ಸುದ್ದಿಮೂಲ ವಾರ್ತೆ
ಕೆಜಿಎಫ್, ಆ. 2 : ತಾಲೂಕು ಆಡಳಿತ ಸೌಧದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆ ನಡೆಯಿತು.
ಬಳಿಕ ಮಾತನಾಡಿದ ಶಾಸಕಿ ರೂಪಕಲಾ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಕೆ ಜಿ ಎಫ್ ನಗರಸಭೆ ಮೈದಾನದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಸ್ವತಂತ್ರ ದಿನಾಚರಣೆಯಲ್ಲಿ ಕಾಟಾಚಾರಕ್ಕೆ ಪಾಲ್ಗೊಳ್ಳುವಿಕೆ ಎನ್ನುವ ರೀತಿಯಲ್ಲಿ ಆಗಬಾರದು. ಸ್ವತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡು ಪ್ರಾಣಗಳನ್ನು ತೆತ್ತ ವೀರರನ್ನು ನೆನೆಯವಂತಾಗಬೇಕು ಎಂದರು.
ಕೆಜಿಎಫ್ ತಾಲೂಕಿನಿಂದ ಸೇನೆಗೆ ಆಯ್ಕೆಯಾಗಿರುವ ಅಗ್ನಿವೀರರು ಮತ್ತು ಸೇನಾ ತರಬೇತಿ ನೀಡುವವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಕ್ಕಳಲ್ಲಿ ದೇಶಾಭಿಮಾನ ದೇಶಪ್ರೇಮ ತುಂಬಬೇಕು. ಅವರನ್ನು ನೋಡಿ ಮಕ್ಕಳು ಸಹ ಸೇನೆಗೆ ಸೇರುವಂತಹ ಸ್ಫೂರ್ತಿ ಬೆಳೆಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಸ್ವತಂತ್ರ ದಿನಾಚರಣೆಯ ಆಚರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸೂಚಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು. ಇಲಾಖೆವಾರು ಸಾಮಾಜಿಕ ಕಳಕಳಿಯ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬೆಳಗ್ಗೆ ಹಾಜರಾಗುವ ಶಾಲೆಯ ಮಕ್ಕಳಿಗೆ ಉಪಹಾರ ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಯ ಸಿಬ್ಬಂದಿಗಳು ಬೆಳಗ್ಗೆ 7 ಗಂಟೆಗೆ ಹಾಜರಾಗಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ ಓ ಶ್ರೀ ಮಂಜುನಾಥ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಂದ್ರಶೇಖರ್ ತಾಲೂಕು ಸರ್ಕಾರ ನೌಕರ ಸಂಘದ ಅಧ್ಯಕ್ಷರು ನರಸಿಂಹಮೂರ್ತಿ ನಗರಸಭೆ ಪೌರಾಯುಕ್ತರು. ಪವನ್ ಕುಮಾರ್. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.