ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ಮಕ್ಕಳ ವ್ಯಕ್ತಿಿತ್ವ ವಿಕಸನ, ಸರ್ವೋತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಸ್ಪೂರ್ತಿ ನೀಡುವಂತಿದೆ ಎಂದು ಜಿಲ್ಲಾಾ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರರೆಡ್ಡಿಿ ಹೇಳೀದರು.
ಮಟಮಾರಿ ವಲಯ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದ ಮೂಲಕ ಕೇವಲ ಪಠ್ಯದಲ್ಲಷ್ಟೇ ಅಲ್ಲದೆ ಕಲೆ, ನೃತ್ಯ, ನಾಟಕ, ಜನಪದ ಕಲೆಗಳಂತ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಮಕ್ಕಳ ಆತ್ಮವಿಶ್ವಾಾಸ ಹೆಚ್ಚಿಿಸುತ್ತದೆ ಎಂದರು.
ಕಾಂಗ್ರೆೆಸ್ ಮುಖಂಡ ಮಲ್ಲಿಕಾರ್ಜುನ್ ನಾಯಕ್ ಗೋನಾಳ್ ಮಾತನಾಡಿ, ಶಿಕ್ಷಕರು ತಮ್ಮ ಜ್ಞಾನವನ್ನೆೆಲ್ಲ ಮಕ್ಕಳಿಗೆ ದಾರೆ ಎರೆಯುತ್ತದ್ದು ಅದರ ಸದುಪಯೋಗಪಡಿಸಿಕೊಂಡು ವಿದ್ಯಾಾರ್ಥಿಗಳು ತಮ್ಮ ಮುಂದಿನ ಜೀವನ ಉಜ್ವಲ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಪ್ರಘಿ.ಕಾರ್ಯದರ್ಶಿ ಭೀಮೇಶ್ ನಾಯಕ್, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಲ್ಲೇಶ ನಾಯಕ್, ಸಿಆರ್ಸಿ ಆನಂದ್ ಕವಳಗೇರಿ, ಗ್ರಾಾಘಿ.ಪಂ ಅಧ್ಯಕ್ಷ ಎಂ. ವೆಂಕಟೇಶ್ ನಾಯಕ, ಅಧ್ಯಕ್ಷತೆ ವಹಿಸಿದ್ದ ರಮಾದೇವಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಟಮಾರಿ ವಲಯದಿಂದ ವರ್ಗಾವಣೆಗೊಂಡ ಪ್ರಾಾಥಮಿಕ ಹಾಗು ಪ್ರೌೌಢ ಶಾಲಾ ಶಿಕ್ಷಕರಿಗೆ ಹಾಗೂ ಬೇರೆಡೆಯಿಂದ ಮಟಮಾರಿ ವಲಯದ ಶಾಲೆಗಳಿಗೆ ವರ್ಗಾವಣೆಗೊಂಡು ಬಂದ ಶಿಕ್ಷಕರಿಗೆ ಸನ್ಮಾಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿಗಳಾದ ಕೊರೆನಲ್, ಕೋದಂಡರೆಡ್ಡಿಿ, ಮೋಹನ್ ವಿ.ಮಲ್ಲಪ್ಪ, ಇಸ್ಮಾಾಯಿಲ್, ಪ್ರಭಾವತಿ, ಪ್ರಸಾದ, ಬಸವರಾಜ್, ಜಗನ್ನಾಾಥ್, ಆನಂದ್, ಗ್ರಾಾಘಿ.ಪಂ ಸದಸ್ಯರಾದ ಸುರೇಶ್ ಅಂಗಡಿ, ಚೆನ್ನಬಸವ, ಶಿವರಾಜ್, ಶಿವಕುಮಾರ್, ಪಿ ಹನುಮೇಶ, ತಿರುಮಲ ರೆಡ್ಡಿಿ ದಳಪತಿ ಸೇರಿ ವಲಯದ ಶಿಕ್ಷಕರು, ವಿದ್ಯಾಾರ್ಥಿಗಳಿದ್ದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಸ್ಪೂರ್ತಿ – ಚಂದ್ರಶೇಖರ ರೆಡ್ಡಿ

