ಸುದ್ದಿಮೂಲ ವಾರ್ತೆ ಮುದಗಲ್, ಡಿ.09:
ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಲಿಂಗಸುಗೂರು ತಾಲೂಕು ದಂಡಾಧಿಕಾರಿ ಕು. ಸತ್ಯಮ್ಮ ದೇವಿ ಸೋಮವಾರ ಹೇಳಿದರು.
ಪಟ್ಟಣದ ಪರಿಮಳ ಗುರುಕುಲ ಆಂಗ್ಲ ಮಾಈ್ಯಮ ಶಾಲೆಯಲ್ಲಿ ಜರುಗಿದ 2025-26ನೇ ಸಾಲಿನ ಮುದಗಲ್ ಕ್ಲಸ್ಟರ್ ಮಟ್ಟದ ಪ್ರಾಾಥಮಿಕ ಮತ್ತು ಪ್ರೌೌಡಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು ಸರಕಾರದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಿಗೆ ಪ್ರತಿಭೆ ಹೊರಹಾಕಲು ಅನುಕೂಲವಾಗಿದೆ. ನಿರ್ಣಾಯಕರ ಪಾತ್ರ ಇದರಲ್ಲಿ ಬಹಳ ಮುಖ್ಯವಾಗಿದೆ. ಮಕ್ಕಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಇಂತಹ ಕಾರ್ಯಕ್ರಮಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಲಿಂಗಸುಗೂರು ತಾಲೂಕು ಶಿಕ್ಷಣಾಧಿಕಾರಿ ಸುಜಾತಾ ಹೂನೂರು ತಾಲೂಕು ಪ್ರೌೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ ಹಂದ್ರಾಾಳ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಗುರುಕುಲ ಶಾಲೆ ಮುಖ್ಯಶಿಕ್ಷಕ ಶೇಷಗಿರಿರಾವ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುದಗಲ್ ಕ್ಲಸ್ಟರ್ ಮಟ್ಟದ 16 ಪ್ರಾಾಥಮಿಕ ಮತ್ತು10 ಪ್ರೌೌಢಶಾಲಾ ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ಪ್ರೌೌಢಶಾಲೆ ಅಧ್ಯಕ್ಷ ಪ್ರಭುಲಿಂಗ ಗದ್ದಿ, ಮುಖ್ಯಶಿಕ್ಷಕರಾದ ಬಾಲಚಂದ್ರ ದಾಸರ, ಸಂಗಯ್ಯ ಹಿರೇಮಠ, ಶೋಭಾ ಹಟ್ಟಿಿ, ಅಕ್ಕಮಹಾದೇವಿ, ಕಾವೇರಿಬಾಯಿ, ಮಹಾಂತೇಶ ಹಳ್ಳೂರು, ದೈಹಿಕ ಶಿಕ್ಷಕ ರಮೇಶ ದೀಕ್ಷಿತ, ಸಿಆರ್ ಸಿ ರಾಮಚಂದ್ರಪ್ಪ ಢವಳೆ, ಎಂಡಿ ರಿಯಾಜ್, ಸಂಗಮೇಶ ಸರಗಣಾಚಾರಿ, ಮಲ್ಲಪ್ಪ ದೇವರಗುಡಿ, ಮಹಾಂತೇಶ ಬನ್ನಿಿಗೋಳ ಹಾಗೂ ಇತರರು ಇದ್ದರು.
ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ- ಸತ್ಯಮ್ಮದೇವಿ

