ಸುದ್ದಿಮೂಲ ವಾರ್ತೆ
ಮಾಲೂರು, ಜೂ.15: ಬೆಂಗಳೂರು ನಿರ್ಮಾತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡುವುದಾಗಿ ಶಾಸಕ ಕೆ.ವೈ. ನಂಜೇಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಗುರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಿರ್ಮಾತರಾಗಿ ಎಲ್ಲಾ ಜಾತಿ ಧರ್ಮಗಳನ್ನು ಒಗ್ಗಟ್ಟಿ ನಿಂದ ಕೊಂಡೊಯ್ಯುವ ಮೂಲಕ ಈ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೆಂಪೇಗೌಡರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಸರ್ಕಾರ ಜೂನ್ 22 ರಂದು ಜಯಂತಿಯನ್ನು ಆಚರಣೆ ಮಾಡಲಾಗುತಿದೆ. ಅದರಂತೆ ತಾಲೂಕಿನಲ್ಲಿ ಸರ್ಕಾರಿ ಸುತ್ತೋಲೆಯಂತೆ ಇದೇ 22ರಂದು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.
ಅಂದು ತಾಲೂಕು ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಅರ್ಪಿಸಿ ನಂತರ ವಿವಿಧ ಕಲಾತಂಡಗಳ ಮೂಲಕಮೆರವಣಿಗೆ ಹೋಗಿ ಕೆಂಪೇಗೌಡ ವೃತ್ತದಲ್ಲಿನ ಕೆಂಪೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿನಂತರ ಕೆಂಪೇಗೌಡ ಭಾವ ಚಿತ್ರ ಗಳಿರುವ ಪಲ್ಲಕ್ಕಿ ಗಳು ವಿವಿಧ ಜಾನಪದ ಕಲಾತಂಡಗಳು ಪಟ್ಟಣದ ರಾಜಭೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು.
ನಾಡಪ್ರಭು ಕೆಂಪೇಗೌಡರ ಪಲ್ಲಕ್ಕಿ ಮೆರವಣಿಗೆಯಲ್ಲಿ 28 ಗ್ರಾಮ ಪಂಚಾಯಿತಿಗಳಿಂದ 14 ಪಲ್ಲಕ್ಕಿಗಳು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಜಾತಿ ಜನಾಂಗಗಳ ಸಂಘ ಸಂಸ್ಥೆಗಳು ಒಕ್ಕಲಿಗ ಮತ್ತು ಎಲ್ಲಾ ಸಮುದಾಯದ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ರಮೇಶ್, ತಾಪಂ ಇಒ ಮುನಿರಾಜು, ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಧರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ ಮುನೇಗೌಡ, ಪುರಸಭಾ ಸದಸ್ಯರುಗಳಾದ ಎ ರಾಜಪ್ಪ, ಪರಮೇಶ್, ಮುಖಂಡರಾದ ರಾಮೇಗೌಡ ಕೆ ಎಸ್ ವೆಂಕಟೇಶಗೌಡ, ಬೈಯಣ್ಣ ತಿಮ್ಮೇಗೌಡ ದಿನೇಶ್ ಗೌಡ ಹರೀಶ್ ಗೌಡ ಅನಂತರಾಜು ಶ್ರೀನಿವಾಸ್ ಮಿಂಡಳ್ಳಿ ಮುನೇಗೌಡ,ದೇವರಾಜ್ ಸೋಮಣ್ಣ ನಾಗೇಶ್ ಮುನಿರಾಜು ಲಕ್ಷ್ಮೀನಾರಾಯಣ್ ರಾಘವೇಂದ್ರ ಅಧಿಕಾರಿಗಳಾದ ಯೋಜನಾ ಪ್ರಧಿಕಾರದ ಕೃಷ್ಣಪ್ಪ ಬೆಸ್ಕಾo ಎಇ ಇಒ ಅನ್ಸರ್ ಬಾಷಾ ಪೊಲೀಸ್ ಪಿ ಎಸ್ ಐ ಧನಲಕ್ಷ್ಮಿ, ಜೆ ಇ ವಿಶ್ವನಾಥ್ ಪುರಸಭೆ ಸಿ ಎ ಓ ಮಂಜುನಾಥ್ ಖಜಾನೆ ಅಧಿಕಾರಿ ವರದರಾಜ್ ಇತರರು ಉಪಸ್ಥಿತರಿದ್ದರು.