಡ, ಅಧ್ಯಕ್ಷ ಲಕ್ಷ್ಮಿಿ ವೀರೇಶ್ ಬುದ್ದಿನ್ನಿಿ, ಅತಿಥಿಗಳಾಗಿ ಬಸವಂತಪ್ಪ ಹಸಮಕಲ್, ವಿಎಸ್ಎಸ್ಎನ್ ಅಧ್ಯಕ್ಷ ಪಂಪಣ್ಣ ಜಾವೂರ್,ಬಸವರಾಜ್ ಕಂಬಾರ್, ಶರಣಪ್ಪ ಕರಡಿ, ಗ್ರಾಾ.ಪಂ, ಸದಸ್ಯರಾದ ಶಂಕ್ರಪ್ಪ ನಂದಿಹಳ್ಳಿಿ, ಅಮರೇಶ ತುಮಕೂರ್, ಹನುಮಂತ ರಾಂಪುರ್, ಹನುಮಂತ ಗೋಶಿ, ಗಂಗಮ್ಮ ಇಂದ್ವಾಾರ್, ವೀರೇಶ ನಂದಿಹಳ್ಳಿಿ, ಎಸ್ಡಿಎಮ್ಸಿ ಅಧ್ಯಕ್ಷ ರಮೇಶ್ ಮಡಿವಾಳ, ನಿಂಗಪ್ಪ ಕಂಬಳಿಹಾಳ ಸೇರಿ ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಮತ್ತು ಪಾಲಕರು ಭಾಗವಹಿಸಿದ್ದರು. ಇದೇ ವೇಳೆ ರಾಯಚೂರು ಜಿಲ್ಲಾಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆೆಯಾದ. ಗ್ರಾಾಮದ ಪತ್ರಕರ್ತ ಹನುಮಂತ ನಾಯಕ್ ಅವರನ್ನು ಗೌರವಿಸಲಾಯಿತು. ಸಹ ಶಿಕ್ಷಕ ಸೋಮಶೇಖರ್. ದೈಹಿಕ ಶಿಕ್ಷಕ ವೆಂಕಟೇಶ್ ರಾಥೋಡ್ ಮತ್ತು ರಾಚಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ : ಸಿದ್ದನಗೌಡ ತುರ್ವಿಹಾಳ

